ಕರ್ನಾಟಕ

karnataka

ETV Bharat / city

ಖೇಲೋ ಇಂಡಿಯಾ ಕ್ರೀಡಾಪಟುಗಳಿಗೆ ಉಚಿತ ಪ್ಯಾರಾಸೈಲಿಂಗ್

ಜಕ್ಕೂರಿನಲ್ಲಿರುವ ವೈಮಾನಿಕ ತರಬೇತಿ ಶಾಲೆಯ ಸಹಯೋಗದಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ವತಿಯಿಂದ ಕ್ರೀಡಾಪಟುಗಳಿಗೆ ಉಚಿತ ಪ್ಯಾರಾಸೈಲಿಂಗ್ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಖೇಲೋ ಇಂಡಿಯಾ ಪ್ರಚಾರಕ್ಕೆ ವಿಶೇಷ ವಿಮಾನಗಳನ್ನು ಬಳಸಿಕೊಳ್ಳಲಾಗಿದೆ.

free-parasailing-at-jakkuru-aerodrome-jakkur
ಖೇಲೋ ಇಂಡಿಯಾ ಕ್ರೀಡಾಪಟುಗಳಿಗೆ ವೈಮಾನಿಕ ತರಬೇತಿ ಶಾಲೆಯಿಂದ ಉಚಿತ ಪ್ಯಾರಾ ಸೈಲಿಂಗ್; ವಿಶೇಷ ವಿಮಾನದಿಂದ ಕ್ರೀಡಾಕೂಟಕ್ಕೆ ಪ್ರಚಾರ

By

Published : May 2, 2022, 9:05 AM IST

Updated : May 3, 2022, 7:17 AM IST

ಬೆಂಗಳೂರು: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ವತಿಯಿಂದ ಕ್ರೀಡಾಪಟುಗಳಿಗೆ ಜಕ್ಕೂರು ವಿಮಾನ ನಿಲ್ದಾಣದಲ್ಲಿ ಪ್ಯಾರಾ ಸೈಲಿಂಗ್ ಹಮ್ಮಿಕೊಳ್ಳಲಾಗಿದ್ದು ಮಂಗಳವಾರದವರೆಗೆ ಉಚಿತವಾಗಿ ನಡೆಯಲಿದೆ. ಈವರೆಗೆ ಸುಮಾರು 500ಕ್ಕೂ ಹೆಚ್ಚು ಕ್ರೀಡಾಪಟುಗಳು ಆಕಾಶದಲ್ಲಿ ಹಾರುವ ಅನುಭವವನ್ನು ಪಡೆದಿದ್ದು ತಮ್ಮ ಸಂತಸವನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡರು.

ಖೇಲೋ ಇಂಡಿಯಾ ಕ್ರೀಡಾಕೂಟದ ಪ್ರಚಾರಕ್ಕೆ ಜಕ್ಕೂರು ವಿಮಾನ ನಿಲ್ದಾಣದ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಸಸ್ನಾ 172 ಮಾದರಿಯ ಎರಡು ವಿಮಾನಗಳನ್ನು ಬಳಸಿಕೊಳ್ಳಲಾಗಿದೆ. ಸಿಟಿ ರೌಂಡ್ಸ್ ಹೊಡೆಸುವ ಮೂಲಕ ಕ್ರೀಡಾಕೂಟಕ್ಕೆ ಪ್ರಚಾರ ಕೂಡ ನೀಡಲಾಗುತ್ತಿದೆ.

ವಿಶೇಷ ವಿಮಾನದಿಂದ ಕ್ರೀಡಾಕೂಟಕ್ಕೆ ಪ್ರಚಾರ

ಪದಕ ವಿಜೇತ ಕ್ರೀಡಾಪಟುಗಳಿಗೆ ಪುಷ್ಪನಮನ: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ಪ್ರಚಾರಕ್ಕೆ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಕೈಜೋಡಿಸಿದೆ. ಎರಡು ವಿಮಾನಗಳ ಮೂಲಕ ಪ್ರಚಾರ ಆರಂಭಿಸಿದೆ. ಪ್ರತಿದಿನ ಸಿಟಿರೌಂಡ್ಸ್ ನಡೆಸಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ವಿಮಾನದ ಮೂಲಕ ಪುಷ್ಪನಮನ ಸಲ್ಲಿಸಲಾಗಿದೆ. ಜೊತೆಗೆ ಸಮಾರೋಪ ಸಮಾರಂಭದ ದಿನ ವಿಮಾನದ ಮೂಲಕ ಪುಷ್ಪ ನಮನ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಕ್ಕೂರು ವೈಮಾನಿಕ ತರಬೇತಿ ಶಾಲೆಯ ಕಾರ್ಯದರ್ಶಿ ಬಸವರೆಡ್ಡಪ್ಪ ರೋಣದ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

1949 ರಲ್ಲಿ ವೈಮಾನಿಕ ತರಬೇತಿ ಶಾಲೆಯ ಸ್ಥಾಪನೆ: ರಾಜಧಾನಿಯ ಜಕ್ಕೂರಿನಲ್ಲಿರುವ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯು 1949 ರಲ್ಲಿ ಸ್ಥಾಪಿಸಲಾಗಿದೆ. ಇದು ದೇಶದ ಅತ್ಯಂತ ಹಳೆಯ ಹಾರಾಟ ತರಬೇತಿ ಶಾಲೆಗಳಲ್ಲಿ ಒಂದಾಗಿದೆ. 70 ವರ್ಷಗಳ ಇತಿಹಾಸ ಹೊಂದಿರುವ ಅಪರೂಪದ ಸಂಸ್ಥೆಯಾಗಿದೆ. ಈ ಶಾಲೆಯನ್ನು ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಉದ್ಘಾಟಿಸಿದ್ದರು. ಸರ್ಕಾರಿ ವೈಮಾನಿಕ ತರಬೇತಿ ಶಾಲೆಯು ಒಟ್ಟು 214 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ.

ವಿಶೇಷ ವಿಮಾನದಿಂದ ಕ್ರೀಡಾಕೂಟಕ್ಕೆ ಪ್ರಚಾರ

ಏರೋಸ್ಪೇಸ್ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶ: ಸರ್ಕಾರಿ ವೈಮಾನಿಕ ತರಬೇತಿ ಶಾಲೆಯು 1 ಸನ್ನಾ 152, 2 ಸನ್ನಾ 172, 1 ಟೆಕ್ನಾಮ್ P2010 (ಸಿಂಗಲ್ ಇಂಜಿನ್) ಮತ್ತು 1 ಟೆಕ್ನಾಮ್ P2006T (ಮಲ್ಟಿ ಎಂಜಿನ್) ಒಟ್ಟು 5 ವಿಮಾನಗಳನ್ನು ಹೊಂದಿದೆ. ಸಾರ್ವಜನಿಕರಿಗೆ ಏರೋಸ್ಪೇಸ್ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಜನರಲ್ ತಿಮ್ಮಯ್ಯ ನ್ಯಾಷನಲ್ ಅಡ್ಡೆಂಚರ್ ಅಕಾಡೆಮಿ ಸಹಯೋಗದಲ್ಲಿ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯಲ್ಲಿ ಪ್ಯಾರಾ ಸೈಲಿಂಗ್ ಚಟುವಟಿಕೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ. ಈ ವರ್ಷದಿಂದ ಸುಮಾರು 100 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶವನ್ನು ಸರ್ಕಾರವು ಹೊಂದಿದೆ ಎಂದು ಕಾರ್ಯದರ್ಶಿ ಬಸವರಡ್ಡೆಪ್ಪ ರೋಣದ ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಪಂಜಾಬ್ ವಿಶ್ವವಿದ್ಯಾಲಯದ ಕ್ರೀಡಾಪಟುಗಳು ಪ್ಯಾರಾ ಸೈಲಿಂಗ್‌ನಲ್ಲಿ ಭಾಗವಹಿಸಿದ್ದರು. ಆರ್ಚರಿ ವಿಭಾಗದ ಕ್ರೀಡಾಪಟುಗಳಾದ ಅಸ್ಮತ್, ಸಾಗರ್ ಕುಮಾವತ್, ಮೋನಿಕಾ ಸಿಂಗ್ ಮಾತನಾಡಿ, ಪ್ಯಾರಾ ಸೈಲಿಂಗ್ ಉತ್ತಮ ಅನುಭವ ನೀಡಿದೆ. ಸಂಘಟಕರು ನಮಗೆ ಎಲ್ಲ ರೀತಿಯಲ್ಲಿಯೂ ಉತ್ತಮ ವ್ಯವಸ್ಥೆ ಮಾಡಿದ್ದಾರೆ ಎಂದರು.

ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲಿ ಗುಡುಗು, ಗಾಳಿಸಹಿತ ಜೋರು ಮಳೆ: ಜನಜೀವನ ಅಸ್ತವ್ಯಸ್ತ

Last Updated : May 3, 2022, 7:17 AM IST

ABOUT THE AUTHOR

...view details