ಕರ್ನಾಟಕ

karnataka

ETV Bharat / city

ಅಹಿಂದ ಮುಕುಟ ಮಣಿ, ಕೇಂದ್ರದ ಮಾಜಿ ಸಚಿವ ಆರ್.ಎಲ್. ಜಾಲಪ್ಪ ಮಣ್ಣಲ್ಲಿ ಮಣ್ಣಾದರು.. - ಜಾಲಪ್ಪನವರ ಅಂತಿಮ ಸಂಸ್ಕಾರ

ಸರ್ಕಾರದ ಪ್ರತಿನಿಧಿಯಾಗಿ ಸಚಿವ ಡಾ.ಕೆ. ಸುಧಾಕರ್ ಭಾಗಿಯಾಗಿದ್ದರು. ಪೊಲೀಸ್ ಬ್ಯಾಂಡ್‌ನೊಂದಿಗೆ ಜಾಲಪ್ಪ ಪಾರ್ಥಿವ ಶರೀರದ ಮೇಲಿದ್ದ ರಾಷ್ಟ್ರದ್ವಜವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು..

former-union-minister-jalappa-last-rites
ಜಾಲಪ್ಪನವರ ಅಂತಿಮ ಸಂಸ್ಕಾರ

By

Published : Dec 18, 2021, 6:45 PM IST

Updated : Dec 18, 2021, 8:07 PM IST

ದೊಡ್ಡಬಳ್ಳಾಪುರ :ಸರ್ಕಾರಿ ಸಕಲ ಗೌರವದೊಂದಿಗೆ ಹಿರಿಯ ರಾಜಕಾರಣಿ ಆರ್.ಎಲ್. ಜಾಲಪ್ಪನವರ ಅಂತಿಮ ಸಂಸ್ಕಾರ ನೆರವೇರಿತು. ಸರ್ಕಾರದ ಪರವಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಪಾರ್ಥಿವ ಶರೀರಕ್ಕೆ ಗೌರವ ವಂದನೆ ಸಲ್ಲಿಸಿದರು.

ಅಹಿಂದ ಮುಕುಟ ಮಣಿ, ಕೇಂದ್ರದ ಮಾಜಿ ಸಚಿವ ಆರ್.ಎಲ್. ಜಾಲಪ್ಪ ಮಣ್ಣಲ್ಲಿ ಮಣ್ಣಾದರು..

ದೊಡ್ಡಬಳ್ಳಾಪುರದ ಜಾಲಪ್ಪ ಇಂಜನಿಯರಿಂಗ್ ಕಾಲೇಜ್ ಅವರಣದಲ್ಲಿ ಜಾಲಪ್ಪ ಅವರ ಪಾರ್ಥಿವ ಶರೀರವನ್ನು ಈಡಿಗ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಸಲಾಯಿತು. ಜಾಲಪ್ಪನವರ ಹಿರಿಯ ಮಗ ನರಸಿಂಹಸ್ವಾಮಿ ಅಂತಿಮ ಕಾರ್ಯ ನೆರವೇರಿಸಿದರು.

ಸರ್ಕಾರದ ಪ್ರತಿನಿಧಿಯಾಗಿ ಸಚಿವ ಡಾ.ಕೆ. ಸುಧಾಕರ್ ಭಾಗಿಯಾಗಿದ್ದರು. ಪೊಲೀಸ್ ಬ್ಯಾಂಡ್‌ನೊಂದಿಗೆ ಜಾಲಪ್ಪ ಪಾರ್ಥಿವ ಶರೀರದ ಮೇಲಿದ್ದ ರಾಷ್ಟ್ರದ್ವಜವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಬೆಂಗಳೂರು ಗ್ರಾಮಾಂತರದ ಜಿಲ್ಲಾಧಿಕಾರಿ ಶ್ರೀನಿವಾಸ್ ನೇತೃತ್ವದಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಸಕಲ ಸರ್ಕಾರಿ ಗೌರವ ಸಮರ್ಪಣೆ ಮಾಡಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಜಾಲಪ್ಪರವರ ಅಂತಿಮ ಸಂಸ್ಕಾರವನ್ನು ನಡೆಸಲಾಯಿತು. ಅಂತ್ಯಕ್ರಿಯೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಎಂ ವೀರಪ್ಪ ಮೊಯ್ಲಿ, ಉಗ್ರಪ್ಪ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

Last Updated : Dec 18, 2021, 8:07 PM IST

ABOUT THE AUTHOR

...view details