ಕರ್ನಾಟಕ

karnataka

ETV Bharat / city

ದೊಡ್ಡಬಳ್ಳಾಪುರ ಹಲಸಿನ ಹಣ್ಣಿಗೆ ಆಂಧ್ರದಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್​ - Doddaballapur jackfruit

ಹಸಿದು ಹಲಸು ತಿನ್ನು ಉಂಡು ಮಾವು ತಿನ್ನು ಎಂಬ ಗಾದೆ ಮಾತಿನಂತೆ ಹಲಸು ರುಚಿಗೆ ಮನಸೋಲದವರಿಲ್ಲ. ಬೇಸಿಗೆ ಮತ್ತು ಮಳೆಗಾಲದ ಪ್ರಾರಂಭದಲ್ಲಿ ಹಲಸಿನ ಸುಗ್ಗಿ ಆರಂಭವಾಗುತ್ತದೆ. ಇದೀಗ ದೊಡ್ಡಬಳ್ಳಾಪುರದ ಗೌರಿಬಿದನೂರು ರಸ್ತೆ ಬದಿ ಮಾರಾಟಕ್ಕೆ ಇಟ್ಟಿರುವ ಹಣ್ಣಿನ ರಾಶಿಗಳು ಗ್ರಾಹಕರನ್ನ ಸೆಳೆಯುತ್ತಿವೆ.

ಹಲಸಿನ ಹಣ್ಣು
ಹಲಸಿನ ಹಣ್ಣು

By

Published : May 28, 2022, 2:08 PM IST

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ದೊಡ್ಡಬಳ್ಳಾಪುರದಲ್ಲಿ ಬೆಳೆದ ಹಲಸಿನ ಹಣ್ಣಿಗೆ ಆಂಧ್ರಪ್ರದೇಶದಲ್ಲಿ ಭಾರಿ ಬೇಡಿಕೆ ಇದೆ. ಕೆಂಪು, ಕೇಸರಿ ತೊಳೆಯ ಹಲಸಿಗೆ ಫುಲ್ ಡಿಮ್ಯಾಂಡ್ ಇದ್ದು, ದೊಡ್ಡಬಳ್ಳಾಪುರದ ಗೌರಿಬಿದನೂರು ರಸ್ತೆ ಬದಿ ಮಾರಾಟಕ್ಕೆ ಇಟ್ಟಿರುವ ಹಣ್ಣಿನ ರಾಶಿಗಳು ಗ್ರಾಹಕರನ್ನ ಸೆಳೆಯುತ್ತಿವೆ.

ಹಸಿದು ಹಲಸು ತಿನ್ನು ಉಂಡು ಮಾವು ತಿನ್ನು ಎಂಬ ಗಾದೆ ಮಾತಿನಂತೆ ಹಲಸು ರುಚಿಗೆ ಮನಸೋಲದವರಿಲ್ಲ. ಬೇಸಿಗೆ ಮತ್ತು ಮಳೆಗಾಲದ ಪ್ರಾರಂಭದಲ್ಲಿ ಹಲಸಿನ ಸುಗ್ಗಿ ಆರಂಭವಾಗುತ್ತದೆ. ರಸ್ತೆಯ ಬದಿ, ಹೊಲದ ನಡುವೆ, ಮನೆಯ ಹಿಂಭಾಗದ ಹಿತ್ತಲಲ್ಲಿ, ತೋಟದ ಅಂಚಿನಲ್ಲಿ ಹಲಸಿನ ಮರದ ಮೇಲೆ ಜೋತಾಡುವ ಕಾಯಿಗಳೇ ಕಣ್ಣಿಗೆ ಬೀಳುತ್ತವೆ.

ಹಲಸಿನ ಹಣ್ಣಿಗೆ ಹೆಚ್ಚಿದ ಬೇಡಿಕೆ

ದೊಡ್ಡಬಳ್ಳಾಪುರ ತಾಲೂಕಿನ ಮಣ್ಣು ಹಲಸು ಬೆಳೆಗೆ ಸೂಕ್ತವಾಗಿದೆ. ತಾಲೂಕಿನ ಬಹುತೇಕ ರೈತರು ತಮ್ಮ ಹೊಲಗಳಲ್ಲಿ ಹಲಸು ಬೆಳೆಯುತ್ತಾರೆ. ಅದರಲ್ಲೂ, ತೂಬಗೆರೆ ಹಲಸು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ತಾಲೂಕಿನ ವಿವಿಧ ಹಳ್ಳಿಗಳಿಂದ ಹಣ್ಣು ಸಂಗ್ರಹಿಸುವ ಮಾರಾಟಗಾರರು, ನಗರದ ಅಂಬೇಡ್ಕರ್ ವೃತ್ತದ ಗೌರಿಬಿದನೂರು ರಸ್ತೆಯಲ್ಲಿ ಮಾರಾಟ ಮಾಡುತ್ತಾರೆ. ಒಂದು ಹಣ್ಣಿಗೆ 50 ರೂಪಾಯಿಂದ 200 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಒಂದು ರಾಶಿ 3 ಸಾವಿರದಿಂದ 5 ಸಾವಿರವರೆಗೂ ಮಾರಾಟವಾಗುತ್ತದೆ.

ದೊಡ್ಡಬಳ್ಳಾಪುರದ ಹಲಸು ವಿಶೇಷವಾಗಿ ಆಂಧ್ರಪ್ರದೇಶಕ್ಕೆ ರಫ್ತು ಆಗುತ್ತದೆ, ಲೋಡ್​ಗಟ್ಟಲೆ ಹಣ್ಣು ಪ್ರತಿದಿನ ದೊಡ್ಡಬಳ್ಳಾಪುರದಿಂದ ಆಂಧ್ರಪ್ರದೇಶಕ್ಕೆ ಹೋಗುತ್ತದೆ. ಹೈದರಾಬಾದ್, ಧರ್ಮಾವರಂ, ತಿರುಪತಿಯಲ್ಲಿ ಸಹ ಇಲ್ಲಿನ ಹಣ್ಣಿಗೆ ಸಾಕಷ್ಟು ಬೇಡಿಕೆ ಇದೆ. ಕೆಂಪು ಮತ್ತು ಕೇಸರಿ ಬಣ್ಣದ ತೊಳೆಯ ಹಣ್ಣಿಗೆ ಹೆಚ್ಚಿನ ಡಿಮ್ಯಾಂಡ್ ಇದ್ದು, ಬೆಂಗಳೂರಿಗೂ ಇಲ್ಲಿಂದಲೇ ಸರಬರಾಜಗುತ್ತದೆ.

ಇದನ್ನೂ ಓದಿ:ಮಂಗಳೂರು: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ವಾಪಸ್ ಕಳುಹಿಸಿದ ಕಾಲೇಜ್​ ಪ್ರಿನ್ಸಿಪಾಲ್​

ABOUT THE AUTHOR

...view details