ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ಸಿಡಿ ಪ್ರಕರಣ ಸಂಬಂಧ ಗೀತಾ ಮಿಶ್ರಾ ಎಂಬುವವರಿಂದ ರಾಜ್ಯಪಾಲ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಲಾಗಿದೆ. ಜನಪ್ರತಿನಿಧಿಯಾಗಿ ಕೆಲಸ ಕೊಡಿಸುವುದಾಗಿ ನಂಬಿಸಿ ಓರ್ವ ಹೆಣ್ಣುಮಗಳಿಗೆ ವಂಚನೆ ಮಾಡಿದ್ದಾರೆ. ಜನಪ್ರತಿನಿಧಿ ಕಾಯ್ದೆ ಉಲ್ಲಂಘಿಸಿ ಮೋಸ ಮಾಡಿದ್ದಾರೆ.
ಓದಿ-ಇನ್ನೂ 10 ಸಿಡಿ ಬಂದರೂ ಎದುರಿಸುತ್ತೇನೆ, ಷಡ್ಯಂತ್ರ ಮಾಡಿದವರನ್ನ ಜೈಲಿಗೆ ಕಳಿಸುತ್ತೇನೆ: ಜಾರಕಿಹೊಳಿ ಗುಡುಗು
2ನೇ ತಾರೀಖು ಮಾಧ್ಯಮಗಳಲ್ಲಿ ಬಂದ ವಿಡಿಯೋ ನೋಡಿದ್ದೇನೆ. ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿ ಸಾಕಷ್ಟು ಸದ್ದು ಮಾಡಿದೆ. ಈಗಾಗಲೇ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪ್ರಕರಣದ ತನಿಖೆಯನ್ನು ಎಸ್ಐಟಿ ನಡೆಸುತ್ತಿದೆ.