ಕರ್ನಾಟಕ

karnataka

ETV Bharat / city

ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಹಿಯಾಳಿಸುವುದೇ ಬಿಜೆಪಿ ಕಾರ್ಯ: ಖರ್ಗೆ - ಮಾಜಿ ಪ್ರಧಾನಿ ಇಂದಿರಾ ಗಾಂಧಿ 103ನೇ ಜನ್ಮದಿನಾಚರಣೆ

ನೆಹರೂ ಚಿಂತನೆ, ಇಂದಿರಾಗಾಂಧಿ ಕೆಲಸ, ರಾಜೀವ್ ಗಾಂಧಿ ಯುವಕರಿಗಾಗಿ ಮಾಡಿದ ಕೆಲಸ ಅರಿಯಬೇಕಿದೆ. ನಾವು ಕೊಟ್ಟ ಕೆಲಸವನ್ನು ತಮ್ಮದೆಂದು ಹೇಳಿಕೊಳ್ಳುವ ಬಿಜೆಪಿ ನಾಯಕರ ಷಡ್ಯಂತ್ರ ಅರಿಯಬೇಕು. ನಮ್ಮ ಪಕ್ಷದ ತತ್ವ ಅತ್ಯಂತ ವಿಭಿನ್ನವಾದದ್ದು. ಅದನ್ನರಿತು ಜನರಿಗೆ ವಿವರಿಸುವ ಕಾರ್ಯ ಮಾಡಬೇಕು ಎಂದು ರಾಜ್ಯಸಭೆಯ ಕಾಂಗ್ರೆಸ್​ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಸಲಹೆ ಇತ್ತರು.

Former prime minister Indiragandhi Birthday celebration by congress
ಇಂದಿರಾ ಗಾಂಧಿಗೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಕಾಂಗ್ರೆಸ್​ ನಾಯಕರು

By

Published : Nov 19, 2020, 1:58 PM IST

ಬೆಂಗಳೂರು:ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 103ನೇ ಜನ್ಮದಿನಾಚರಣೆಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಆಚರಿಸಿದರು.

ಸಮಾರಂಭದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಮತ್ತಿತರ ನಾಯಕರು ಪಾಲ್ಗೊಂಡು ಇಂದಿರಾಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಇಂದಿರಾಗಾಂಧಿ ಕುಟುಂಬ ದೇಶಕ್ಕೆ ನೀಡಿದ ಕೊಡುಗೆಯಿಂದಾಗಿ ಇಂದು ದೇಶದಲ್ಲಿ ಆಗಿರುವ ಕ್ರಾಂತಿಗೆ ಕಾರಣ. ಆದರೆ ಅದನ್ನು ಅಳಿಸಿ ಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ. ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಹಿಯಾಳಿಸುವ ಹಾಗೂ ಹೆಸರು ಅಳಿಸಿಹಾಕುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಇಂದು ಆರ್​ಎಸ್​​ಎಸ್ ಹಿಡಿತದಲ್ಲಿದ್ದು, ಅಭ್ಯರ್ಥಿ ಆಯ್ಕೆ ಕಾರ್ಯವನ್ನೂ ಅದೇ ಮಾಡುತ್ತಿದೆ. ಎಲ್ಲ ಆಟವನ್ನು ಆರ್​​ಎಸ್​ಎಸ್ ಆಡುತ್ತಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಆರ್​​​ಎಸ್​​ಎಸ್ ಪಕ್ಷ ಆಗಬಹುದು. ಹಿಂದೆ ವಿವೇಕಾನಂದ, ಸರ್ದಾರ್ ವಲ್ಲಭಭಾಯ್ ಪಟೇಲ್ ಬಗ್ಗೆ ನಿರ್ಲಕ್ಷ್ಯ ತೋರಿಸಿದ್ದ ಬಿಜೆಪಿ ನಾಯಕರು ಇಂದು ಅವರ ಪ್ರತಿಮೆ ಸ್ಥಾಪಿಸುತ್ತಿದ್ದಾರೆ. ಇವೆಲ್ಲಾ ತೋರಿಕೆಯ ಗೌರವ ಎಂದು ಟೀಕಿಸಿದರು.

ದೇಶ, ರಾಷ್ಟ್ರೀಯತೆ ಕುರಿತು ನಮಗೆ ಬಿಜೆಪಿಯವರು ಪಾಠ ಹೇಳುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿದ್ದ ವಿವೇಕಾನಂದರ ಮನೆ ಮುರಿದು ಬಿದ್ದಿದ್ದನ್ನು ಕಂಡ ಇಂದಿರಾಗಾಂಧಿ ಕಾಳಜಿ ತೋರಿಸಿ ಪುನರುಜ್ಜೀವನ ಮಾಡಿಸಿದರು. ನಾಗಪುರ ಹಿಂದುತ್ವದ ತತ್ವವನ್ನು ವಿವೇಕಾನಂದರು ಒಪ್ಪಿರಲಿಲ್ಲ. ಆದರೆ, ಇವತ್ತು ಅವರನ್ನು ಬಿಜೆಪಿಯವರು ಸ್ವಾರ್ಥಕ್ಕಾಗಿ ಆರಾಧಿಸುತ್ತಿದ್ದಾರೆ. ಇದನ್ನು ಗಮನಿಸಿ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಇಂದಿರಾಗಾಂಧಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತು

ಜಾತಿಗೊಂದು ನಿಗಮ ಮಾಡುವ ಬಿಜೆಪಿ ಸರ್ಕಾರ ಯಾರಿಗೆ ಎಷ್ಟು ಹಣ ನೀಡಲಿದೆ. ಆದಾಯ ಕಡಿಮೆ ಇರುವವರು ಯಾವುದೇ ಜಾತಿ, ಧರ್ಮ ಅಥವಾ ಸಮುದಾಯದವರಿರಲಿ ಅವರಿಗೆ ಸವಲತ್ತು ನೀಡಿ. ಜಾತಿಗೊಂದು, ಧರ್ಮಕ್ಕೊಂದು ಸವಲತ್ತು ಕೊಡುವುದು ಯಾವಾಗ? ಸಾಕಷ್ಟು ಜಾತಿ ಬಿಟ್ಟು ಹೋಗಿದೆ. ಜಾತಿಗಳಲ್ಲಿ ಉಪಜಾತಿ ಇವೆ. ಅವರಿಗೆ ಅವಕಾಶ ಸಿಗುವುದು ಯಾವಾಗ? ತಮ್ಮ ರಾಜಕೀಯ, ಚುನಾವಣೆ ಗೆಲುವು ಗುರಿಯಾಗಿಟ್ಟುಕೊಂಡು ನಿಗಮ ಸ್ಥಾಪಿಸುವುದು ಸರಿಯಲ್ಲ ಎಂದು ಆರೋಪಿಸಿದರು.

ABOUT THE AUTHOR

...view details