ಕರ್ನಾಟಕ

karnataka

ETV Bharat / city

ಸನ್ಯಾಸತ್ವ ಸ್ವೀಕರಿಸಿದ ಮಾಜಿ ಸಚಿವ.. ಬಿ.ಜೆ. ಪುಟ್ಟಸ್ವಾಮಿ ಇನ್ಮುಂದೆ ಶ್ರೀ ಪೂರ್ಣಾನಂದ ಪುರಿ ಸ್ವಾಮೀಜಿ - B J Puttaswamy took sanyasa deeksha

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತ ಬಿ.ಜೆ ಪುಟ್ಟಸ್ವಾಮಿ ರಾಜಕೀಯ ತೊರೆದು ಶುಕ್ರವಾರ ಅಧಿಕೃತವಾಗಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ಬೆಂಗಳೂರಿನ ಹೊರವಲಯದ ಮಾದನಾಯಕಹಳ್ಳಿಯ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪ್ರಥಮ ಪೀಠಾಧಿಪತಿಯಾಗಲಿದ್ದಾರೆ.

ಬಿ.ಜೆ. ಪುಟ್ಟಸ್ವಾಮಿ
ಬಿ.ಜೆ. ಪುಟ್ಟಸ್ವಾಮಿ

By

Published : May 7, 2022, 7:32 AM IST

ಬೆಂಗಳೂರು: ಮಾಜಿ ಸಚಿವ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಬಿ.ಜೆ. ಪುಟ್ಟಸ್ವಾಮಿ (82) ಶುಕ್ರವಾರ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ನೆಲಮಂಗಲ ಸಮೀಪವಿರುವ ತೈಲೇಶ್ವರ ಗಾಣಿಗರ ಸಂಸ್ಥಾನ ಮಠದಲ್ಲಿ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಪರಮಪೂಜ್ಯ ಶ್ರೀ ಜಯೇಂದ್ರಪುರಿ ಮಹಾಸ್ವಾಮಿ ಅವರು ಪುಟ್ಟಸ್ವಾಮಿ ಅವರಿಗೆ ಸನ್ಯಾಸ ದೀಕ್ಷೆ ನೀಡಿದರು.

ಶ್ರೀ ಪೂರ್ಣಾನಂದ ಪುರಿ ಸ್ವಾಮಿಗಳೆಂದು ಪುಟ್ಟಸ್ವಾಮಿ ಅವರಿಗೆ ನಾಮಕರಣ ಮಾಡಲಾಗಿದೆ. ಪುಟ್ಟಸ್ವಾಮಿ ಅವರು ಸದ್ಯದಲ್ಲೇ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಪ್ರಥಮ ಪೀಠಾಧಿಪತಿಯಾಗಲಿದ್ದಾರೆ. ಸನ್ಯಾಸ ದೀಕ್ಷೆ ಪಡೆಯುವ ಮುನ್ನ ಗುರುವಾರ ರಾಜರಾಜೇಶ್ವರಿ ದೇವಸ್ಥಾನದ ಕೈಲಾಸ ಆಶ್ರಮದಲ್ಲಿ ಪುಟ್ಟಸ್ವಾಮಿ ಅವರಿಗೆ ಬ್ರಹ್ಮಚರ್ಯ ದೀಕ್ಷೆ ನೀಡಲಾಗಿತ್ತು.

ಸನ್ಯಾಸತ್ವ ಸ್ವೀಕರಿಸಿದ ಬಿ.ಜೆ. ಪುಟ್ಟಸ್ವಾಮಿ

ಇದನ್ನೂ ಓದಿ:ಸನ್ಯಾಸತ್ವದ ಕಡೆ ಬಿಜೆಪಿ ಹಿರಿಯ ನಾಯಕ: ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಗಣ್ಯರಿಗೂ ಆಹ್ವಾನ

ಗಾಣಿಗರ ಮಠದ ಪೀಠಾಧಿಪತಿಯಾಗಿ ಸಮಾಜ ಸುಧಾರಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆನ್ನುವ ಉದ್ದೇಶದಿಂದಲೇ ರಾಜಕಾರಣ ತೊರೆದಿದ್ದೇನೆ. ಕ್ಯಾಬಿನೆಟ್ ದರ್ಜೆಯ ಸ್ಥಾನ‌ಮಾನ ಹೊಂದಿರುವ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಸ್ಥಾನಕ್ಕೆ ಸ್ವಯಂ ಪ್ರೇರಣೆಯಿಂದ ಏಪ್ರಿಲ್ 30 ರಂದು ರಾಜೀನಾಮೆ ನೀಡಲಾಗಿದೆ ಎಂದು ಬಿ.ಜೆ ಪುಟ್ಟಸ್ವಾಮಿ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ:ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಜೆ.ಪುಟ್ಟಸ್ವಾಮಿ ರಾಜೀನಾಮೆ

ABOUT THE AUTHOR

...view details