ಕರ್ನಾಟಕ

karnataka

ETV Bharat / city

ಕೊರೊನಾ ರೋಗಕ್ಕಿಂತ ಅದು ಕೊಡುವ ಮಾನಸಿಕ ವೇದನೆ ಅತಿದೊಡ್ಡದು: ದಿನೇಶ್ ಗುಂಡೂರಾವ್ - ಬೆಂಗಳೂರು ನ್ಯೂಸ್​

ಕೊರೊನಾ ರೋಗಕ್ಕಿಂತ ಅದು ಕೊಡುವ ಮಾನಸಿಕ ವೇದನೆ ಅತಿದೊಡ್ಡದು ಎಂದಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಾಂಕ್ರಾಮಿಕ ರೋಗ ಬಾಧೆಯನ್ನು ಎದುರಿಸಿದ ಸಂದರ್ಭದ ಅನುಭವವನ್ನು ಟ್ವೀಟ್ ಮೂಲಕ ಬಿಚ್ಚಿಟ್ಟಿದ್ದಾರೆ.

Former KPCC president Dinesh Gundurao tweet
ಕೊರೊನಾ ರೋಗಕ್ಕಿಂತ ಅದು ಕೊಡುವ ಮಾನಸಿಕ ವೇದನೆ ಅತಿದೊಡ್ಡದು: ದಿನೇಶ್ ಗುಂಡೂರಾವ್

By

Published : Oct 22, 2020, 7:11 PM IST

ಬೆಂಗಳೂರು:ಸಾಂಕ್ರಾಮಿಕ ರೋಗ ಕೊರೊನಾದಿಂದ ಗುಣಮುಖರಾಗಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕೊರೊನಾ ರೋಗಕ್ಕಿಂತ ಅದು ಕೊಡುವ ಮಾನಸಿಕ ವೇದನೆ ಅತಿದೊಡ್ಡದು: ದಿನೇಶ್ ಗುಂಡೂರಾವ್

ಈ ಕುರಿತು ಟ್ವೀಟ್​ ಮಾಡಿರುವ ಅವರು, ಕಳೆದ ಇಪ್ಪತ್ತೈದು ದಿನಗಳಿಂದ ಕೊರೊನಾ ಪಾಸಿಟಿವ್ ಆಗಿ ಹೋಂ ಐಸೋಲೇಶನ್‌ನಲ್ಲಿದ್ದ ನಾನು ಸದ್ಯ ಚೇತರಿಸಿಕೊಂಡಿದ್ದೇನೆ. ಕೊರೊನಾ ಮಾರಕ ಸೋಂಕು. ಅದು ಯಾರಿಗೂ ಬರಬಾರದು. ಪ್ರೀತಿ ಪಾತ್ರರಿಂದ ದೂರವಿರುವ ಸಂಕಟ ಅನುಭವಿಸಿದವರಿಗೆ ಗೊತ್ತು. ಕೊರೊನಾ ಸೋಂಕನ್ನು ನೀವ್ಯಾರು ಲಘುವಾಗಿ ಪರಿಗಣಿಸಬೇಡಿ. ನಿಮ್ಮ ಆರೋಗ್ಯದ ಬಗ್ಗೆ ಸದಾ ಕಾಳಜಿಯಿರಲಿ ಎಂದು ಸಲಹೆ ನೀಡಿದ್ದಾರೆ.

ಕೊರೊನಾ ರೋಗಕ್ಕಿಂತ ಅದು ಕೊಡುವ ಮಾನಸಿಕ ವೇದನೆ ಅತಿದೊಡ್ಡದು: ದಿನೇಶ್ ಗುಂಡೂರಾವ್

ಇನ್ನು, ಇಂದಿರಾ ಕ್ಯಾಂಟೀನ್​ಗೆ ಬಿಬಿಎಂಪಿ ಹಣ ನೀಡದಿರುವುದನ್ನು ಖಂಡಿಸಿರುವ ಅವರು, ಇಂದಿರಾ ಕ್ಯಾಂಟೀನ್ ನಿರ್ವಹಿಸುತ್ತಿರುವ ಬಿಬಿಎಂಪಿಗೆ ಸರ್ಕಾರ ಅನುದಾನ ನೀಡದಿರುವುದು ಹೊಟ್ಟೆಕಿಚ್ಚಿನ ರಾಜಕಾರಣ. ಇಂದಿರಾ ಕ್ಯಾಂಟೀನ್ ಮುಖಾಂತರ ಬಡವರ ಹಸಿದ ಹೊಟ್ಟೆಗಳು ತುಂಬುವುದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಬೇಕಾಗಿಲ್ಲ. ಹಸಿವಿನ ಸಂಕಟ ಮತ್ತು ಅನ್ನದ ಬೆಲೆ ಗೊತ್ತಿದ್ದರೆ, ಕೂಡಲೇ ಅನುದಾನ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details