ಬೆಂಗಳೂರು :ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬಿ.ಎಸ್.ಚಂದ್ರಶೇಖರ್ ಅನಾರೋಗ್ಯದ ಕಾರಣ ಜನವರಿ 17ರಂದು ಬೆಂಗಳೂರಿನ ಜೆ.ಪಿ ನಗರದ ಆಸ್ಟರ್ ಆರ್‌ವಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದೆರಡು ದಿನ ಐಸಿಯುನಲ್ಲಿ ಚಿಕಿತ್ಸೆ ಪಡೆದ ಅವರ ಅರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮನೆಯಲ್ಲಿ ಕ್ರಿಕೆಟ್ ನೋಡುತ್ತಿದ್ದ ಚಂದ್ರಶೇಖರ್ ಅವರು ಇದ್ದಕ್ಕಿದ್ದಂತೆ ಆಯಾಸವಾಗುತ್ತಿದೆ ಎಂದಿದ್ದರು. ಮಾತನಾಡುವ ವೇಳೆ ತೊದಲುತ್ತಿದ್ದರು. ಹಾಗಾಗಿ, ಕೂಡಲೇ ಅವರನ್ನು ಆತ್ಪತ್ರೆಗೆ ಕರೆದುಕೊಂಡು ಬರಲಾಯಿತು. ಈಗ ಅವರು ಉತ್ತಮವಾಗಿದ್ದು, ನಾಳೆ ಜಯನಗರದ ತಮ್ಮ ಮನೆಗೆ ಮರಳಲಿದ್ದಾರೆ ಎಂದು ಚಂದ್ರಶೇಖರ್ ಪತ್ನಿ ಸಂಧ್ಯಾ ಚಂದ್ರಶೇಖರ್ ಈ ಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.