ಕರ್ನಾಟಕ

karnataka

ETV Bharat / city

ಬೆಂಗಳೂರಿನಲ್ಲಿ ಮತ್ತೆ ನಾಲ್ವರು ಕೊರೊನಾಗೆ ಬಲಿ; ರಾಜ್ಯದಲ್ಲಿ ಸಾವಿನ ಸಂಖ್ಯೆ 73 - ಬೆಂಗಳೂರಿನಲ್ಲಿ ಕೊರೊನಾಗೆ ಮತ್ತೆ ನಾಲ್ವರು ಸಾವು,

ಸಿಲಿಕಾನ್​ ಸಿಟಿಯಲ್ಲಿ ಮತ್ತೆ ನಾಲ್ವರು ಕೊರೊನಾಗೆ ಸಾವನ್ನಪ್ಪಿದ್ದಾರೆ.

Four more died, Four more died by corona, Four more died by corona in Bangalore, Bangalore corona died, Bangalore corona died news, ಕೊರೊನಾಗೆ ಮತ್ತೆ ನಾಲ್ವರು ಸಾವು, ಬೆಂಗಳೂರಿನಲ್ಲಿ ಕೊರೊನಾಗೆ ಮತ್ತೆ ನಾಲ್ವರು ಸಾವು,
ಬೆಂಗಳೂರಿನಲ್ಲಿ ಮತ್ತೆ ನಾಲ್ವರು ಕೊರೊನಾಗೆ ಬಲಿ

By

Published : Jun 11, 2020, 11:03 AM IST

ಬೆಂಗಳೂರು: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಬೌರಿಂಗ್ ಆಸ್ಪತ್ರೆಯಿಂದ ಮೂವರು ರೋಗಿಗಳು ಮತ್ತು ವಿಕ್ರಮ್ ಆಸ್ಪತ್ರೆಯಿಂದ ಒಬ್ಬ ಸೋಂಕಿತೆ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಲ್ಲಿ 35 ವರ್ಷದ ಸೋಂಕಿತ ವ್ಯಕ್ತಿ ಜೂನ್ 10 ರಂದು ಸಾವನ್ನಪ್ಪಿದ್ದು, ಇವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ‌52 ವರ್ಷದ ವ್ಯಕ್ತಿ, 69 ವರ್ಷದ ವೃದ್ಧ ಸೇರಿದಂತೆ 45 ವರ್ಷದ ಮಹಿಳೆ ಇಂದು ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನಲ್ಲಿ ಮತ್ತೆ ನಾಲ್ವರು ಕೊರೊನಾಗೆ ಬಲಿ

ಈ ಮೂಲಕ ಬೆಂಗಳೂರಿನಲ್ಲಿ ಕೊರೊನಾ ವೈರಾಣುವಿನಿಂದ ಸಾವಿಗೀಡಾದವರ ಸಂಖ್ಯೆ 25ಕ್ಕೇರಿದೆ. ಜೂನ್ ತಿಂಗಳಲ್ಲಿ ನಗರದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಿದ್ದು, ಅದರಲ್ಲೂ ಕೊನೆ ಗಳಿಗೆಯಲ್ಲಿ ಆಸ್ಪತ್ರೆಗೆ ದಾಖಲಾದವರೇ ಸಾವನ್ನಪ್ಪಿರುವುದು ಗಮನಾರ್ಹ.

ವಯೋವೃದ್ಧರು ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರು ಆಸ್ಪತ್ರೆಗೆ ಬೇಗ ದಾಖಲಾಗುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ರೋಗದ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಆಪ್ತಮಿತ್ರ ಸಂಖ್ಯೆ 14410 ಕ್ಕೆ ಕರೆ ಮಾಡಲು ತಿಳಿಸಲಾಗಿದೆ.

ABOUT THE AUTHOR

...view details