ಬೆಂಗಳೂರು:ಯಡಿಯೂರಪ್ಪ 15 ಅಲ್ಲ, 30 ಸ್ಥಾನ ಗೆಲ್ಲಲಿ. ನಾನು ಭವಿಷ್ಯ ಹೇಳಲ್ಲ. ನಾನು ಆಶಾವಾದಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಯಡಿಯೂರಪ್ಪ 15 ಅಲ್ಲ,30 ಸ್ಥಾನ ಗೆಲ್ಲಲಿ...ನಾನು ಭವಿಷ್ಯ ಹೇಳಲ್ಲ: ಡಿಕೆಶಿ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಪ್ರಚಾರ ಭರಾಟೆಯಲ್ಲಿದ್ದು, ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಈ ರೀತಿ ಹೇಳುವುದು ಸಹಜ. ಗೆಲ್ಲಲು ನಾವು ನಮ್ಮ ಪ್ರಯತ್ನವನ್ನು ಮಾಡುತ್ತಲೇ ಇದ್ದೇವೆ ಎಂದರು.
ಗೋಕಾಕ್ ಪ್ರಚಾರಕ್ಕೆ ಹೋಗೋ ವಿಚಾರವಾಗಿ ಮಾತನಾಡಿ, ಗೋಕಾಕ್ ಒಂದೇ ಅಲ್ಲ, ಎಲ್ಲ ಕಡೆಯೂ ಹೋಗಬೇಕಿದೆ. ಇಂದು ಚಿಕ್ಕಬಳ್ಳಾಪುರ, ಕೆ.ಆರ್.ಪುರಕ್ಕೆ ಹೋಗ್ತಿದ್ದೇನೆ. ಎಲ್ಲ ಕಡೆಯೂ ಕವರ್ ಮಾಡುತ್ತಿದ್ದೇನೆ. ನಾಳೆ ರಾಣೆಬೆನ್ನೂರು, ಹಿರೇಕೆರೂರಿಗೆ ಹೋಗುತ್ತಿದ್ದೇನೆ. ಪಕ್ಷ ಯಾವ ರೀತಿ ಪ್ರಚಾರ ಕಾರ್ಯಕ್ರಮ ನಿಯೋಜನೆ ಮಾಡಿರುತ್ತೋ ಹಾಗೆ ಹೋಗಬೇಕಾಗುತ್ತೆ ಎಂದರು.
ಅಲ್ಲಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿರೋ ವಿಚಾರ ಪ್ರಸ್ತಾಪಿಸಿ, ಕಾಂಗ್ರೆಸ್ ಕಾರ್ಯಕರ್ತರು ಯಾವ ದಬ್ಬಾಳಿಕೆಗೂ ಬಗ್ಗಲ್ಲ, ಜಗ್ಗಲ್ಲ. ಯಾರಿಗೂ ಪ್ರಚಾರದ ವಿಚಾರದಲ್ಲಿ ಪ್ರತಿಷ್ಠೆ ಇಲ್ಲ. ನಾನೀಗ ಚಿಕ್ಕಬಳ್ಳಾಪುರ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಂ.ಆಂಜಿನಪ್ಪ ಪರ ಪ್ರಚಾರಕ್ಕೆ ತೆರಳಿದ್ದೇನೆ ಎಂದರು.