ಬೆಂಗಳೂರು:ಸದಾಶಿವನಗರ ನಿವಾಸದ ಬಳಿ ನಿವೃತ್ತ ಲೋಕಾಯುಕ್ತ ವೆಂಕಟಾಚಲ ಅವರ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಟ್ಟು ವಿಧಿ-ವಿಧಾನಗಳನ್ನ ಕುಟುಂಬಸ್ಥರು ಮನೆಯ ಎದುರು ನೆರವೇರಿಸಿದರು. ಈ ವೇಳೆ, ಈಗಿನ ಲೋಕಾಯುಕ್ತ ವಿಶ್ವನಾಥ ಶೆಟ್ಟಿ, ಮಾಜಿ ಸಿಎಂ ಎಸ್ಎಂ ಕೃಷ್ಣ, ವೆಂಕಟಾಚಲ ಅವರ ಅಂತಿಮ ದರ್ಶನ ಪಡೆದರು.
ಇದೇ ವೇಳೆ, ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಿದ ಈ ಹಿಂದಿನ ಸರ್ಕಾರ ಎಂದು ಆರೋಪಿಸಿದರು. ವೆಂಕಟಾಚಲ ಅವರು ಲೋಕಾಯುಕ್ತ ಅಂದ್ರೆ ಏನು ಅನ್ನೋದನ್ನು ತೋರಿಸಿದ್ರು. ಅವರ ನಂತರ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ಅದನ್ನು ಇನ್ನೂ ವೇಗದಿಂದ ಮುಂದುವರಿಸಿದ್ರು. ಆದ್ರೆ ಹಿಂದಿನ ಸರ್ಕಾರ ಅದನ್ನ ಕೇವಲ ನಾಮಕೇವಾಸ್ತೆ ರೀತಿ ಮಾಡಿದೆ. ಯಾವ ಉದ್ದೇಶಕ್ಕೆ ಈ ರೀತಿ ಮಾಡಿದ್ರು ಎಂದು ಗೊತ್ತಿಲ್ಲ. ಮತ್ತೆ ಲೋಕಾಯುಕ್ತ ಪುನಶ್ಚೇತನ ಆಗಬೇಕಿದೆ. ಆ ನಿಟ್ಟಿನಲ್ಲಿ ಯಡಿಯೂರಪ್ಪ ಸರ್ಕಾರ ಕೆಲಸ ಮಾಡಬೇಕಿದೆ ಎಂದರು.