ಕರ್ನಾಟಕ

karnataka

ETV Bharat / city

ಜಾಹೀರಾತು ಫಲಕ ಅಳವಡಿಸಲು ಅನುಮತಿ ನೀಡಬೇಡಿ : ಕೈ ಮಾಜಿ ಮೇಯರ್​ಗಳಿಂದ ಪತ್ರ - ಬೆಂಗಳೂರು ಲೇಟೆಸ್ಟ್​ ನ್ಯೂಸ್

ಬೆಂಗಳೂರು ನಗರದಲ್ಲಿ ಜಾಹೀರಾತು ಫಲಕಗಳ ಗೊಂದಲವಿಲ್ಲದೇ ನಗರವು ಈಗ ಸುಂದರವಾಗಿದೆ. ಅದನ್ನು ಹಾಳುಗೆಡುವವ ಕೆಲಸದಲ್ಲಿ ತಾವು ಭಾಗಿ ಆಗುವುದಿಲ್ಲವೆಂದು ನಾವು ನಂಬಿದ್ದೇವೆ ಎಂದು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕಾಂಗ್ರೆಸ್ ಮಾಜಿ ಮೇಯರ್​ಗಳು ಪತ್ರ ಬರೆದಿದ್ದಾರೆ.

former-congress-mayors-letter-to-general-secretary-of-the-urban-development-department
ಜಾಹೀರಾತು ಫಲಕ ಅಳವಡಿಸಲು ಅನುಮತಿ ನೀಡಬೇಡಿ: ಕೈ ಮಾಜಿ ಮೇಯರ್​ಗಳಿಂದ ಪತ್ರ

By

Published : Jan 16, 2021, 6:38 AM IST

ಬೆಂಗಳೂರು:ನಗರದಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಅನುಮತಿ ನೀಡದಂತೆ ಕೋರಿ ಕಾಂಗ್ರೆಸ್ ಮಾಜಿ ಮೇಯರ್​ಗಳಾದ ರಾಮಚಂದ್ರಪ್ಪ, ಹುಚ್ಚಪ್ಪ ಮತ್ತು ಪಿ.ಆರ್. ರಮೇಶ್ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಜಾಹೀರಾತು ಫಲಕ ಅಳವಡಿಸಲು ಅನುಮತಿ ನೀಡಬೇಡಿ: ಕೈ ಮಾಜಿ ಮೇಯರ್​ಗಳಿಂದ ಪತ್ರ
ಪತ್ರದಲ್ಲಿ ಕೆಎಂಸಿಯ ಹೊಸ ನಿಯಮದಂತೆ, ಬೆಂಗಳೂರು ನಗರದಲ್ಲಿ ಜಾಹೀರಾತು ಫಲಕಗಗಳ ಅಳವಡಿಸುವುದರ ಬಗ್ಗೆ ಆಯುಕ್ತರು ತಮ್ಮ ಅನುಮತಿಗಾಗಿ ಪತ್ರ ಬರೆದಿರುವ ಬಗ್ಗೆ ನಮಗೆ ತಿಳಿದು ಬಂದಿರುತ್ತದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆಎಂಸಿ ಹಳೆಯ ನಿಯಮದಂತೆ ನಗರದಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಬಾರದೆಂಬ ನಿಯಮವಿದೆ. ಚುನಾಯಿತ ಸದಸ್ಯರು ಇಲ್ಲದಿರುವಾಗ ಮತ್ತು ಈ ಎಲ್ಲದರ ಬಗ್ಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ಯಾವ ಕ್ಷಣದಲ್ಲಾದರೂ ತೀರ್ಪು ಹೊರಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ತಾವು ಯಾವುದೇ ಕಾರಣಕ್ಕೂ ತೀರ್ಪು ಬರುವ ಮೊದಲು ಜಾಹೀರಾತು ಫಲಕಗಳನ್ನು ಅಳವಡಿಸಲು ಅನುಮತಿ ಕೊಡಬಾರದೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

ಓದಿ:ಪುಲ್ವಾಮಾ.. ಇದು ಪ್ರತಿದಿನ 8.5 ಲಕ್ಷ ಲೀಟರ್ ಹಾಲು ಉತ್ಪಾದಿಸುವ ‘ಕಾಶ್ಮೀರದ ಆನಂದ್’

ಬೆಂಗಳೂರು ನಗರದಲ್ಲಿ ಜಾಹೀರಾತು ಫಲಕಗಳ ಗೊಂದಲವಿಲ್ಲದೇ ನಗರವು ಈಗ ಸುಂದರವಾಗಿದೆ. ಅದನ್ನು ಹಾಳು ಮಾಡುವ ಕೆಲಸದಲ್ಲಿ ತಾವು ಭಾಗಿಯಾಗುವುದಿಲ್ಲವೆಂದು ನಾವು ನಂಬಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details