ನೆಲಮಂಗಲ: ಹೆದ್ದಾರಿಗಳಲ್ಲಿ ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ ನಾಲ್ವರು ಯುವಕರನ್ನು ನೆಲಮಂಗಲ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.
ಡೆಡ್ಲಿ ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಯುವಕರು ಅರೆಸ್ಟ್ - ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ ನಾಲ್ವರು ಅರೆಸ್ಟ್
ಯುವಕರು ರಾಷ್ಟ್ರೀಯ ಹೆದ್ದಾರಿ 75 ರ ಶಾಂತಿನಗರ ಬಳಿ ವ್ಹೀಲಿಂಗ್ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದೀಗ ಈ ಪುಂಡರಿಗೆ ನೆಲಮಂಗಲ ಠಾಣೆ ಪೊಲೀಸರು ಬುದ್ದಿ ಕಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಶ್ರೀನಿವಾಸ್ ಪಳನಿ ಸೇರಿದಂತೆ ಇನ್ನಿಬ್ಬರನ್ನು ಬಂಧಿಸಲಾಗಿದೆ. ಇವರು ರಾಷ್ಟ್ರೀಯ ಹೆದ್ದಾರಿ 75 ರ ಶಾಂತಿನಗರ ಬಳಿ ವ್ಹೀಲಿಂಗ್ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದೀಗ ಪುಂಡರಿಗೆ ನೆಲಮಂಗಲ ಠಾಣೆ ಪೊಲೀಸರು ಬುದ್ದಿ ಕಲಿಸಿದ್ದು, ಬಂಧಿತರಿಂದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಬೆಂಗಳೂರು ನಗರದಲ್ಲಿ ಬೈಕ್ ಪುಂಡರ ಹಾವಳಿ ಹೆಚ್ಚಾಗಿದೆ. ಇವರು ಒಂದೇ ಚಕ್ರದಲ್ಲಿ ಭಯಾನಕ ಡೆಡ್ಲಿ ವ್ಹೀಲಿಂಗ್ ಮಾಡುತ್ತಾರೆ. ಇದರಿಂದಾಗಿ ಹಿಂಬದಿ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.