ಕರ್ನಾಟಕ

karnataka

ETV Bharat / city

ಶಾಲೆಯಲ್ಲಿ ಹಿಜಾಬ್ ಧರಿಸುವುದನ್ನು ತಡೆಯುವುದು ಮೂಲಭೂತ ಹಕ್ಕಿನ ಉಲ್ಲಂಘನೆ: ಸಿದ್ದರಾಮಯ್ಯ ಕಿಡಿ - ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಕುಮ್ಮಕ್ಕು ಕೊಡಬಾರದು. ಪ್ರಾಂಶುಪಾಲರನ್ನು ವಜಾ‌ ಮಾಡಬೇಕು. ಇದರಲ್ಲಿ ರಾಜಕೀಯ ಬೆರೆಸಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

former-cm-siddaramaiah-on-hijab-issue
ಶಾಲೆಯಲ್ಲಿ ಹಿಜಾಬ್ ಧರಿಸಲು ತಡೆಯುವುದು ಮೂಲಭೂತಹಕ್ಕಿನ ವಿರುದ್ಧವಾಗಿದೆ: ಸಿದ್ದರಾಮಯ್ಯ ಕಿಡಿ

By

Published : Feb 4, 2022, 1:34 PM IST

ಬೆಂಗಳೂರು:ಹಿಜಾಬ್ ಧರಿಸುವುದು ಬಹಳ ವರ್ಷಗಳಿಂದ ನಡೆದು ಬರುತ್ತಿದೆ. ಅದಕ್ಕೆ ತಡೆಯೊಡ್ಡುವುದು ಮೂಲಭೂತ ಹಕ್ಕಿಗೆ ವಿರುದ್ಧವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ

ಉಡುಪಿಯಲ್ಲಿ ನಡೆಯುತ್ತಿರುವ ಹಿಜಾಬ್ ಗಲಾಟೆಗೆ ಪ್ರತಿಕ್ರಿಯಿಸಿದ ಅವರು, ಶಾಲೆಯಲ್ಲಿ ಸಮವಸ್ತ್ರ ಕಡ್ಡಾಯ ಮಾಡಿ ಅಂತ ಸರ್ಕಾರ ಎಲ್ಲೂ ಹೇಳಿಲ್ಲ. ಇದು ಮೂಲ ಹಕ್ಕಿನ ವಿರುದ್ಧವಾಗಿದೆ. ಬಿಜೆಪಿಯವರು ಇದನ್ನು ಬೇಕಂತಲೇ ಮಾಡುತ್ತಿದ್ದಾರೆ. ಹಲವು ವರ್ಷದಿಂದ ಹಿಜಾಬ್ ಧರಿಸುವುದು ನಡೆಯುತ್ತಿದೆ.

ಹಿಜಾಬ್ ಹಾಕಿದ ವಿದ್ಯಾರ್ಥಿಗಳನ್ನು ಶಾಲೆಯೊಳಗೆ ಪ್ರವೇಶಕ್ಕೆ ಅನುಮತಿ ನೀಡದೇ ಇರುವುದರಿಂದ ಮಕ್ಕಳನ್ನು ವಿದ್ಯೆಯಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಇದು ಸಂವಿಧಾನ ವಿರೋಧಿಯಾಗಿದೆ. ಚುನಾವಣೆ ಹತ್ತಿರ ಬರುತ್ತಿದೆ. ಕರಾವಳಿ ಭಾಗದಲ್ಲಿ ಇಂಥದ್ದನ್ನೇ ಬಿಜೆಪಿ, ಆರ್​ಎಸ್ಎಸ್ ಹುಟ್ಟುಹಾಕ್ತಿದೆ ಎಂದು ಆರೋಪಿಸಿದರು.

ಸ್ಕಾರ್ಫ್ ಹಾಕೋದು ಅವರ ಧಾರ್ಮಿಕ ನಿಯಮ. ಎಷ್ಟೋ ವರ್ಷಗಳಿಂದ ನಡೆಯುತ್ತಾ ಬರ್ತಿದೆ. ಈಗ ಏಕೆ ಅದನ್ನು ತಂದಿರೋದು?. ಸರ್ಕಾರಿ ಕಾಲೇಜ್ ಪ್ರಿನ್ಸಿಪಾಲ್ ತಡೆಯೋದು ಸರಿಯೇ?. ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಪ್ರಯತ್ನ ಇದು. ರಘುಪತಿ ಭಟ್ ಹೇಳಿದರು ಎಂದು ಈ ರೀತಿ ಮಾಡುತ್ತಿದ್ದಾರೆ. ಅವರು ಯಾವಾಗಿನಿಂದ ಹಿಜಾಬ್ ಹಾಕುತ್ತಿದ್ದಾರೆ. ಅವರು ಅದಕ್ಕೆ ಧರ್ಮ ಮಿಕ್ಸ್ ಮಾಡೋದು ಬೇಡ ಎಂದರು.

ಇದನ್ನೂ ಓದಿ:ಕಾವೇರಿ - ಪೆನ್ನಾರ್ ನದಿ ಜೋಡಣೆ ಕೇಂದ್ರದ ಏಕಮುಖ ನಿರ್ಧಾರ: ಸಿದ್ದರಾಮಯ್ಯ

ಸರ್ಕಾರ ಇದಕ್ಕೆ ಕುಮ್ಮಕ್ಕು ಕೊಡಬಾರದು. ಪ್ರಾಂಶುಪಾಲರನ್ನು ವಜಾ‌ ಮಾಡಬೇಕು. ಇದರಲ್ಲಿ ರಾಜಕೀಯ ಬೆರೆಸಬಾರದು. ಜನವರಿ 8ರಂದು ಕೋರ್ಟ್​​ನಲ್ಲಿ ಇದರ ವಿಚಾರಣೆ ಇದೆ. ಕೋರ್ಟ್ ಏನು ಹೇಳುತ್ತದೆ ಎಂಬುದರ ಆಧಾರದ ಮೇಲೆ ನಮ್ಮ ಅಭಿಪ್ರಾಯ ಹೇಳುತ್ತೇವೆ. ಸಂಘ ಪರಿವಾರದ ಪ್ರಯೋಗಾಲಯವೇ ದಕ್ಷಿಣ ಕನ್ನಡವಾಗಿದೆ. ಸರ್ಕಾರ ಏಕೆ ಇಷ್ಟು ದಿನ‌ ಮೌನವಾಗಿತ್ತು? ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಇದೇ ವೇಳೆ ಮಾತನಾಡಿದ ಶಾಸಕ ಯು.ಟಿ.ಖಾದರ್, ಸರ್ಕಾರ ಈ ವಿಚಾರವಾಗಿ ಮೌನವಾಗಿದೆ. ಒಂದೂವರೆ ತಿಂಗಳಿಂದ ಏಕೆ ಸುಮ್ಮನಿದ್ದರು. ಇದು ದೊಡ್ಡದಾಗಲಿ ಎಂದೇ ಅವರು ಮೌನವಾಗಿದ್ದಾರೆ. ಈ ಬಗ್ಗೆ ಸರ್ಕಾರ ಕೂತು ಚರ್ಚಿಸಬೇಕಿತ್ತು. ಮೌನವಾಗಿರುವುದರಿಂದ ಪರಿಸ್ಥಿತಿ ಬಿಗಡಾಯಿಸುತ್ತದೆ. ಇದನ್ನು ಗಂಭೀರವಾಗಿ ಸರ್ಕಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details