ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಕಟ್ಟುನಿಟ್ಟಿನ ನಿಯಮಗಳು ಜಾರಿಯಾದ ಬಳಿಕ ಶವಸಂಸ್ಕಾರದಲ್ಲಿ 20 ಜನರಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಇದೀಗ ಇದನ್ನು ತಿದ್ದುಪಡಿ ಮಾಡಿ, ಇಂದಿನಿಂದ ಶವಸಂಸ್ಕಾರದಲ್ಲಿ ಐದು ಜನರಿಗೆ ಮಾತ್ರ ಭಾಗಿಯಾಗಲು ಅವಕಾಶ ನೀಡಿ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ಸರ್ಕಾರದಿಂದ ಹೊಸ ಆದೇಶ.. ಶವಸಂಸ್ಕಾರಕ್ಕೆ ಐದು ಜನರಿಗೆ ಮಾತ್ರ ಅವಕಾಶ! - ಕರ್ನಾಟಕದಲ್ಲಿ ಕೊರೊನಾ ಅಪ್ಡೇಟ್
ಕೊರೊನಾ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಶವ ಸಂಸ್ಕಾರದಲ್ಲಿ ಇಂದಿನಿಂದ ಐದು ಜನ ಮಾತ್ರ ಭಾಗಿಯಾಗಬೇಕೆಂದು ಆದೇಶಿಸಿದೆ.
ಶವಸಂಸ್ಕಾರ
ಕೋವಿಡ್ ನಿಯಮ ಪಾಲಿಸಿಕೊಂಡು ಐದು ಜನ ಮಾತ್ರ ಶವಸಂಸ್ಕಾರದಲ್ಲಿ ಭಾಗಿಯಾಗಬೇಕು ಎಂದು ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಯಾದ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಸರ್ಕಾರ ದಿನದಿಂದ ದಿನಕ್ಕೆ ಕಟ್ಟುನಿಟ್ಟಿನ ಕ್ರಮಗಳು ಜಾರಿ ಮಾಡುತ್ತಾ ಬರುತ್ತಿದ್ದು, ಈಗಾಗಲೇ ರಾಜ್ಯದಲ್ಲಿ ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ಜಾರಿಯಲ್ಲಿದೆ.