ಬೆಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ಬಿಜೆಪಿ ನಾಯಕ ಡಿ ಎಸ್ ವೀರಯ್ಯ ಕುಟುಂಬದ ವಿರುದ್ಧ ವಂಚನೆ ಆರೋಪ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಲಾಗಿದೆ.
ಮಾಜಿ ಎಂಎಲ್ಸಿ ವೀರಯ್ಯ ಪುತ್ರನ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು, ಸಿಎಂ ಬಸವರಾಜ ಬೊಮ್ಮಾಯಿಗೆ ನೊಂದವರಿಂದ ದೂರು ಸಲ್ಲಿಕೆಯಾಗಿದೆ. ಆರ್.ಟಿ ನಗರದಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿದ ಉತ್ತರಹಳ್ಳಿ ಭಾಗದ ಕೆಲವರು ಸಿಎಂ ಬೊಮ್ಮಾಯಿಗೆ ದೂರಿನ ರೂಪದ ಮನವಿ ಪತ್ರ ನೀಡಿದರು.
ವೀರಯ್ಯ ಪುತ್ರನ ವಿರುದ್ಧ ವಂಚನೆ ಆರೋಪ - ಸಿಎಂಗೆ ದೂರು ಸಾರ್ವಜನಿಕರ ಅಹವಾಲು ಆಲಿಸುವ ವೇಳೆ ಸಿಎಂಗೆ ದೂರು ನೀಡಿದ ಸಂತ್ರಸ್ತರು, ಡಿ ಎಸ್ ವೀರಯ್ಯ ಅವರ ಪುತ್ರ ಸೈಟ್ ಆಸೆ ತೋರಿಸಿ ವಂಚನೆ ಎಸಗಿದ್ದಾರೆ. ಅಲ್ಲದೇ ನಮ್ಮ ನೆಮ್ಮದಿಯನ್ನು ಹಾಳು ಮಾಡಿದ್ದಾರೆ. ಬಿಡಿಎ ಸೈಟ್ ಕಡಿಮೆ ದರದಲ್ಲಿ ಕೊಡಿಸುವ ಆಸೆ ತೋರಿಸಿ ಈಗಾಗಲೇ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಂಡು ನಮಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ಮೈಸೂರು ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಿಗೆ ಸಿಬಿಐ ಶಾಕ್.. ಎಫ್ಐಆರ್ ದಾಖಲು
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಪ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಂತ್ರಸ್ತ ಕುಟುಂಬಕ್ಕೆ ಭರವಸೆ ನೀಡಿದರು.