ಕರ್ನಾಟಕ

karnataka

ETV Bharat / city

ಹೆಣ್ಮಕ್ಕಳಿಗೆ ದೌರ್ಜನ್ಯ: ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ವಿರುದ್ಧ ಮಾಜಿ ಮೇಯರ್‌ ಆಕ್ರೋಶ​ - Resentment against Indira Canteen Contractors

ಇಂದಿರಾ ಕ್ಯಾಂಟೀನ್​​ನಲ್ಲಿ ಕೆಲಸ ಮಾಡುವ ನಾಲ್ವರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮೇಯರ್​ ಶಾಂತ ಕುಮಾರಿ ಬಿಬಿಎಂಪಿ ಮಾಸಿಕ ಸಭೆಯಲ್ಲಿ ಒತ್ತಾಯಿಸಿದರು.

former mayor expressed outrage against the contractors
ಪಾಲಿಕೆ ಮಾಸಿಕ ಸಭೆ

By

Published : Jun 12, 2020, 4:28 PM IST

ಬೆಂಗಳೂರು:ಬಿಬಿಎಂಪಿಮಾಸಿಕ ಸಭೆಯಲ್ಲಿ ಮಾಜಿ ಮೇಯರ್ ಶಾಂತಕುಮಾರಿ ಅವರು ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇಂದಿರಾ ಕ್ಯಾಂಟೀನ್​​ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಬೆಲೆ ಇಲ್ಲವೇ? ಗುತ್ತಿಗೆದಾರ ಸುರೇಶ್ ಪೂಜಾರಿ ಎಂಬಾತ ಸ್ಕೇಲ್ ಹಿಡಿದು ನಾಲ್ವರು ಮಹಿಳಾ ನೌಕರರನ್ನು ಬೆದರಿಸಿ 'ದುಡ್ಡು ಕದ್ದಿದ್ದೇವೆ' ಎಂದು ಬರೆಸಿಕೊಂಡಿದ್ದಾರೆ. ಕಳ್ಳತನ ಮಾಡದಿದ್ದರೂ ಈ ರೀತಿ ನಡೆದುಕೊಂಡಿರುವುದು ಅಸಹ್ಯ. ಇದನ್ನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಬಿಎಂಪಿ ಮಾಸಿಕ ಸಭೆ

ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಗುತ್ತಿಗೆದಾರನಿಗೆ ₹ 2 ಲಕ್ಷ ದಂಡ ಹಾಕುವುದಾಗಿ ಹೇಳಿರುವ ಜೆ.ಸಿ.ವೆಂಕಟೇಶ್ ನಿರ್ಧಾರವನ್ನು ಸ್ವಾಗತಿಸಿರುವ ಅವರು, ಲಾಕ್​​ಡೌನ್ ಸಮಯದಲ್ಲಿ ಎರಡು ತಿಂಗಳು ಉಚಿತವಾಗಿ ನೀಡಿರುವ ಊಟ ಕೆಟ್ಟದಾಗಿತ್ತು. ಪೌರಕಾರ್ಮಿಕರಿಗೆ ಕೊಟ್ಟ ಊಟದಲ್ಲಿ ಚಿಪ್ಪು, ಕೂದಲು, ಹುಳ ಎಲ್ಲವೂ ಇತ್ತು. ಇದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ವಿಡಿಯೋ ಸಹಿತ ದಾಖಲೆ ಇದೆ ಎಂದರು.

ಈಗಿರುವ ಟೆಂಡರ್​​​​ ರದ್ದುಪಡಿಸಿ ಅದಮ್ಯ ಅಥವಾ ಇಸ್ಕಾನ್ ಸಂಸ್ಥೆಗಾದರೂ ಗುತ್ತಿಗೆ ನೀಡಿ. ಆದರೆ, ಪ್ರಸ್ತುತ ಇರುವ ಎರಡು ಗುತ್ತಿಗೆ ಸಂಸ್ಥೆಗಳು ಬೇಡವೇ ಬೇಡ ಎಂದು ಶಾಂತಕುಮಾರಿ ಆಗ್ರಹಿಸಿದರು.

ABOUT THE AUTHOR

...view details