ಕರ್ನಾಟಕ

karnataka

ETV Bharat / city

90ನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ದೇವೇಗೌಡ..ಹಿರಿಯ ಮುತ್ಸದ್ಧಿಯ ರಾಜಕೀಯ ಹೆಜ್ಜೆಗುರುತುಗಳು - ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಜನ್ಮದಿನ

ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು 90 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜೆಪಿ ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

former-prime-minister
ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ

By

Published : May 18, 2022, 10:51 PM IST

ಬೆಂಗಳೂರು:ಹಿರಿಯ ಮುತ್ಸದಿ ರಾಜಕಾರಣಿಯಾಗಿರುವ ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡ ಅವರು ಜೆಪಿ ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ 90 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಜೆಪಿ ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಇಂದು ಸಂಜೆ ಪತ್ನಿ ಚನ್ನಮ್ಮ ಅವರ ಜೊತೆ ಜೆಪಿ ನಗರದ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಹಲವಾರು ನಾಯಕರು ದೇವೇಗೌಡರಿಗೆ ಜನ್ಮದಿನದ ಶುಭ ಕೋರಿದರು.

ಹಿರಿಯ ಮುತ್ಸದಿ ರಾಜಕಾರಣಿಯಾಗಿರುವ ಜೆಡಿಎಸ್​ ವರಿಷ್ಠ ದೇವೇಗೌಡ ಅವರು ರಾಜಕೀಯ ಹೆಜ್ಜೆಗಳು ಸಾಮಾನ್ಯವಾದುದಲ್ಲ. ಒಬ್ಬ ರೈತ ಮಗನಾಗಿ, ಸಾಮಾನ್ಯ ಕಾರ್ಯಕರ್ತನಾಗಿ, ಪಕ್ಷದ ನಾಯಕನಾಗಿ, ಮುಖ್ಯಮಂತ್ರಿಯಾಗಿ ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿದವರು. ದೇವೇಗೌಡರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಕಳೆದ ವರ್ಷ ಜೂನ್ 1 ಕ್ಕೆ ಭರ್ತಿ 25 ವರ್ಷಗಳನ್ನು ಪೂರೈಸಿ ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಿದರು.

ಅಧಿಕಾರದ ಅವಧಿ ಸಣ್ಣದಾದರೂ ಮಾಡಿದ ಸಾಧನೆ ದೊಡ್ಡದು. ಇಡೀ ದೇಶದಲ್ಲಿ ಐಟಿ ಉದ್ಯಮಕ್ಕೆ ಹತ್ತು ವರ್ಷಗಳ ಕಾಲ‌ ಟ್ಯಾಕ್ಸ್ ಹಾಲಿ ಡೇ, ಬಾಂಗ್ಲಾದೇಶ ಹಾಗೂ ಭಾರತದ ನಡುವಿನ ಗಂಗಾ ನದಿ ವಿವಾದ ಬಗೆಹರಿಸಿದ್ದು ಅವರ ಸಾಧನೆಯಾಗಿದೆ. ರಾಜಕೀಯದಲ್ಲಿ ಹಲವು ನೋವು- ನಲಿವು : ಏರ್‌ಪೋರ್ಟ್, ರೈಲ್ವೇ ಯೋಜನೆ ರಾಷ್ಟ್ರೀಯ ಹೆದ್ದಾರಿಗಳು, ವಿಶ್ವವಿದ್ಯಾಲಯಗಳನ್ನು ನಿರ್ಮಿಸಲು ವಿಶೇಷ ಅನುದಾನ ಮಂಜೂರು. ಕಾಶ್ಮೀರಕ್ಕೆ ಐದು ಬಾರಿ ಭೇಟಿ ನೀಡಿ 3 ಸಾವಿರ ಕೋಟಿ ಪ್ಯಾಕೇಜ್, ನನೆಗುದಿಗೆ ಬಿದ್ದಿದ್ದ ದೆಹಲಿ ಮೆಟ್ರೋಗೆ ಚಾಲನೆ, ನಾಗಾ ಬಂಡುಕೋರರೊಂದಿಗೆ ಶಾಂತಿ ಮಾತುಕತೆ ನಡೆಸಿ ಯುದ್ದವಿರಾಮ ಘೋಷಣೆ ಮಾಡಿದ್ದರು.

ಇನ್ನು ತವರು ಕರ್ನಾಟಕಕ್ಕೂ ಹೆಚ್.ಡಿ ದೇವೇಗೌಡರ ಕೊಡುಗೆ ಅಷ್ಟಿಷ್ಟಲ್ಲ. ರೈಲ್ವೆ, ನೀರಾವರಿ, ವಿದ್ಯುತ್, ಕೈಗಾರಿಕೆ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ರಾಜಕೀಯದಲ್ಲಿ ಹಲವು ನೋವು- ನಲಿವುಗಳನ್ನು ದೇವೇಗೌಡರು ಕಂಡಿದ್ದರು. ಹೆಚ್.ಡಿ. ದೇವೇಗೌಡ ಅವರ ಜೀವನ ಚರಿತ್ರೆ ಪುಸ್ತಕ ಕಳೆದ ವರ್ಷ ಬಿಡುಗಡೆಗೊಂಡಿತು. ಸಾಮನ್ಯ ಹಳ್ಳಿಯಿಂದ ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸುವ ಮಟ್ಟಕ್ಕೆ ದೇವೇಗೌಡರು ಬೆಳೆದಿದ್ದರು. ಗೌಡ ಆರಯ ದಶಕಗಳ ರಾಜಕೀದ ಏಳು-ಬೀಳುಗಳನ್ನು ಆ ಪುಸ್ತಕದಲ್ಲಿ ದಾಖಲಿಸಲಾಗಿದೆ.

ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದ ಗೌಡರು: ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ್ದ ದೇವೇಗೌಡರು, ದೇವೇಗೌಡರಿಗೆ 90 ವರ್ಷ ಆಗಿದೆ ಅಂತ ಯಾರು ಹೇಳಿದ್ರು, ನನಗೆ ಇನ್ನು 90 ವರ್ಷ ಮುಟ್ಟೇ ಇಲ್ಲ. ನನ್ನ ಜೀವನದ ಕೊನೆ ಆಸೆ ಏನು ಗೊತ್ತಾ?. ಒಂದು ಪ್ರಾದೇಶಿಕ ಪಕ್ಷ ಉಳಿಸಿ, ಅಧಿಕಾರಕ್ಕೆ ತರಬೇಕು, ಅಧಿಕಾರಕ್ಕೆ ತಂದು ಕೊನೆ ಉಸಿರು ಬೀಡಬೇಕೆಂಬುದೇ ನನ್ನ ಹಠ ಎಂದು ಅಷ್ಟೇ ಉತ್ಸಾಹದಿಂದ ಹೇಳಿದ್ದರು. ಇಳಿ ವಯಸ್ಸಿನಲ್ಲೂ ಅವರ ಲವಲವಿಕೆ ಇಂದಿನ ಯುವ ಪೀಳಿಗೆಗೂ ಉತ್ಸಾಹ ನೀಡಿದೆ.

ಓದಿ:ನಾರಾಯಣಪುರ ನಾಲೆ ಆಧುನೀಕರಣದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ​: ಸಿದ್ದರಾಮಯ್ಯ ಆರೋಪ

ABOUT THE AUTHOR

...view details