ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಿಎಂ ಬಿ ಎಸ್ ಯಡಿಯೂರಪ್ಪ ಭ್ರಮಾಲೋಕದಲ್ಲಿದ್ದಾರೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಆರೋಪಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗೆಲುವಿನ ಭ್ರಮಾ ಲೋಕದಲ್ಲಿದ್ದ ಇವರಿಗೆ ಭಾರತ್ ಬಚಾವೊ ಆಂದೋಲನದಲ್ಲಿ ಸೇರಿದ್ದ ಜನರ ಪ್ರತಿಕ್ರಿಯೆ ನೋಡಿ ಹತಾಶೆ ಉಂಟಾಗಿದೆ. ಪ್ರಧಾನಿಗಳೇ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡ್ತಾರೆ. ಬಿಜೆಪಿಯ ವಿಚಾರಧಾರೆಗಳು ಪ್ರಧಾನಿ ಹೇಳಿಕೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿವೆ ಎಂದು ಲೇವಡಿ ಮಾಡಿದರು.
ವಿ ಎಸ್ ಉಗ್ರಪ್ಪ ಸುದ್ದಿಗೋಷ್ಠಿ.. ನಿಮಗೆ ಅದರ ಮಾಹಿತಿ ಇದ್ರೆ ಕ್ರಮ ಕೈಗೊಳ್ಳಿ. ಸುಮ್ಮನೆ ಹೇಳಿಕೆಗಳ ಮೂಲಕ ಕಾಂಗ್ರೆಸ್ ತೇಜೋವಧೆ ಮಾಡುವುದು ಸರಿಯಲ್ಲ. ಸಂವಿಧಾನದ ಅರಿವು ನಿಮಗಿದ್ಯಾ? 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಅಧಿಕಾರ ಬಲದಿಂದ, ಹಣ ಬಲದಿಂದ ಚುನಾವಣೆ ನಡೆಸಿದ್ದಾರೆ. ವೋಟಿಂಗ್ ಸಿಸ್ಟಮ್ ಬಗ್ಗೆ ಜನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಅದರ ಬಗ್ಗೆ ಚುನಾವಣಾ ಆಯೋಗ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇಂದಲ್ಲ, ನಾಳೆ ಇವಿಎಂ ಬದಲಾವಣೆ ಆಗಬೇಕಾಗುತ್ತದೆ ಎಂದ್ರು.
12 ಸೀಟು ಗೆದ್ದ ಮೇಲೆ ಸಿಎಂ ಯಡಿಯೂರಪ್ಪ ಭ್ರಮೆಯಲ್ಲಿದ್ದಾರೆ. ಪ್ರವಾಹದಿಂದ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ರಾಜ್ಯದ ಸಮಸ್ಯೆ ಆಲಿಸುವಲ್ಲಿ ಸಿಎಂ ವಿಫಲರಾಗಿದ್ದಾರೆ. 1 ಲಕ್ಷ ಕೋಟಿಯಷ್ಟು ಪ್ರವಾಹದಿಂದ ಹಾನಿಯಾಗಿದೆ. ಆದರೆ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಪರಿಹಾರ ನೀಡಲು ಮುಂದೆ ಬರುತ್ತಿಲ್ಲ ಎಂದು ಆರೋಪಿಸಿದರು.