ಕರ್ನಾಟಕ

karnataka

ETV Bharat / city

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಸಿದ್ಧವಾದ ಹಳ್ಳಿಹಕ್ಕಿ..! - latest political news

ಬಿಗ್ ಬಾಸ್ ಮನೆಗೆ ಪ್ರವೇಶಿಸುವ ತಮ್ಮ ಬಯಕೆಯನ್ನು ಸ್ವತಃ ವಿಶ್ವನಾಥ್ ಬಹಿರಂಗಪಡಿಸಿದ್ದು, ಅವಕಾಶ ಸಿಕ್ಕಲ್ಲಿ ಅತಿಥಿಯಾಗಿ ಆಗಿ ಬಿಗ್ ಬಾಸ್ ಮನೆ ಪ್ರವೇಶಿಸುವುದಾಗಿ ಮಾಜಿ ಸಚಿವ ಹೆಚ್​​.ವಿಶ್ವನಾಥ್ ಹೇಳಿದ್ದಾರೆ.

former-minister-vishwanath-ready-to-enter-bigboss
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಸಿದ್ದವಾದ ಹಳ್ಳಿಹಕ್ಕಿ..!

By

Published : Mar 2, 2021, 2:14 AM IST

Updated : Mar 2, 2021, 9:41 AM IST

ಬೆಂಗಳೂರು: ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಹಳ್ಳಿಹಕ್ಕಿ ಉತ್ಸುಕತೆ ತೋರಿದ್ದು ಅವಕಾಶ ಸಿಕ್ಕಲ್ಲಿ ಅತಿಥಿಯಾಗಿ ಆಗಿ ಬಿಗ್ ಬಾಸ್ ಮನೆ ಪ್ರವೇಶಿಸುವುದಾಗಿ ಹೇಳಿದ್ದಾರೆ.

ಈ ಬಾರಿಯ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಹೋಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಾಗಿದೆ. 17 ಸ್ಪರ್ಧಿಗಳು ಬಿಗ್ ಬಾಸ್ ನಿವಾಸವನ್ನು ಪ್ರವೇಶ ಮಾಡಿದ್ದಾರೆ. ಈ ನಡುವೆ ರಾಜಕಾರಣಿ ಹೆಚ್.ವಿಶ್ವನಾಥ್ ಹೆಸರು ಕೂಡ ಕೇಳಿ ಬರತೊಡಗಿದೆ. ಬಿಗ್ ಬಾಸ್ ನಿವಾಸಕ್ಕೆ ವಿಶ್ವನಾಥ್ ಕೂಡ ಹೋಗಲಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.

ಇದನ್ನೂ ಓದಿ:12 ವರ್ಷದ ಮುಸ್ಲಿಂ ವಿದ್ಯಾರ್ಥಿನಿ ಬಾಯಲ್ಲಿ 500 ಭಗವದ್ಗೀತೆ ಶ್ಲೋಕ!

ಇದರ ನಡುವೆ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ತಮ್ಮ ಬಯಕೆಯನ್ನು ಸ್ವತಃ ವಿಶ್ವನಾಥ್ ಬಹಿರಂಗಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಗ್ ಬಾಸ್ ಸೀಸನ್ 6ಕ್ಕೆ ಆಹ್ವಾನ ಕೊಟ್ಟಿದ್ದರು, ಒಪ್ಪಿಕೊಂಡಿದ್ದೆ. ಆಗ ಆರೋಗ್ಯ ಸಮಸ್ಯೆಯಿಂದ ಹೋಗಲು ಆಗಿರಲಿಲ್ಲ ಈಗ ಕೆಲವು ಸ್ನೇಹಿತರು ಹೋಗ್ತೀರಾ ಅಂತಾ ಹೇಳ್ತಿದ್ದಾರೆ ನನಗೂ ಹೋಗಲು ಆಸೆ ಇತ್ತು ನನಗೆ ಒಂದು ವೇದಿಕೆ ಸಿಕ್ಕಿದಂತಾಗುತ್ತದೆ ಅಂತಾ ಯೋಚನೆ ಮಾಡಿದ್ದೆ. ಚುನಾವಣೆಗಳು ಬಂದಿವೆ, ಅಲ್ಲಿ ಇಲ್ಲಿ ಜವಾಬ್ದಾರಿ ಹಾಕ್ತಾರೆ, ಹಾಗಾಗಿ ಹೋಗಲು ಸ್ವಲ್ಪ ಕಷ್ಟ ಆಗಬಹುದು. ಅವರು ವಿಶೇಷ ಆಹ್ವಾನಿತರಾಗಿ ಬನ್ನಿ ಅಂತಾ ಕರೆದರೆ ಮೂರ್ನಾಲ್ಕು ದಿನಕ್ಕೆ ಹೋಗಬಹುದು ಎಂದು ವಿಶ್ವನಾಥ್ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡುವ ಅಪೇಕ್ಷೆ ವ್ಯಕ್ತಪಡಿಸಿದರು.

ದೇಶದಲ್ಲಿ ಜನರಿಗೆ ಎಲ್ಲಾ ಅರ್ಥ ಆಗುತ್ತಿದ್ದರೂ ರಾಜಕಾರಣ ಅರ್ಥ ಆಗುತ್ತಿಲ್ಲ. ಆ ಮನೆಯಲ್ಲಿ ಯುವಕರು, ಸಿನಿಮಾದವರು, ಗಂಡು ಮಕ್ಕಳು, ಹೆಣ್ಣು ಮಕ್ಕಳು, ಸಿನಿಮಾದವರು ಇದ್ದಾರೆ. ಅಲ್ಲಿ ನಾನು ರಾಜಕಾರಣದ ಸ್ಪಾರ್ಕ್ ಹೆಚ್ಚಿಸಬಹುದು. ಅವಕಾಶ ಸಿಕ್ಕಿದರೆ ಖಂಡಿತಾ ಬಿಗ್ ಬಾಸ್ ಮನೆಗೆ ಹೋಗುತ್ತೇನೆ ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.

Last Updated : Mar 2, 2021, 9:41 AM IST

ABOUT THE AUTHOR

...view details