ಬೆಂಗಳೂರು:ಕೋವಿಡ್ -19 ದುಷ್ಪರಿಣಾಮ ಬಹುತೇಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಆ್ಯಪ್ಗಳ ಮೂಲಕ ತುರ್ತು ಸಾಲ ಪಡೆದವರಿಗೆ ದುಪ್ಪಟ್ಟು ಬಡ್ಡಿ ವಿಧಿಸಿ ಕಿರುಕುಳ ನೀಡುತ್ತಿರುವುದು ಕಂಡುಬರುತ್ತಿವೆ. ಅದಕ್ಕೆ ಜನರ ಅಸಹಾಯಕತೆಯೇ ಕಾರಣ ಎನ್ನಲಾಗಿದೆ. ಡಿ.23ರಂದು ನಗರದ ಸೈಬರ್ ಕ್ರೈಂ ವಿಭಾಗದ ಪೊಲೀಸರು 3 ಆ್ಯಪ್ಗಳ ವಿರುದ್ಧ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ...ಕೆಟ್ಟ ಸಾಲದಿಂದ ಬ್ಯಾಂಕ್ಗಳಿಗೆ ಅಲ್ಪ ಮುಕ್ತಿ: ತುಸು ನಿಟ್ಟುಸಿರು ಬಿಟ್ಟ ಆರ್ಬಿಐ!
ಕೆಲ ಆನ್ಲೈನ್ ಆ್ಯಪ್ಗಳು ಆರ್ಬಿಐ ನಿಯಮ ಉಲ್ಲಂಘಿಸಿ ಮುಂಗಡ ಸಾಲ ನೀಡುತ್ತಿವೆ. ಜೊತೆಗೆ ಮರು ಪಾವತಿ ಸಮಯದಲ್ಲಿ ಗ್ರಾಹಕರಿಗೆ ಕಿರುಕುಳ ನೀಡುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದರಿಂದ ಅನೇಕ ಮಂದಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಅಂತಹ ಆ್ಯಪ್ಗಳು ಗ್ರಾಹಕರಿಗೆ ಕಿರುಕುಳ ನೀಡಿದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ.
ದೇಶದ ಬ್ಯಾಂಕ್ ವ್ಯವಸ್ಥೆ ಉತ್ತಮವಾಗಿದೆ. ಸಾಲ ಹಾಗೂ ಠೇವಣಿ ಸಂಬಂಧಿಸಿದ ವ್ಯವಹಾರಕ್ಕೆ ಬ್ಯಾಂಕಿಂಗ್ ವ್ಯವಸ್ಥೆ ನಂಬಿಕಾರ್ಹ. ಆರ್ಬಿಐ ನಿಯಮಗಳ ಪರಿಮಿತಿಯಲ್ಲಿ ಕೆಲಸ ಮಾಡುವ ಬ್ಯಾಂಕ್ಗಳು ಮೋಸ ಮಾಡುವುದಿಲ್ಲ. ಬ್ಯಾಂಕ್ಗಳಲ್ಲಿ ಓವರ್ ಡ್ರಾಫ್ಟ್, ಸಣ್ಣ ಸಾಲದ ಸೌಲಭ್ಯ ನೀಡುತ್ತದೆ. ಹೀಗಾಗಿ, ಹಣದ ಅವಶ್ಯಕತೆ ಇದ್ದರೆ ಬ್ಯಾಂಕ್ ಅಥವಾ ನೋಂದಾಯಿತ ಎನ್ಬಿಎಫ್ಸಿಗೆ ಹೋಗಿ ಎಂದು ಆರ್ಥಿಕ ತಜ್ಞ ನಿತ್ಯಾನಂದ ಸಲಹೆ ನೀಡಿದರು.