ಕರ್ನಾಟಕ

karnataka

ETV Bharat / city

ಸಿನಿಮಾದಿಂದ ಪ್ರೇರಣೆಗೊಂಡು ಗಾಂಜಾ ಸಾಗಾಟಕ್ಕೆ ಮಾಸ್ಟರ್ ಪ್ಲಾನ್: ಆರೋಪಿಗಳ ಬಂಧನ

ಅಕ್ರಮವಾಗಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಏಳು ಮಂದಿ ಆರೋಪಿಗಳನ್ನು ಬೇಗೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

Seven accused Arrest
ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಏಳು ಮಂದಿ ಆರೋಪಿಗಳ ಬಂಧನ

By

Published : Jul 24, 2022, 11:35 AM IST

ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾಗಿದ್ದ ತೆಲುಗಿನ ಸೂಪರ್ ಹಿಟ್ ಸಿನಿಮಾವೊಂದರಿಂದ ಪ್ರೇರಣೆಗೊಂಡು ಬೊಲೆರೋ ಗೂಡ್ಸ್ ವಾಹನದ ಕೆಳಭಾಗದಲ್ಲಿ ಪ್ರತ್ಯೇಕ ಬಾಕ್ಸ್ ಮಾಡಿಕೊಂಡು ಗಾಂಜಾ ಸಾಗಿಸುತ್ತಿದ್ದ 7 ಮಂದಿ ಆರೋಪಿಗಳನ್ನು ಬೇಗೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕುಣಿಗಲ್ ತಾಲೂಕಿನ ಕೆ.ಆರ್.ಅರವಿಂದ್, ತಾವರೆಕೆರೆ ನಿವಾಸಿ ಪವನ್ ಕುಮಾರ್, ಮಂಗಳೂರಿನ ಅಮ್ಜದ್ ಇತಿಯಾರ್ ಎಂಬಾತನನ್ನು ಅರೆಸ್ಟ್​ ಮಾಡಿದ ಬೇಗೂರು ಪೊಲೀಸರು, ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬೀದರ್‌ನ ಭಾಲ್ಕಿಯ ಪ್ರಭು, ಮಂಗಳೂರಿನ ನಜೀಮ್ ಮತ್ತು ಆಂಧ್ರಪ್ರದೇಶದ ಪತ್ತಿ ಸಾಯಿಚಂದ್ರ ಪ್ರಕಾಶ್ ಎಂಬುವರನ್ನು ಬಂಧಿಸಿದ್ದಾರೆ.


ಬಂಧಿತ ಏಳು ಮಂದಿ ಆರೋಪಿಗಳ ವಿರುದ್ಧ ಆಂಧ್ರಪ್ರದೇಶ, ಬೆಂಗಳೂರು ನಗರ, ಗ್ರಾಮಾಂತರದ ವಿವಿಧ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ, ಎನ್‌ಡಿಪಿಎಸ್ ಹಾಗೂ ದರೋಡೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳ ಅಡಿಯಲ್ಲಿ ಕೇಸ್​ ದಾಖಲಾಗಿವೆ. ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳು ಜೈಲಿಗೆ ಹೋದಾಗ ಪರಸ್ಪರ ಪರಿಚಯವಾಗಿ, ದೊಡ್ಡ ಮಟ್ಟದಲ್ಲಿ ಮಾದಕ ವಸ್ತು ಮಾರಾಟ ಜಾಲ ಆರಂಭಿಸಿದ್ದರು.

ಆರೋಪಿಗಳ ಪೈಕಿ ಅರವಿಂದ್, ಪವನ್, ಅಮ್ಜದ್ ಜುಲೈ 15ರಂದು ಬೇಗೂರು ಠಾಣಾ ವ್ಯಾಪ್ತಿಯ ದೇವರಚಿಕ್ಕನಹಳ್ಳಿಯ ಆರ್‌ಟಿಒ ಕಚೇರಿಯ ಹುಣಸೆಮರದ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು. ಮಾಹಿತಿ ತಿಳಿದ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ 6ಕೆ.ಜಿ 380 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದರು. ಆರೋಪಿಗಳ ವಿಚಾರಣೆ ವೇಳೆ ಉಳಿದ ಆರೋಪಿಗಳ ಕೃತ್ಯ ಬಯಲಾಗಿತ್ತು.

ಸದ್ಯಕ್ಕೆ ಏಳೂ ಜನ ಆರೋಪಿಗಳನ್ನು ಬಂಧಿಸಿರುವ ಬೇಗೂರು ಠಾಣಾ ಪೊಲೀಸರು ಗೂಡ್ಸ್ ವಾಹನದ ಲಗೇಜ್ ಇಡುವ ಪ್ಲಾಟ್‌ಫಾರಂ ಕೆಳಭಾಗದಲ್ಲಿ ದೊಡ್ಡ ಬಾಕ್ಸ್ ಮಾಡಿಕೊಂಡು ಅಡಗಿಸಿಟ್ಟಿದ್ದ ಸರಿಸುಮಾರು 1 ಕೋಟಿ ಮೌಲ್ಯದ 175 ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಅನ್ನಭಾಗ್ಯ ಅಕ್ಕಿ ಕಳ್ಳಸಾಗಾಟದ ಜಾಲ ಪತ್ತೆ: ರಾತ್ರೋ ರಾತ್ರಿ‌ ಶೆಡ್ ಮೇಲೆ ಶಾಸಕ ಗಣೇಶ್ ದಾಳಿ

ABOUT THE AUTHOR

...view details