ಕರ್ನಾಟಕ

karnataka

ETV Bharat / city

ಕೊರೊನಾ ಭೀತಿಯಲ್ಲೇ ವೈದ್ಯರಿಗೆ, ನರ್ಸ್​ಗಳಿಗೆ ಗೌನ್ ಸಿದ್ಧಪಡಿಸುತ್ತಿರುವ ಗಾರ್ಮೆಂಟ್ಸ್ ನೌಕರರು - Garment employees preparing the gown

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೆ ದಿನೇ ಹೆಚ್ಚಾಗುತ್ತಿದೆ. ಅದನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 21 ದಿನಗಳ ಕಾಲ ಲಾಕ್​ಡೌನ್​ ಘೋಷಿಸಿವೆ.

Garment employees preparing the gown
ಗೌನ್​ ಸಿದ್ಧಪಡಿಸುತ್ತಿರುವ ಗಾರ್ಮೆಂಟ್​ ನೌಕರರು

By

Published : Mar 27, 2020, 6:31 PM IST

ಬೆಂಗಳೂರು: ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ರೆ ಇಲ್ಲೊಂದು ಕಂಪನಿ ವೈರಸ್​​​​ ಆತಂಕವೇ ಇಲ್ಲದೇ ವೈದ್ಯರು, ನರ್ಸ್​​ಗಳಿಗೆ ಗೌನ್​ ಸಿದ್ದಪಡಿಸುತ್ತಿದೆ.

ಸದ್ಯದ ಮಟ್ಟಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಗೌನ್​​​ ಜೊತೆಗೆ ವೈದ್ಯಕೀಯ ಸಲಕರಣೆ ಅವಶ್ಯಕತೆ ಹೆಚ್ಚಾಗಿದೆ. ಹೋಮ್ ಕ್ವಾರಂಟೈನ್ ಸಂಖ್ಯೆ ಹೆಚ್ಚಾದ ಪರಿಣಾಮ ಗೌನ್ ಮತ್ತು ಗ್ಲೌಸ್ ಅನಿವಾರ್ಯತೆ ಇದೆ. ಏಪ್ರಿಲ್ 14ರವರೆಗೂ ಗಾರ್ಮೆಂಟ್ಸ್​​​​​ಗಳಿಗೂ ಲಾಕ್​​​​​ಡೌನ್​​​ಗೆ ಸರ್ಕಾರ ಆದೇಶ ನೀಡಿದೆ.

ಖರೀದಿಸಿರುವ ಗೌನ್​​

ಬೆಂಗಳೂರಿನ ಟ್ರೈಯೋ ಗಾರ್ಮೆಂಟ್ಸ್​ನಲ್ಲಿ ಅನುಮತಿ ಮೇರೆಗೆ ಗೌನ್​​​ಗಳನ್ನು ಸಿದ್ದಪಡಿಸಲಾಗುತ್ತಿದೆ. ಪ್ರತಿ ವಾರಕ್ಕೆ ಸುಮಾರು 20,000 ಸಾವಿರದಷ್ಟು ಗೌನ್, ಗ್ಲೌಸ್​​, ಮುಖಗವಸುಗಳ ಅವಶ್ಯಕತೆ ಇದೆ. ಕಾರ್ಮಿಕರ ಕೊರತೆಯಿಂದ ಕೇವಲ 4,500 ತಯಾರಾಗ್ತಿವೆ.

ಗೌನ್ ಸಿದ್ಧಪಡಿಸುತ್ತಿರುವ ಗಾರ್ಮೆಂಟ್ಸ್ ನೌಕರರು

ಕೊರೊನಾ ಭೀತಿಗೆ ಕಾರ್ಮಿಕರ ಸಂಖ್ಯೆ ಕೂಡ 500 ರಿಂದ 120ಕ್ಕೆ ಇಳಿಕೆಯಾಗಿದೆ. ಅಲ್ಲದೇ ಇಂದು ಟ್ರೈಯೋ ಗಾರ್ಮೆಂಟ್ಸ್​​​​ಗೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕೂಡ ಭೇಟಿ ನೀಡಿದರು. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಸರ್ಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ ವಿತರಿಸಲು ಸತೀಶ್ ರೆಡ್ಡಿ ಅವರು ಗೌನ್​​ಗಳನ್ನು ಖರೀದಿಸಿದರು.

ABOUT THE AUTHOR

...view details