ಕರ್ನಾಟಕ

karnataka

ETV Bharat / city

ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿದರೆ ಬಿಜೆಪಿ ನಾಯಕರ ಹೆಸರುಗಳಿಗೆ ಮಸಿ : ರಾಮಲಿಂಗಾರೆಡ್ಡಿ ಎಚ್ಚರಿಕೆ - ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ

ಇಂದಿರಾ ಗಾಂಧಿಗೆ ಅಗೌರವ ತೋರಿದರೆ ನಾವೂ ಕೂಡ ಅದೇ ರೀತಿ ಉತ್ತರ ಕೊಡಬೇಕಾಗುತ್ತದೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಜವಾಬ್ದಾರಿಯಿಂದ ಉತ್ತರ ಕೊಡಲಿ. ರಾಜೀವ್ ಗಾಂಧಿ ಕೂಡ ದೇಶಕ್ಕೋಸ್ಕರವೇ ಪ್ರಾಣ ಕೊಟ್ಟಿದ್ದಾರೆ. ರಾಜೀವ್ ಗಾಂಧಿ ಖೇಲ್ ರತ್ನ ಹೆಸರು ಬದಲಾಯಿಸಿದ್ದು ಸರಿಯಲ್ಲ. ಧ್ಯಾನ್ ಚಂದ್ ಹೆಸರು ಬೇರೆ ಯಾವುದಾದರೂ ದೊಡ್ಡ ಯೋಜನೆಗೆ ಇಡಲಿ, ಅದನ್ನ ಬೇಡ ಅನ್ನಲ್ಲ. ಆದರೆ, ಇರುವ ಹೆಸರನ್ನು ಬದಲಾಯಿಸೋದ್ಯಾಕೆ..?

ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ

By

Published : Aug 10, 2021, 7:18 PM IST

ಬೆಂಗಳೂರು :ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಿದರೆ ಬಿಜೆಪಿಯಿಂದ ಇಟ್ಟಿರುವ ಹಲವರ ಹೆಸರಗಳಿಗೆ ಮಸಿ ಬಳಿದು ಹೋರಾಟ ಮಾಡುವುದಾಗಿ ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಕರೆದಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆದಾಗ ಇಂದಿರಾ ಗಾಂಧಿ ಹೆಸರಲ್ಲಿ ಬಡವರಿಗಾಗಿ ಕ್ಯಾಂಟೀನ್ ಮಾಡಿದ್ದೆವು. ರಾಷ್ಟ್ರಕ್ಕೋಸ್ಕರ ಪ್ರಾಣ ಕಳೆದುಕೊಂಡವರು ಇಂದಿರಾಗಾಂಧಿ‌.

ಸಿ ಟಿ ರವಿ ಈಗ ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಬೇಕೆಂದು ಹೇಳಿದ್ದಾರೆ. ಅವರು ಬೇರೆ ಏನಾದ್ರೂ ಹೆಸರಿಡಬೇಕಾದ್ರೆ, ಬೇರೆ ದೊಡ್ಡ ದೊಡ್ಡ ಸ್ಕೀಂ ಮಾಡಿಕೊಳ್ಳಲಿ. ಅವರೇನಾದ್ರೂ ಹೆಸರು ಬದಲಾಯಿಸಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಹೇಳಿದರು.

ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಕಿಡಿ..

ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಿದರೆ ಪರಿಣಾಮ ನೆಟ್ಟಗಿರಲ್ಲ :ಕೆಲವು ಫ್ಲೈ ಓವರ್ ರಸ್ತೆಗಳಿಗೆ ಬಿಜೆಪಿ ನಾಯಕರ ಹೆಸರಿಟ್ಟಿದ್ದಾರೆ. ದೀನದಯಾಳ್ ಉಪಾಧ್ಯಾಯ ಹೆಸರನ್ನು ಯಶವಂತಪುರ ಫ್ಲೈ ಓವರ್​ಗೆ ಇಟ್ಟಿದ್ದಾರೆ‌. ಬಸ್ ನಿಲ್ದಾಣಕ್ಕೆ ವಾಜಪೇಯಿ ಹೆಸರಿಟ್ಟಿದ್ದಾರೆ. ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಿದರೆ ನಾವು ಈ ಎಲ್ಲಾ ಬೋರ್ಡ್​ಗಳಿಗೆ ಮಸಿ ಬಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇಂದಿರಾ ಗಾಂಧಿಗೆ ಅಗೌರವ ತೋರಿದರೆ ನಾವೂ ಕೂಡ ಅದೇ ರೀತಿ ಉತ್ತರ ಕೊಡಬೇಕಾಗುತ್ತದೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಜವಾಬ್ದಾರಿಯಿಂದ ಉತ್ತರ ಕೊಡಲಿ. ರಾಜೀವ್ ಗಾಂಧಿ ಕೂಡ ದೇಶಕ್ಕೋಸ್ಕರವೇ ಪ್ರಾಣ ಕೊಟ್ಟಿದ್ದಾರೆ. ರಾಜೀವ್ ಗಾಂಧಿ ಖೇಲ್ ರತ್ನ ಹೆಸರು ಬದಲಾಯಿಸಿದ್ದು ಸರಿಯಲ್ಲ. ಧ್ಯಾನ್ ಚಂದ್ ಹೆಸರು ಬೇರೆ ಯಾವುದಾದರೂ ದೊಡ್ಡ ಯೋಜನೆಗೆ ಇಡಲಿ, ಅದನ್ನ ಬೇಡ ಅನ್ನಲ್ಲ. ಆದರೆ, ಇರುವ ಹೆಸರನ್ನು ಬದಲಾಯಿಸೋದ್ಯಾಕೆ ಎಂದು ಪ್ರಶ್ನಿಸಿದರು.

ಮೋದಿ ಏನು ಕ್ರಿಕೆಟ್ ಪ್ಲೇಯರಾ?:ಗುಜರಾತ್​ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂ ಅಂತಾ ಹೆಸರಿಟ್ಟರು. ಮೋದಿ ಏನು ದೊಡ್ಡ ಪ್ಲೇಯರಾ? ಮೋದಿ ಏನು ನೂರು ಕ್ಯಾಚ್ ಹಿಡಿದಿದ್ದಾರಾ? ಸೆಂಚುರಿ ಬಾರ್ಸಿದ್ದಾರಾ? ಇವರೇನು ಸಚಿನ್ ತೆಂಡೂಲ್ಕರ್ ತರಹ ದೊಡ್ಡ ಕ್ರಿಕೆಟರಾ ಎಂದು ಪ್ರಶ್ನಿಸಿದರು.

ಮುಂದಕ್ಕೆ ಬಿಜೆಪಿ ಸರ್ಕಾರ ಇಲ್ಲಿಯೂ ಇರಲ್ಲ, ದೇಶದಲ್ಲೂ ಇರಲ್ಲ. ಮುಂದೆ ನಮ್ಮ ಸರ್ಕಾರ ಬಂದರೆ ಇವರು ಇಟ್ಟಿರುವ ಹೆಸರನ್ನು ನಾವೂ ಬದಲಾವಣೆ ಮಾಡುವ ಕಾಲ ಬರುತ್ತದೆ ಎಂದು ವಾಗ್ದಾಳಿ ನಡೆಸಿದರು.

ನಾಲಿಗೆ ಅವರ ಆಚಾರ ತೋರಿಸುತ್ತದೆ :ಸಚಿವ ಕೆ ಎಸ್‌ ಈಶ್ವರಪ್ಪ ಅವಾಚ್ಯ ಪದ ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಅವರ ನಾಲಿಗೆ ಅವರ ಆಚಾರ ತೋರಿಸುತ್ತದೆ. ಬಿಜೆಪಿ ನಾಯಕರ ತಂದೆ ತಾಯಂದಿರು ಇಂಥ ಸಂಸ್ಕೃತಿ ಕಲಿಸಿದ್ದಾರೆ. ಇಂಥ ಭಾಷೆ ಬಳಸುವವರನ್ನು ಪಕ್ಷದಿಂದ ಕಿತ್ತು ಹಾಕಬೇಕು ಎಂದು ಗುಡುಗಿದರು.

ಈ ತರಹ ಕೆಟ್ಟ ಕೆಟ್ಟ ಭಾಷೆ ಕೆಟ್ಟ ಕೆಟ್ಟ ಪದ ಬೇರೆಯವರಿಗೂ ಗೊತ್ತಿರುತ್ತದೆ. ಅದೇ ಪದವನ್ನು ಅವರ ಮೇಲೆ ಬಳಸಿದರೆ ಹೇಗಿರುತ್ತೆ? ಬಿಜೆಪಿಗೆ ನಾಚಿಕೆಗೇಡಿನ ಸಂಗತಿ, ಬಿಜೆಪಿಗೇ ಒಂದು ಕಳಂಕ ಎಂದು ವಾಗ್ದಾಳಿ ನಡೆಸಿದರು. ವಿಧಾನಪರಿಷತ್‌ನ ಮುಖ್ಯ ಸಚೇತಕ ನಾರಾಯಣಸ್ವಾಮಿ, ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಈ ವೇಳೆ ಹಾಜರಿದ್ದರು.

ABOUT THE AUTHOR

...view details