ಬೆಂಗಳೂರು: ಸೆಪ್ಟೆಂಬರ್ 28 ಅನ್ನು ವಿಶ್ವ ರೇಬೀಸ್ ದಿನವನ್ನಾಗಿ ಆಚರಿಸಲಾಗುತ್ತದೆ. ರಾಜ್ಯ ಸರ್ಕಾರ ಕೂಡ ಇಂದಿನಿಂದ ಮೂರು ದಿನಗಳ ಕಾಲ ರೋಗಕ್ಕೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದೆ.
ರೇಬೀಸ್ ರೋಗ:
ರೇಬೀಸ್‌ನಿಂದ ನರಳುತ್ತಿರುವ ಪ್ರಾಣಿಯು ಕಚ್ಚಿದಾಗ ಅಥವಾ ನೆಕ್ಕಿದಾಗ ಶರೀರದೊಳಗೆ ರೇಬೀಸ್ ವೈರಾಣು ಪ್ರವೇಶಿಸಿ, ರೇಬೀಸ್ ರೋಗ ಉಂಟಾಗುತ್ತದೆ. ರೇಬೀಸ್‌ನಿಂದ ನರಳುತ್ತಿರುವ ಪ್ರಾಣಿಯ ಜೊಲ್ಲಿನಿಂದ ರೇಬೀಸ್ ವೈರಾಣು ಇತರ ಪ್ರಾಣಿಗಳಿಗೆ ಹರಡುತ್ತದೆ. ಭಾರತದಲ್ಲಿ ಬಹುತೇಕ ಜನರಿಗೆ ಹುಚ್ಚುನಾಯಿ ಕಡಿತದಿಂದ ರೇಬೀಸ್ ಹರಡುತ್ತದೆ.
ಲಕ್ಷಣಗಳು
- ಉಗ್ರ ಹುಚ್ಚು:ಜೊಲ್ಲು ಸುರಿಸುವಿಕೆ, ಎಲ್ಲರ ಮೇಲೆ ಏರಿಹೋಗಿ ಕಚ್ಚಲು ಪ್ರಯತ್ನಿಸುವುದು, ಕರೆಗೆ ಪ್ರತಿಕ್ರಿಯೆ ನೀಡದಿರುವುದು, ಕ್ರಮೇಣ ಧ್ವನಿಯಲ್ಲಿ ವ್ಯತ್ಯಾಸ, ಗೊಂದಲ ಪಡುವುದು, ಪಾರ್ಶ್ವವಾಯು ಕಾಣಿಸಿ 8-10 ದಿನಗಳಲ್ಲಿ ಸಾವು ಸಂಭವಿಸುವುದು.
- ಮಂದ ಹುಚ್ಚು:ಮೂಲೆಯಲ್ಲಿ ಮುದುಡಿ ಕೂತಿರುವುದು, ಊಟ ಮಾಡದಿರುವುದು, ಗಂಟಲು ಊದುವಿಕೆ, ತೆರೆದ ಬಾಯಿಯನ್ನು ಮುಚ್ಚಲಾಗದೇ ಸಾವನ್ನಪ್ಪುವುದು.