ಬೆಂಗಳೂರು: ಉಕ್ರೇನ್ನಿಂದ ಭಾರತಕ್ಕೆ ಆಗಮಿಸಿದ ಕನ್ನಡಿಗರನ್ನು ವಿಮಾನದ ಮೂಲಕ ಬೆಂಗಳೂರಿಗೆ ಉಚಿತವಾಗಿ ಕರೆತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಉಕ್ರೇನ್: ದೆಹಲಿಯಿಂದ ಕನ್ನಡಿಗರ ಕರೆತರಲು ಉಚಿತ ವಿಮಾನ ವ್ಯವಸ್ಥೆ - karnataka people in Ukraine
ರಷ್ಯಾ- ಉಕ್ರೇನ್ ನಡುವಿನ ಬಿಕ್ಕಟ್ಟಿನಿಂದ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದು, ಇದೀಗ 219ರ ಜನರ ಮೊದಲ ತಂಡ ಸ್ವದೇಶಕ್ಕೆ ಆಗಮಿಸಿದೆ.
ಉಕ್ರೇನ್ನಿಂದ ದೇಶಕ್ಕೆ ಆಗಮಿಸಿದ ಕನ್ನಡಿಗರು
ಈ ಸಂಬಂಧ ಟ್ವೀಟ್ ಮಾಡಿರುವ ಕಂದಾಯ ಸಚಿವ ಆರ್.ಅಶೋಕ್, ಉಕ್ರೇನ್ನಿಂದ ಬಂದು ದೆಹಲಿಯ ಕರ್ನಾಟಕ ಭವನದಲ್ಲಿ ತಂಗುವ ಎಲ್ಲರನ್ನೂ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬೆಂಗಳೂರಿಗೆ ವಿಮಾನದ ಮೂಲಕ ಕರೆತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಎಲ್ಲಾ ಏರ್ಪಾಡುಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಉಕ್ರೇನ್ನಿಂದ ತಾಯ್ನಾಡಿಗೆ ಬಂದ ಖುಷಿ.. ಕೇಂದ್ರ ಸರ್ಕಾರವನ್ನ ಹಾಡಿ ಹೊಗಳಿದ ವಿದ್ಯಾರ್ಥಿಗಳು!