ಕರ್ನಾಟಕ

karnataka

ETV Bharat / city

ಚರ್ಚ್​​​ಗಳ ದುರಸ್ತಿಗೆ ಅನುದಾನ ಮಂಜೂರು ಮಾಡಿಸಿಕೊಡುವುದಾಗಿ ಲಕ್ಷಾಂತರ ರೂ.ವಂಚನೆ ಆರೋಪ.. ವ್ಯಕ್ತಿ ಬಂಧನ - ಚರ್ಚ್​​ಗೆ ಅನುದಾನ ಕೊಡಿಸುವಲ್ಲಿ ವಂಚನೆ

ಬೆಂಗಳೂರಿನ ಯಶವಂತಪುರ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದು, ಚರ್ಚ್ ಹಾಗೂ ಸಮುದಾಯ ಭವನಗಳಿಗೆ ಅನುದಾನ ಮಂಜೂರು ಮಾಡಿಸಿಕೊಡುವುದಾಗಿ ನಂಬಿಸಿ ಹತ್ತಾರು ಮಂದಿಯನ್ನು ವಂಚಿಸಿರುವ ಆರೋಪ ಕೇಳಿಬಂದಿದೆ.

fraud in the name of church fund, one arrested in Bengaluru
ಚರ್ಚ್​​​ಗಳ ದುರಸ್ತಿಗೆ ಅನುದಾನ ಮಂಜೂರು ಮಾಡಿಸಿಕೊಡುವುದಾಗಿ ಲಕ್ಷಾಂತರ ರೂ.ವಂಚನೆ, ವ್ಯಕ್ತಿ ಬಂಧನ

By

Published : Apr 20, 2022, 10:56 AM IST

ಬೆಂಗಳೂರು: ಅಲ್ಪಸಂಖ್ಯಾತ ಇಲಾಖೆ ಮುಖಾಂತರ ಚರ್ಚ್ ಹಾಗೂ ಸಮುದಾಯ ಭವನಗಳಿಗೆ ಅನುದಾನ ಮಂಜೂರು ಮಾಡಿಸಿಕೊಡುವುದಾಗಿ ನಂಬಿಸಿ ಹತ್ತಾರು ಜನರಿಂದ ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರೋಪಿ ಯಶವಂತಪುರ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾನೆ. ಬೀದರ್ ಮೂಲದ ಕಾಯೆಲ್ ಆಲಿಯಾಸ್ ಮಾರ್ಕ್ ಬಂಧಿತ ಆರೋಪಿಯಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಅಲ್ಪಸಂಖ್ಯಾತ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸುತ್ತಿದ್ದ ಈತ ಇಲಾಖೆಗೆ ಬರುವ ಕ್ರೈಸ್ತ ಸಮುದಾಯದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಚರ್ಚ್​ಗಳ ನವೀಕರಣ, ದುರಸ್ತಿ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿಕೊಡುವುದಾಗಿ ನಂಬಿಸುತ್ತಿದ್ದನು. ನಂತರ ಕೆಲಸ ಮಾಡಿಕೊಡಲು ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆಯುತ್ತಿದ್ದ. ತನ್ನ ಸಹಚರ ಶಿವಕುಮಾರ್​​ನನ್ನು ಜಿಲ್ಲಾಧಿಕಾರಿ ಎಂದು ಪರಿಚಯಿಸಿ ಅವರಿಂದ ದಾಖಲಾತಿ ಪಡೆಯುತ್ತಿದ್ದು, ನಂತರ ವಂಚಿಸುತ್ತಿದ್ದ ಎಂದು ತಿಳಿದುಬಂದಿದೆ.

ಇಷ್ಟೇ ಅಲ್ಲದೇ ಅವರನ್ನು ನಂಬಿಸಿಲು ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಜೋಯಿಸ್ ಡಿಸೋಜಾ ಅವರ ಹೆಸರಿನಲ್ಲಿ ನಕಲಿ ಲೆಟರ್​ಹೆಡ್​ ತಯಾರಿಸಿ ಈ ಮುಖಾಂತರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಂತೆ ವಂಚಿಸಿದ್ದ ಎಂದು‌ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಶಿಗ್ಗಾವಿಯಲ್ಲಿ ಕೆಜಿಎಫ್​-2 ಸಿನಿಮಾ ವೀಕ್ಷಣೆ ವೇಳೆ ಗುಂಡು ಹಾರಿಸಿದ ದುಷ್ಕರ್ಮಿ.. ಓರ್ವನಿಗೆ ಗಾಯ

ABOUT THE AUTHOR

...view details