ಬೆಂಗಳೂರು: ನಗರದ ಐಡಿಸಿ ಕಿಚನ್, ಸಿದ್ಧಾರ್ಥ್ ಅವರ ನೆನಪಿನಾರ್ಥ ನಗರದ ಕೋರಮಂಗಲ ಹಾಗೂ ಗಾಂಧಿನಗರದಲ್ಲಿರುವ ಐಡಿಸಿ ಕಿಚನ್ ಪ್ಲೇಟ್ಗಳಲ್ಲಿ ಉಚಿತವಾಗಿ ಸಾರ್ವಜನಿಕರಿಗೆ ಕಾಫಿ ವಿತರಿಸಲಾಯ್ತು.
ಸಿದ್ಧಾರ್ಥ್ ಸ್ಮರಣಾರ್ಥ ಬೆಂಗಳೂರಲ್ಲಿ ಸಾರ್ವಜನಿಕರಿಗೆ ಉಚಿತ ಕಾಫಿ! - Free coffee
ಉದ್ಯಮಿ ಸಿದ್ಧಾರ್ಥ್ ಅನಿರೀಕ್ಷಿತ ಸಾವು ಉದ್ಯಮಿಗಳ ವಲಯದಲ್ಲಿ ನೋವುಂಟು ಮಾಡಿದೆ. ಇದೀಗ ಪ್ರತಿಯೊಬ್ಬರೂ ಕಾಫಿ ಕುಡಿಯುವಾಗ ಸಿದ್ಧಾರ್ಥ್ ಅವರನ್ನು ನೆನೆಯದೇ ಇರಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಐಡಿಸಿಯಲ್ಲಿ ಗುರುವಾರ ಉಚಿತವಾಗಿ ಸಾರ್ವಜನಿಕರಿಗೆ ಕಾಫಿ ವಿತರಿಸಲಾಯಿತು.
ಸಾರ್ವಜನಿಕರಿಗೆ ಉಚಿತ ಕಾಫಿ
ಗುರುವಾರ ಸಂಜೆ 4 ಗಂಟೆಯಿಂದ 6 ರವರೆಗೆ ಈ ಉಚಿತ ಕಾಫಿ ವಿತರಣೆ ನಡೆಯಿತು. ಕಾಫಿ ಕುಡಿದ ಪ್ರತಿಯೊಬ್ಬರು ಸಿದ್ಧಾರ್ಥ್ ಅವರನ್ನು ಸ್ಮರಿಸಿದರು. ಈ ಮೂಲಕ ಕಾಫಿ ಅಂದರೆ ಸಿದ್ಧಾರ್ಥ್, ಸಿದ್ಧಾರ್ಥ್ ಅಂದ್ರೆ ಕಾಫಿ ಎನ್ನುವ ಮಾತು ಅಚ್ಚಳಿಯದೆ ಉಳಿದಂತಾಗಿದೆ.
ಕಾಫಿಯ ಪ್ರತಿಯೊಂದು ಸಿಪ್ನಲ್ಲೂ ನಿಮ್ಮ ನೆನಪು ಸದಾ ಇರುತ್ತದೆ ಎಂದು ಐಡಿಸಿ ಸಂಸ್ಥೆ ತಿಳಿಸಿದೆ.
Last Updated : Aug 2, 2019, 2:32 AM IST