ಕರ್ನಾಟಕ

karnataka

ETV Bharat / city

ನಾವು ಸಭೆ ಮಾಡಿದ ಬಳಿಕ ಮುಂದಿನ ಸಿಎಂ ಕುರಿತು ಯಾರೂ ಮಾತನಾಡಿಲ್ಲ: ಕೋಳಿವಾಡ

ರಾಜ್ಯ ಕಾಂಗ್ರೆಸ್​ನಲ್ಲಿ ಸಿಎಂ ಆಗುವ ಸಾಮರ್ಥ್ಯ ಇರುವವರು ಹಲವರಿದ್ದಾರೆ. ಹತ್ತಕ್ಕೂ ಹೆಚ್ಚು ಹಿರಿಯ ನಾಯಕರು ಸಮರ್ಥರಿದ್ದಾರೆ. ನಾವು ಸಭೆ ಮಾಡಿದ ಬಳಿಕ ಮುಂದಿನ ಸಿಎಂ ಕುರಿತು ಯಾರೂ ಮಾತನಾಡಿಲ್ಲ ಎಂದು ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

By

Published : Jun 30, 2021, 9:02 PM IST

K.B. Kolivada
ಕೋಳಿವಾಡ

ಬೆಂಗಳೂರು: ಮುಂದಿನ ಸಿಎಂ ವಿಚಾರ ಮಾತನಾಡಿದ್ರೆ ಖಡಕ್ ಕ್ರಮ ಕೈಗೊಳ್ಳುತ್ತೇವೆ. ನಾವು ಸಭೆ ಮಾಡಿದ ಬಳಿಕ ಯಾರೂ ಮಾತನಾಡಿಲ್ಲ ಎಂದು ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ತಿಳಿಸಿದರು.

ತಮ್ಮ ಬೆಂಗಳೂರಿನ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂದಿನ ಸಭೆಯಲ್ಲಿ ಸಿಎಂ ಕುರಿತಾದ ಹೇಳಿಕೆ ನೀಡಿದವರನ್ನು ಕರೆಸುತ್ತೇವೆ. ತಪ್ಪು ಒಪ್ಪಿಕೊಂಡರೆ ಅಲ್ಲಿಗೆ ಮುಗಿಸುತ್ತೇವೆ. ಸಮರ್ಥನೆ ಮಾಡಿಕೊಂಡರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಸಸ್ಪೆಂಡ್ ಮಾಡುವ ಅಧಿಕಾರ ನಮಗೆ ಇದೆ ಎಂದು ಎಚ್ಚರಿಸಿದರು.

ರಾಜ್ಯ ಕಾಂಗ್ರೆಸ್​ನಲ್ಲಿ ಸಿಎಂ ಆಗುವ ಸಾಮರ್ಥ್ಯ ಇರುವ ಹಲವರು ಇದ್ದಾರೆ. ಹತ್ತಕ್ಕೂ ಹೆಚ್ಚು ಹಿರಿಯ ನಾಯಕರು ಸಮರ್ಥರಿದ್ದಾರೆ. ಆದರೆ ನಿನ್ನೆ ಸಿದ್ದರಾಮಯ್ಯ ಹೇಳಿಕೆ ನನಗೆ ಬಹಳ ಸಂತೋಷ ತಂದಿದೆ. ನಮ್ಮಲ್ಲಿ ಯಾವುದೇ ಒಳ ಜಗಳವಿಲ್ಲ ಎಂದು ಹೇಳಿದ್ದಾರೆ. ನನ್ನನ್ನು ಸೇರಿದಂತೆ ರಾಜ್ಯಾದ್ಯಂತ ಇರೋ ಕಾರ್ಯಕರ್ತರಿಗೆ ಇದು ಖುಷಿ ತಂದಿದೆ.

ಸಿದ್ದು- ಡಿಕೆ ಒಂದಾಗಿ ಕೆಲಸ ಮಾಡ್ತಾರೆ

ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ಒಂದಾಗಿ ಕೆಲಸ ಮಾಡ್ತಾರೆ. ಬಿಜೆಪಿ ಸರ್ಕಾರ ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿದೆ. ಇಬ್ಬರೂ ಒಂದಾಗಿ ಹೋದ್ರೆ ಮುಂದೆ ನಿಶ್ಚಿತವಾಗಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಕೋಳಿವಾಡ ವಿಶ್ವಾಸ ವ್ಯಕ್ತಪಡಿಸಿದರು.

ಸಂಸದ ಡಿ.ಕೆ.ಸುರೇಶ್ ಹೇಳಿಕೆ ಅವರ ವೈಯುಕ್ತಿಕ ಇರಬಹುದು. ಒಂದು ಬಾರಿ ಕಾಂಗ್ರೆಸ್​ಗೆ ಸೇರಿದ್ರೆ ಅವರು ಕಾಂಗ್ರೆಸ್ಸಿಗರು. ವಲಸಿಗ, ಮೂಲ ಅನ್ನೋದು ಇಲ್ಲ. ಡಿಕೆ ಸುರೇಶ್ ಅವರ ಹೇಳಿಕೆಯನ್ನು ಸಹ ಮುಂದಿನ ಶಿಸ್ತು ಸಮಿತಿ ಸಭೆಯಲ್ಲಿ ಚರ್ಚೆ ಮಾಡ್ತೀವಿ ಎಂದು ಹೇಳಿದರು.

ದಲಿತ ಸಿಎಂ‌ ಕೂಗು ಸದ್ಯಕ್ಕೆ ಅಪ್ರಸ್ತುತ. ಮುನಿಯಪ್ಪ, ಪರಮೇಶ್ವರ್ ಪಕ್ಷದ ನಿಷ್ಠರು. ಯಾವುದೇ ಕಾರಣಕ್ಕೂ ಪಕ್ಷದ ಆದೇಶವನ್ನು ಅವರು ಮೀರುವುದಿಲ್ಲ. ಹೀಗಾಗಿ ದಲಿತ ಸಿಎಂ ಬಗ್ಗೆ ಹೈಕಮಾಂಡ್ ‌ನಿರ್ಣಯ ತೆಗೆದುಕೊಳ್ಳುತ್ತದೆ. ಪರಮೇಶ್ವರ್ ಹಾಗೂ ಮುನಿಯಪ್ಪ ಹೈಕಮಾಂಡ್ ಭೇಟಿಯಾಗಿದ್ದು, ಪಕ್ಷ ಸಂಘಟನೆ ಬಗ್ಗೆ. ಅದು ಬಿಟ್ಟು ದಲಿತ ಸಿಎಂ ವಿಚಾರವಾಗಿ ಅಲ್ಲ ಎಂದರು.

ಬೆಳಗಾವಿಯಲ್ಲಿ ಸದನ ನಡೆಸದೇ ಇರುವುದಕ್ಕೆ ಆಕ್ಷೇಪ

ಬೆಳಗಾವಿಯಲ್ಲಿ ಸದನ ಅಧಿವೇಶನ ನಡೆಸದೇ ಇರುವುದಕ್ಕೆ ಕೋಳಿವಾಡ ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ಎರಡು ವರ್ಷಗಳಿಂದ ಅಲ್ಲಿ ಅಧಿವೇಶನ ನಡೆಸಿಲ್ಲ. ಸುವರ್ಣ ಸೌಧ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಚರ್ಚೆ ಮಾಡಲು ಕಟ್ಟಲಾಗಿದೆ. ಆದ್ರೆ ಅಲ್ಲಿ ಅಧಿವೇಶನವನ್ನು ಸರ್ಕಾರ ನಡೆಸುತ್ತಿಲ್ಲ. ನಾನು ಸ್ಪೀಕರ್ ಅಗಿದ್ದಾಗ ತಪ್ಪದೆ ಅಲ್ಲಿ‌ ಅಧಿವೇಶನ ನಡೆಸಿದ್ದೇನೆ. ಹೀಗಾಗಿ ಸರ್ಕಾರ ಕೂಡಲೇ ಬೆಳಗಾವಿಯಲ್ಲಿ ಅಧಿವೇಶನ ನಡೆಸಲಿ ಎಂದು ಸಲಹೆ ನೀಡಿದರು.

ಬೆಳಗಾವಿಯಲ್ಲಿ ಅಧಿವೇಶನ ಮಾಡದಿದ್ರೆ ಪಕ್ಷಾತೀತವಾಗಿ ಹೋರಾಟ ಮಾಡ್ತೀವಿ. ನಂಜುಂಡಪ್ಪ ವರದಿ ಆಧರಿಸಿ ಕಾರ್ಯಕ್ರಮಗಳು ಆಗಬೇಕು. ಇವೆಲ್ಲಾ ಚರ್ಚೆ ಆಗಬೇಕು ಎಂದು ಅಲ್ಲಿ ಅಧಿವೇಶನ ನಡೆಸಲು ನಿರ್ಧಾರ ಮಾಡಿದ್ದು. ಒಂದು ವೇಳೆ ಅಧಿವೇಶನ ಮಾಡಿಲ್ಲ ಅಂದರೆ ಆ ಭಾಗದ ಎಲ್ಲರೂ ಸಹ ರಾಜೀನಾಮೆ ಕೊಡಬೇಕಾಗುತ್ತೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.

ಬೊಮ್ಮಾಯಿ ವಿರುದ್ಧ ಕೋಳಿವಾಡ ಕೆಂಡಾಮಂಡಲ

ಹಾವೇರಿ ಜಿಲ್ಲೆಗೆ ಶೇ.15 ಲಸಿಕೆ ನೀಡದ ವಿಚಾರ ಕುರಿತು ಪ್ರಸ್ತಾಪಿಸಿ, ಉಸ್ತುವಾರಿ ಮಂತ್ರಿ ಬೊಮ್ಮಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು ನಗರಕ್ಕೆ ಶೇ.50 ರಷ್ಟು ಲಸಿಕೆ ನೀಡಿದ್ದಾರೆ. ಅತಿ ಕಡಿಮೆ ಲಸಿಕೆಯನ್ನು ಹಾವೇರಿಗೆ ನೀಡಿದ್ದಾರೆ. ಇದು ಸರ್ಕಾರದ ಮಲತಾಯಿ ಧೋರಣೆ. ಸಿಎಂ ಎಡ ಬಲ ಬೊಮ್ಮಾಯಿ ಓಡಾಡುತ್ತಾರೆ. ಆದ್ರೆ ಸರಿಯಾಗಿ ಲಸಿಕೆ ತರಲು ಸಾಧ್ಯವಾಗಿಲ್ಲ. ಕೂಡಲೇ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ವಾಗ್ದಾಳಿ ನಡೆಸಿದರು.

ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ. ಆರ್.ಎಸ್. ಎಸ್ ನವರಿಗೆ ಅಸಮಾಧಾನವಿದೆ. ಹಾಗಾಗಿ ಶೀಘ್ರದಲ್ಲೇ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ. ನನ್ನ ಬಳಿ ಖಚಿತ ಮಾಹಿತಿಯಿದೆ. ಅದರ ಆಧಾರದ ಮೇಲೆ ನಾನು ಹೇಳುತ್ತಿದ್ದೇನೆ. ಯತ್ನಾಳ್​ ಮೇಲೆ ಯಾವುದೇ ಕ್ರಮ ಯಾಕೆ ತೆಗೆದುಕೊಂಡಿಲ್ಲ?.

ಸಿಎಂ ಬದಲಾವಣೆ ಪಕ್ಕ. ಸಿಎಂ ರೇಸ್​ನಲ್ಲಿ 10- 15 ಜನ ಇದ್ದಾರೆ. ನನಗೂ ಸಿಎಂ ಆಗುವ ಸಾಮರ್ಥ್ಯವಿದೆ. ಸಿದ್ದರಾಮಯ್ಯ ನನಗಿಂತ ಜೂನಿಯರ್. ಪರಮೇಶ್ವರ ನನಗಿಂತ ಜೂನಿಯರ್. ಡಿಕೆ ಶಿವಕುಮಾರ್ ಕೂಡ ಜೂನಿಯರ್. ಆದ್ರೆ ಅವರ ಹಣೆ ಬರಹದಲ್ಲಿ ಬರೆದಿದೆ. ನಮಗೆ ಬರೆದಿಲ್ಲ ಎಂದು ವಿವರಿಸಿದರು.

ABOUT THE AUTHOR

...view details