ಕರ್ನಾಟಕ

karnataka

ETV Bharat / city

ಕೆಆರ್​ಎಸ್ ಜಲಾಶಯದ ಸುರಕ್ಷಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ, ಕ್ರಮ ಕೈಗೊಳ್ಳಬೇಕು : ಎಂಬಿಪಾ

ಜಲಾಶಯಗಳಿಂದ ಸುರಕ್ಷಿತ ಅಂತರದಲ್ಲಿ ಗಣಿಗಾರಿಕೆ ನಡೆಯಬೇಕು. ಡ್ಯಾಂ ಸುತ್ತಮುತ್ತ, ನಿಗದಿತ ವ್ಯಾಪ್ತಿಯ ಒಳಗೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ, ಅದರಿಂದ ನಿಜವಾಗಲು ತೊಂದರೆ ಆಗುತ್ತದೆ. ಅದನ್ನ ಸರ್ಕಾರ ತಡೆಗಟ್ಟುವ ಅವಶ್ಯಕತೆ ಇದೆ..

Former Minister MB Patil
ಎಂ.ಬಿ ಪಾಟೀಲ್

By

Published : Jul 9, 2021, 12:41 PM IST

ಬೆಂಗಳೂರು :ಕೆಆರ್​ಎಸ್ ಪುರಾತನ ಜಲಾಶಯವಾಗಿದೆ. ಜಲಾಶಯದ ಸುರಕ್ಷಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ, ಕೂಡಲೇ ಕ್ರಮಕೈಗೊಳ್ಳಬೇಕು. ಕೆಆರ್​ಎಸ್ ಮಾತ್ರವಲ್ಲ, ಯಾವುದೇ ಜಲಾಶಯದ ಸಮೀಪ ಗಣಿಗಾರಿಕೆ ನಡೆಯಲು ಬಿಡಬಾರದು ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

ಸಿಎಂ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳನ್ನು ಇಂದು ಭೇಟಿಯಾಗಿ ಕ್ಷೇತ್ರದ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನೆನಗುದಿಗೆ ಬಿದಿತ್ತು, ಅದರ ಚಾಲನೆಗೆ ಮನವಿ ಮಾಡಿದ್ದೇನೆ ಎಂದರು.

ಕೆಆರ್​ಎಸ್ ಜಲಾಶಯದ ಸುರಕ್ಷಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ, ಕ್ರಮ ಕೈಗೊಳ್ಳಬೇಕು: ಎಂ.ಬಿ ಪಾಟೀಲ್

ಜಲಾಶಯಗಳಿಂದ ಸುರಕ್ಷಿತ ಅಂತರದಲ್ಲಿ ಗಣಿಗಾರಿಕೆ ನಡೆಯಬೇಕು. ಡ್ಯಾಂ ಸುತ್ತಮುತ್ತ, ನಿಗದಿತ ವ್ಯಾಪ್ತಿಯ ಒಳಗೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ, ಅದರಿಂದ ನಿಜವಾಗಲು ತೊಂದರೆ ಆಗುತ್ತದೆ. ಅದನ್ನ ಸರ್ಕಾರ ತಡೆಗಟ್ಟುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಅಂಬರೀಶ್ ನನ್ನ ಸ್ನೇಹಿತ. ನಮ್ಮಿಬ್ಬರ ನಡುವೆ ಒಳ್ಳೆ ಸ್ನೇಹ ಇತ್ತು. ಸುಮಲತಾ ಅವರ ಬಗ್ಗೆಯೂ ಅಪಾರ ಗೌರವ ಇದೆ. ಅಕ್ರಮ ಗಣಿಗಾರಿಕೆ ವಿಚಾರವಾಗಿ ನನಗೆ ಗೊತ್ತಿಲ್ಲ. ಆದರೆ, ಕೆಆರ್​ಎಸ್ ಸೇರಿದಂತೆ ರಾಜ್ಯದ ಹಲವು ಡ್ಯಾಂಗಳ ಆಧುನೀಕರಣಕ್ಕೆ ನಾನು‌ ಜಲಸಂಪನ್ಮೂಲ ಸಚಿವನಾಗಿದ್ದಾಗ ಅನುಮತಿ ಸಿಕ್ಕಿತ್ತು. ಉಮಾ ಭಾರತಿ ಅವರು ಕೇಂದ್ರ ಜಲಸಂಪನ್ಮೂಲ ಸಚಿವೆಯಾಗಿದ್ದರು. ಆಗ ವಿಶ್ವ ಬ್ಯಾಂಕ್ ನೆರವಿನೊಂದಿಗೆ ಡ್ಯಾಂಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿತ್ತು.

ಯಾವುದೇ ಡ್ಯಾಂ ಸುತ್ತಮುತ್ತ ಸುರಕ್ಷಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯಬಾರದು. ಕೆಆರ್​ಎಸ್ ಜಲಾಶಯದ ಸುರಕ್ಷಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.

ABOUT THE AUTHOR

...view details