ಕರ್ನಾಟಕ

karnataka

ETV Bharat / city

ಬೆಂಗಳೂರು: ಹಣದಾಸೆಗೆ ಸ್ನೇಹಿತನನ್ನೇ ಅಪಹರಿಸಿದ್ದ ಗ್ಯಾಂಗ್ ಅರೆಸ್ಟ್‌ - ಹಣದಾಸೆಗಾಗಿ ಸ್ನೇಹಿತನ ಅಪಹರಣ ಸುದ್ದಿ

ಖಾಸಗಿ ಕಾಲೇಜಿನಲ್ಲಿ ಬಿಸಿಎ(BCA) ವ್ಯಾಸಂಗ ಮಾಡುತ್ತಿದ್ದ ಅಭಿಷೇಕ್​ ಎಂಬಾತನನ್ನು ಆತನ ಸ್ನೇಹಿತರೇ ಅಪಹರಿಸಿ, ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ ಆರೋಪದಡಿ ಐವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಹಣದಾಸೆಗಾಗಿ ಸ್ನೇಹಿತನನ್ನೇ ಅಪಹರಣ ಮಾಡಿದ್ದ ಗ್ಯಾಂಗ್ ಅಂದರ್​
ಹಣದಾಸೆಗಾಗಿ ಸ್ನೇಹಿತನ ಅಪಹರಣ

By

Published : Nov 22, 2021, 5:37 PM IST

ಬೆಂಗಳೂರು: ಹಣದಾಸೆಗಾಗಿ ಸ್ನೇಹಿತನನ್ನೇ ಕಾರಿನಲ್ಲಿ ಅಪಹರಿಸಿ, ಹಲ್ಲೆಗೈದು, ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ ಆರೋಪದಡಿ ಐವರು ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಪ್ರಜ್ವಲ್, ಅನಿಲ್ ಕುಮಾರ್, ದೀಪು ಸೇರಿ ಐವರು ಬಂಧಿತರು. ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಅಭಿಷೇಕ್, ಕಾಲೇಜು‌ ಮುಗಿದ ರಿಯಲ್‌ ಎಸ್ಟೇಟ್‌ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಈತನ ತಂದೆ ಆಟೋ ಚಾಲಕ‌ರಾಗಿದ್ದು ನಾಗರಬಾವಿ ಬಳಿಯ ಪಾಪರೆಡ್ಡಿಪಾಳ್ಯ ಬಳಿ ವಾಸವಾಗಿದ್ದರು.

ರಿಯಲ್‌ ಎಸ್ಟೇಟ್‌ ಕೆಲಸ ಮಾಡುವ ಕಚೇರಿಯಲ್ಲಿ ನಿರಂತರ ಹಣದ ವಹಿವಾಟು ನಡೆಸುವ ಸಲುವಾಗಿ ಅಭಿಷೇಕ್​ ಬಳಿ ಯಾವಾಗಲೂ ನಗದು ಇರುತ್ತಿತ್ತು. ಇದನ್ನು ಕಂಡ ಸ್ನೇಹಿತರು ಅಭಿಷೇಕ್‌ ಶ್ರೀಮಂತ ಎಂದು ಭಾವಿಸಿ ಕಿಡ್ನ್ಯಾಪ್ ಮಾಡಲು ಹೊಂಚು ಹಾಕಿದ್ದಾರೆ. ಅಪಹರಣಕ್ಕಾಗಿ ನೆರವು ಪಡೆಯಲು ಕಾಲ್ ಸೆಂಟರ್​ನಲ್ಲಿ ಕೆಲಸ‌ ಮಾಡುತ್ತಿದ್ದ ಪ್ರಜ್ವಲ್, ಅನಿಲ್ ಕುಮಾರ್ ಹಾಗೂ ದೀಪು ಎಂಬುವರಿಗೆ ಮಾಹಿತಿ ನೀಡಿದ್ದಾರೆ.

ಇದರಂತೆ ನ.18ರಂದು ಅಂದುಕೊಂಡಂತೆ ಮುಸುಕುವೇಷ‌ ಧರಿಸಿ ಕಾರಿನಲ್ಲಿ ಅಭಿಷೇಕ್​ನನ್ನು ಅಪಹರಿಸಿದ್ದಾರೆ. ನಂತರ ಡಾಬಸ್ ಪೇಟೆ ಬಳಿ ಹೋಗಿ ಅಲ್ಲಿಂದ ದೇವನಹಳ್ಳಿಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಭಿಷೇಕ್ ತಂದೆಗೆ ಕರೆ ಮಾಡಿ ₹1 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಕೂಡ ಮಾಡಿದ್ದಾರೆ. ಅಂತಿಮವಾಗಿ ಅಭಿಷೇಕ್ ನಿಂದ ₹70 ಸಾವಿರ ಹಣ ಪಡೆದಿದ್ದರು. ಜೊತೆಗೆ, ಅಪಹರಣ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರು.

ಈ ಸಂಬಂಧ ನೀಡಿದ‌ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:PUBG ಆಟದಿಂದ ಪ್ರಾಣಕ್ಕೆ ಕುತ್ತು.. ರೈಲ್ವೆ ಹಳಿ ಮೇಲೆ ಕುಳಿತು ಪಬ್​ಜಿ ಆಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ದುರ್ಮರಣ..

ABOUT THE AUTHOR

...view details