ಕರ್ನಾಟಕ

karnataka

ETV Bharat / city

ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಮಾಜಿ ಸಿಎಂ ಸಿದ್ದರಾಮಯ್ಯ! - banglore latest news

ರಾಜ್ಯದಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಜೊತೆಗೆ ತಮ್ಮ ಎಡಗಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಿಕೊಂಡಿರುವ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹುಟ್ಟುಹಬ್ಬವನ್ನು ಆಚರಣೆ  ಮಾಡಿಕೊಳ್ಳಲು ನಿರಾಕರಿಸಿದ್ದಾರೆ.

ಈ ಭಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಮಾಜಿ ಸಿಎಂ ಸಿದ್ದರಾಮಯ್ಯ

By

Published : Aug 12, 2019, 4:45 PM IST

ಬೆಂಗಳೂರು:ರಾಜ್ಯದಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಏರ್ಪಟ್ಟಿರುವ ಜೊತೆಗೆ ತಮ್ಮ ಎಡಗಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಿಕೊಂಡಿರುವ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಲು ನಿರಾಕರಿಸಿದ್ದಾರೆ.

ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಮಾಜಿ ಸಿಎಂ ಸಿದ್ದರಾಮಯ್ಯ

ಇಂದು 72ನೇ ವಸಂತಕ್ಕೆ ಕಾಲಿಟ್ಟಿರುವ ಸಿದ್ದರಾಮಯ್ಯ ಬೆಳಗಿಂದಲೂ ತಮ್ಮ ಸರ್ಕಾರಿ ನಿವಾಸ ಕಾವೇರಿಯಲ್ಲಿದ್ದು, ತಮಗೆ ವಿಶ್​ ಮಾಡಲು ಬಂದಿರುವ ಅಭಿಮಾನಿಗಳನ್ನು ಕೂಡ ಮನೆಗೆ ಬಿಟ್ಟುಕೊಂಡಿಲ್ಲ. ರಾಜ್ಯದಲ್ಲಿ ಪ್ರವಾಹದಿಂದ ಜನರು ಸಂಕಷ್ಟದಲ್ಲಿದ್ದಾರೆ. ಜೊತೆಗೆ ಎಡಗಣ್ಣಿನ ಆಪರೇಷನ್ ಕೂಡ ಇತ್ತೀಚೆಗಷ್ಟೇ ಮಾಡಿಸಿಕೊಂಡಿದ್ದೇನೆ. ಹೀಗಾಗಿ ಈ ಬಾರಿ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಕಣ್ಣಿಗೆ ಅಲರ್ಜಿ ಆಗಲಿದೆ ಎಂದು ಡಾಕ್ಟರ್ ಹೇಳಿರುವ ಹಿನ್ನೆಲೆ ಒಂದು ವಾರದಿಂದ ತಮ್ಮನ್ನು ಭೇಟಿಯಾಗಲು ಬರುವವರಿಗೆ ಹೂವಿನ ಬೊಕ್ಕೆ ಕೂಡ ತರದಂತೆ ಸೂಚಿಸಿದ್ದಾರೆ. ಅಲ್ಲದೇ, ನೆರೆಪೀಡಿತ ಪ್ರದೇಶಗಳಿಗೆ ಕೂಡ ಭೇಟಿ ಕೊಡದೇ ವಾರದಿಂದ ಮನೆಯಲ್ಲೇ ಕುಳಿತಿದ್ದಾರೆ. ಒಂದೆರಡು ದಿನ ಯಾರನ್ನು ಭೇಟಿಯಾಗದಿರಲು ಅವರು ನಿರ್ಧರಿಸಿದ್ದು, ಮನೆಗೆ ಬರದಂತೆ ಆಪ್ತರಿಗೂ ಸೂಚಿಸಿದ್ದಾರೆ.

ಸಿದ್ದರಾಮಯ್ಯ ನಿವಾಸ ಕಾವೇರಿ ಬಳಿ ಅಭಿಮಾನಿಗಳು ಬಂದಿದ್ದು, ಯಾರನ್ನೂ ಕೂಡ ಒಳಗೆ ಬಿಟ್ಟಿಲ್ಲ. ನೆಲ್ಸನ್ ಮಂಡೇಲಾ ಅಭಿಮಾನಿಗಳ ಸಂಘದವರು ಸಿದ್ದರಾಮಯ್ಯ ನಿವಾಸದ ಮುಂಭಾಗ ಬಂದು ತಮಟೆ, ವಾಲಗ ಊದುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿ, ಸಿದ್ದರಾಮಯ್ಯರನ್ನು ಭೇಟಿಯಾಗಲು ಅವಕಾಶ ಸಿಗದೇ ವಾಪಸ್ ತೆರಳಿದ್ದಾರೆ.

ABOUT THE AUTHOR

...view details