ಬೆಂಗಳೂರು:ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಮತದಾನ ಮಧ್ಯಾಹ್ನದ ನಂತರ ಚುರುಕುಗೊಂಡಿದ್ದು, ಮಧ್ಯಾಹ್ನದ ಬಳಿಕ ಮತದಾರರು ದೊಡ್ಡ ಸಂಖ್ಯೆಯಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮತದಾನದ ಹಕ್ಕು ಚಲಾಯಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ - RR nagar bypoll
ಮಿನಿ ಸಮರದ ಮತದಾನವು ಮಧ್ಯಾಹ್ನದ ಬಳಿಕ ಚುರುಕುಗೊಂಡಿದ್ದು, ಜನರು ಮತಗಟ್ಟೆಗಳತ್ತ ಬರುತ್ತಿದ್ದಾರೆ. ಇಂಡಿಯನ್ ಟೀಮ್ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ತಮ್ಮ ಪತ್ನಿಯೊಂದಿಗೆ ಆರ್.ಆರ್. ನಗರದ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.
ದೊಡ್ಡ ಗಣೇಶ್ ಮತದಾನ
ವಾರ್ಡ್ ಸಂಖ್ಯೆ 38 ಹೆಚ್ಎಂಟಿ ವಾರ್ಡಿನ ಪೀಣ್ಯ ಮೊದಲ ಹಂತದ ಶ್ರೀ ವಿದ್ಯಾ ಕೇಂದ್ರದ ಬೂತ್ ನಂ-46ರಲ್ಲಿ ಟೀಮ್ ಇಂಡಿಯಾದ ಮಾಜಿ ಬೌಲರ್ ದೊಡ್ಡ ಗಣೇಶ್ ಮತ ಚಲಾಯಿಸಿದರು. ಪತ್ನಿ ಜೊತೆಯಲ್ಲಿ ಬಂದು ಮತದಾನ ಮಾಡಿದ ಅವರು, ಸಂತೋಷದಿಂದ ಬೆರಳಿನ ಶಾಹಿ ತೋರಿಸಿ ಎಲ್ಲರೂ ಬಂದು ತಮ್ಮ ಹಕ್ಕು ಚಲಯಿಸುವಂತೆ ಕರೆ ನೀಡಿದರು.
Last Updated : Nov 3, 2020, 5:17 PM IST