ಬೆಂಗಳೂರು:ಸಾಲ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪದಡಿ ಸ್ಯಾಂಡಲ್ವುಡ್ ಸಿನಿಮಾ ನಿರ್ಮಾಪಕನ ವಿರುದ್ಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಥಮ್ ಅಭಿನಯದ ಎಂಎಲ್ಎ ಎಂಬ ಕನ್ನಡ ಚಿತ್ರದ ನಿರ್ಮಿಸಿದ್ದ ವೆಂಕಟೇಶ್ ರೆಡ್ಡಿ ಎಂಬಾತನ ವಿರುದ್ಧ ಆರೋಪ ಕೇಳಿ ಬಂದಿದೆ.
ತಾನೊಬ್ಬ ರಿಯಲ್ ಎಸ್ಟೇಟ್ ಉದ್ಯಮಿ, ವಕೀಲ ಹಾಗೂ ಚಿತ್ರರಂಗದಲ್ಲಿ ನಿರ್ಮಾಪಕನಾಗಿರುವುದಾಗಿ ಹೇಳಿದ್ದ ವೆಂಕಟೇಶ್ ರೆಡ್ಡಿ ಸಂಜಯ್ ರಾಜ್ ಬಿ.ಸಿ ಎಂಬುವವರಿಗೆ ಲೋನ್ ಕೊಡಿಸುವುದಾಗಿ ಹೇಳಿದ್ದರಂತೆ. ನನಗೆ ರಾಷ್ಟ್ರೀಕೃತ ಬ್ಯಾಂಕ್ ನವರು ಪರಿಚಯವಿದ್ದಾರೆ ಎಂದು ನಂಬಿಸಿ 35 ಲಕ್ಷ ಹಣ ಸಾಲ ಕೊಡಿಸುವುದಾಗಿ ಹೇಳಿ 5 ಲಕ್ಷ ಹಣ ಕೇಳಿದ್ದರಂತೆ.