ಕರ್ನಾಟಕ

karnataka

ETV Bharat / city

ಸ್ಟಾರ್ ಹೋಮಿಯೋಪತಿ ಸಂಸ್ಥೆಯಿಂದ ಪೌರಕಾರ್ಮಿಕರಿಗೆ ಉಚಿತ ಇಮ್ಯೂನಿಟಿ ಬೂಸ್ಟರ್ ಕಿಟ್ - ಬೆಂಗಳೂರು ಸುದ್ದಿ

ಉಚಿತವಾಗಿ ಬೂಸ್ಟರ್ ಕೊಡುವ ಕಾರ್ಯಕ್ರಮವನ್ನ ಸ್ಟಾರ್ ಹೋಮಿಯೋಪತಿ ಸಂಸ್ಥೆ ಜಯನಗರದ 4ನೇ ಬ್ಲಾಕ್‍ನಲ್ಲಿ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಚಾಲನೆ ನೀಡಿದರು..

Free Immunity Bluester Kit Distribution from Star Homeopathy
ಸ್ಟಾರ್ ಹೋಮಿಯೋಪತಿ ಸಂಸ್ಥೆಯಿಂದ ಪೌರಕಾರ್ಮಿಕರಿಗೆ ಉಚಿತ ಇಮ್ಯೂನಿಟಿ ಬ್ಲೂಸ್ಟರ್ ಕಿಟ್ ವಿತರಣೆ

By

Published : Jul 10, 2020, 9:53 PM IST

ಬೆಂಗಳೂರು :ಕೊರೊನಾ ಸೋಂಕು ಹರಡುವುದನ್ನ ನಿಯಂತ್ರಿಸುವ ಹಾಗೂ ರೋಗನಿರೋಧ ಶಕ್ತಿ ಹೆಚ್ಚಿಸಿಕೊಳ್ಳುವ ಸಲುವಾಗಿ ಸ್ಟಾರ್ ಹೋಮಿಯೋಪತಿ ಸಂಸ್ಥೆಯು ಸ್ಟಾರ್ ಇಮ್ಯೂನಿಟಿ ಕ್ಲಿನಿಕ್ ಆರಂಭಿಸಿದೆ. ಇಂದು ಪೌರಕಾರ್ಮಿಕರು, ಸಾರ್ವಜನಿಕರು ಹಾಗೂ ಬಿಬಿಎಂಪಿ ಸಿಬ್ಬಂದಿಗೆ ಈ ಇಮ್ಯೂನಿಟಿ ಬೂಸ್ಟರ್ ಕಿಟ್‌ನ ಉಚಿತವಾಗಿ ವಿತರಿಸಲಾಯಿತು.

ಸ್ಟಾರ್ ಹೋಮಿಯೋಪತಿ ಸಂಸ್ಥೆಯಿಂದ ಪೌರಕಾರ್ಮಿಕರಿಗೆ ಉಚಿತ ಇಮ್ಯೂನಿಟಿ ಬೂಸ್ಟರ್ ಕಿಟ್ ವಿತರಣೆ

ಉಚಿತವಾಗಿ ಬೂಸ್ಟರ್ ಕೊಡುವ ಕಾರ್ಯಕ್ರಮವನ್ನ ಸ್ಟಾರ್ ಹೋಮಿಯೋಪತಿ ಸಂಸ್ಥೆ ಜಯನಗರದ 4ನೇ ಬ್ಲಾಕ್‍ನಲ್ಲಿ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸ್ಟಾರ್ ಹೋಮಿಯೋಪತಿಯವರು ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುರ್ವೇದ ಔಷಧಿಯನ್ನ ಉಚಿತವಾಗಿ ಕೊಡುತ್ತಿದ್ದಾರೆ. ಶಕ್ತಿಯುತ ಔಷಧಿಯನ್ನ ಪೌರಕಾರ್ಮಿಕರು, ಸಾರ್ವಜನಿಕರು ನಿತ್ಯ ಸೇವಿಸಿ, ಅವರ ಆರೋಗ್ಯವನ್ನು ಅವರೇ ಕಾಪಾಡಿಕೊಳ್ಳಬೇಕಾಗಿದೆ ಎಂದರು.

ಸ್ಟಾರ್ ಹೋಮಿಯೋಪತಿ ಸಂಸ್ಥೆಯಿಂದ ಪೌರಕಾರ್ಮಿಕರಿಗೆ ಉಚಿತ ಇಮ್ಯೂನಿಟಿ ಬ್ಲೂಸ್ಟರ್ ಕಿಟ್ ವಿತರಣೆ

ಭಾರತದ ಸ್ಟಾರ್ ಆರೋಗ್ಯ ವಿಜ್ಞಾನ ಸಂಸ್ಥೆಯ ಆಯುರ್ವೇದದ ಅಂಗ ಸಂಸ್ಥೆಯಾಗಿರುವ ಸ್ಟಾರ್ ಹೋಮಿಯೋಪತಿಯವರು, ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಹಲವಾರು ಮಳಿಗೆಗಳನ್ನ ತೆರೆದಿದ್ದಾರೆ.

ABOUT THE AUTHOR

...view details