ಕರ್ನಾಟಕ

karnataka

ETV Bharat / city

ಕೆಆರ್‌ಎಸ್‌ ವಿಚಾರದಲ್ಲಿ ಹೆಚ್‌ಡಿಕೆ vs ಸುಮಲತಾ ವಾಕ್ಸಮರ: ಆರೋಪ-ಪ್ರತ್ಯಾರೋಪಕ್ಕೆ ದೊಡ್ಡಗೌಡರ ಕಡಿವಾಣ - ಬೆಂಗಳೂರು

ಕಳೆದ ಕೆಲವು ದಿನಗಳಿಂದ ಕೆಆರ್‌ಎಸ್‌ ವಿಚಾರದಲ್ಲಿ ಜೆಡಿಎಸ್‌ ನಾಯಕರು ಹಾಗೂ ಸಂಸದೆ ಸುಮಲತಾ ಬಣ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ಈ ವಾಗ್ವಾದಕ್ಕೆ ಕಡಿವಾಣ ಹಾಕಲು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು ಮಧ್ಯ ಪ್ರವೇಶಿಸಿದ್ದಾರೆ.

Former PM HD Deve Gowda claims to stop The talking war between HDK and MP Sumalatha over KRS issue
KRS ವಿಚಾರದಲ್ಲಿ ದಳಪತಿ, ಸಂಸದೆ ಸುಮಲತಾ ಮಾತಿನ ಸಮರ; ಆರೋಪ, ಪ್ರತ್ಯಾರೋಪಕ್ಕೆ ದೊಡ್ಡ ಗೌಡರ ಬ್ರೇಕ್..!

By

Published : Jul 9, 2021, 9:52 PM IST

ಬೆಂಗಳೂರು: ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಡ್ಯಾಂ ಬಳಿ ಗಣಿಗಾರಿಕೆ ವಿಚಾರದಲ್ಲಿ ಜೆಡಿಎಸ್ ನಾಯಕರು ಮತ್ತು ಸಂಸದೆ ಸುಮಲತಾ ಅಂಬರೀಶ್ ನಡುವೆ ನಡೆಯುತ್ತಿರುವ ವಾಗ್ದಾಳಿ ವೈಯಕ್ತಿಕ ಹಂತಕ್ಕೆ ತಲುಪುತ್ತಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಮಾತಿನ ಸಮರಕ್ಕೆ ಕದನ ವಿರಾಮ ಘೋಷಿಸಿದ್ದಾರೆ.

ಎರಡೂ ಬಣಗಳಿಗೆ ಸಂದೇಶ ಕಳುಹಿಸಿರುವ ಗೌಡರು, ಆರೋಪ, ಪ್ರತ್ಯಾರೋಪ ನಿಲ್ಲಿಸುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಎರಡು ದಿನಗಳಿಂದ ಬೆಳವಣಿಗೆಗಳನ್ನು ನೋಡುತ್ತಿದ್ದೇನೆ. ಈ ಬಗ್ಗೆ ಏನೂ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದ ದೇವೇಗೌಡರು, ಇದೀಗ ಕದನಕ್ಕೆ ವಿರಾಮ ಹಾಕಲು ಮಧ್ಯಪ್ರವೇಶಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಯಾರು ಕಾರಣ? ಈ ಬಗ್ಗೆ ಯಾರು, ಏನಂದ್ರು? ಈ ವಿಡಿಯೋ ನೋಡಿ..

ಜೆಡಿಎಸ್ ನಾಯಕರು ಮಾತಿನಲ್ಲಿ ಹಿಡಿತ ಕಳೆದುಕೊಳ್ಳುತ್ತಿರುವುದನ್ನು ದೇವೇಗೌಡರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಟೀಕೆ-ಟಿಪ್ಪಣಿಗಳು ತೀವ್ರ ವೈಯಕ್ತಿಕ ಮಟ್ಟಕ್ಕೆ ಹೋದರೆ ಇದರಿಂದ ಪಕ್ಷಕ್ಕೆ ಧಕ್ಕೆಯಾಗುತ್ತದೆ. ರಾಜ್ಯದ ಜನತೆಗೆ ಬೇರೆ ಸಂದೇಶ ರವಾನೆಯಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡದಂತೆ ಗೌಡರು ತಮ್ಮ ಪಕ್ಷದ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸುಮಲತಾ ಬಣಕ್ಕೂ ವಿವಾದಕ್ಕೆ ಇತ್ಯರ್ಥ ಹಾಡುವಂತೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details