ಬೆಂಗಳೂರು:ಕಾಂಗ್ರೆಸ್ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪ್ರಧಾನಿ ನರೇಂದ್ರ ಮೋದಿಗೆ ಮರುಚುನಾವಣೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.
ಮೋದಿಗೆ ತಾಕತ್ತಿದ್ದರೆ ಮರುಚುನಾವಣೆ ಘೋಷಿಸಲಿ: ಉಗ್ರಪ್ಪ ಬಹಿರಂಗ ಸವಾಲ್ - ರಾಜ್ಯಸಭೆಗೆ ಹೋಗುವ ಆಸೆಯೇನಾದ್ರೂ ಅವರಿಗೆ ಇರಬಹುದು
ಕಾಂಗ್ರೆಸ್ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪ್ರಧಾನಿ ನರೇಂದ್ರ ಮೋದಿಗೆ ಮರುಚುನಾವಣೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.
ಪ್ರಧಾನಿ ಮೋದಿಗೆ ಉಗ್ರಪ್ಪ ಓಪನ್ ಚಾಲೆಂಜ್ ಮಾಡುತ್ತಿದ್ದೇನೆ, ಅಸೆಂಬ್ಲಿ, ಸಂಸತ್ ವಿಸರ್ಜಿಸಿ ಚುನಾವಣೆಗೆ ಬನ್ನಿ. ಬ್ಯಾಲೆಟ್ ಪೇಪರ್ ಮೇಲೆ ಚುನಾವಣೆ ಎದುರಿಸಿ, ಚುನಾವಣೆಯಲ್ಲಿ ನೀವು ಗೆದ್ದು ಬನ್ನಿ. ಆಗ ನಾನು ಇರುವವರೆಗೆ ನಿಮ್ಮ ಬಗ್ಗೆ ಒಂದೂ ಮಾತನಾಡಲ್ಲ ಎಂದರು. ಕನ್ನಡದ ಸಾಹಿತಿ ಡಾ. ಎಸ್.ಎಲ್.ಭೈರಪ್ಪನವರ ಬರವಣಿಗೆ ಅದ್ಬುತ. ಅವರ ವಿಚಾರಗಳು ಏನೇ ಇರಲಿ, ಆದರೆ ಅವರು ಯಾವಾಗ ಬಿಜೆಪಿ ಸೇರಿದ್ರು ಗೊತ್ತಿಲ್ಲ. ಬೈರಪ್ಪನವರು ಬಿಜೆಪಿಯ ವಿಚಾರಧಾರೆಯನ್ನ ಮಂಡಿಸುತ್ತಿದ್ದು, ರಾಜ್ಯಸಭೆಗೆ ಹೋಗುವ ಆಸೆಯೇನಾದ್ರೂ ಅವರಿಗೆ ಇರಬಹುದು. ಬಿಜೆಪಿ ನಾಯಕರು ಅವರಿಗೆ ಕೊಡೋಕೆ ಹೊರಟಿರಬಹುದು. ಭೈರಪ್ಪ ಅದಕ್ಕೇ ಬಿಜೆಪಿಯನ್ನ ಹೊಗಳುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಇದನ್ನ ನೀವು ಅರಿತುಕೊಂಡರೆ ಸಾಕು ಭೈರಪ್ಪನವರೇ, ಇಳಿವಯಸ್ಸಿನಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಯಾಕೆ ಮಸಿ ಬಳಿದುಕೊಳ್ತೀರಾ. ಲೇಖಕರು ಅಂತ ಯಾಕೆ ಹಣೆಪಟ್ಟಿ ಹಾಕಿಕೊಳ್ತೀರಾ ಎಂದು ಆಕ್ರೋಶ ಹೊರ ಹಾಕಿದರು.