ಬೆಂಗಳೂರು:ಕೈಗಾರಿಕಾ ವಸಾಹತು ಮಾಡುವುದಕ್ಕೆ ಸುಮಾರು 1800 ಎಕರೆ ಜಮೀನು ನೋಟಿಫಿಕೇಶನ್ ಮಾಡಲಾಗಿದೆ. ಬೆಳ್ಳೂರು ಹೋಬಳಿ ರೈತರಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಹಾಗಾಗಿ ನೋಟಿಫಿಕೇಶನ್ ರದ್ದು ಮಾಡಬೇಕು ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಒತ್ತಾಯಿಸಿದ್ದಾರೆ.
ಕೈಗಾರಿಕಾ ವಸಾಹತುಗಾಗಿ ರೈತರ ಜಮೀನಿಗೆ ಕೈ ಹಾಕಬೇಡಿ: ಶಿವರಾಮೇಗೌಡ ಆಗ್ರಹ - ಬೆಂಗಳೂರು ಸುದ್ದಿ
ಸರ್ಕಾರಿ ಜಮೀನು ಹೆಚ್ಚಿರುವ ಕಡೆ ಕೈಗಾರಿಕಾ ವಸಾಹತು ಮಾಡಿ. ರೈತರ ಜಮೀನಿಗೆ ಕೈ ಹಾಕಬೇಡಿ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಒತ್ತಾಯಿಸಿದ್ದಾರೆ.
ಶಿವರಾಮೇಗೌಡ
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಭಾಗದ ರೈತರಿಗೆ ಜಮೀನು ಬಿಟ್ಟರೆ ಜೀವನಕ್ಕೆ ಬೇರೆ ಏನೂ ಇಲ್ಲ. ಅದನ್ನು ಬಿಟ್ಟುಕೊಡಬೇಕೆಂದು ಮನವಿ ಮಾಡಿದ್ದೇವೆ ಎಂದರು. ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಹ ಬಂದು ಸ್ಥಳ ಪರಿಶೀಲನೆ ಮಾಡಿದರು. ಸರ್ಕಾರಿ ಜಮೀನು ಹೆಚ್ಚಿರುವ ಕಡೆ ಮಾಡಿ ಎಂದು ಸಚಿವ ನಾರಾಯಣಗೌಡರಿಗೆ, ಶಿವರಾಮೇಗೌಡ ಮನವಿ ಮಾಡಿದರು.