ಕರ್ನಾಟಕ

karnataka

ETV Bharat / city

ರಾಜ್ಯದಲ್ಲೂ ತೈಲ‌ದರ ಮೇಲಿನ ಸುಂಕ ಇಳಿಸಿ, ಜನರಿಗೆ ನೆರವಾಗಿ : ಕುಮಾರಸ್ವಾಮಿ ಆಗ್ರಹ

ಕೇಂದ್ರದಂತೆ ರಾಜ್ಯ ಸರ್ಕಾರವೂ ಕೂಡ ತೈಲದರದ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿ, ಜನರಿಗೆ ನೆರವಾಗಬೇಕು ಎಂದು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.

former-cm-h-d-kuma
ಕುಮಾರಸ್ವಾಮಿ ಆಗ್ರಹ

By

Published : May 22, 2022, 7:50 PM IST

ಬೆಂಗಳೂರು :ಕೇಂದ್ರ ಸರ್ಕಾರ ತೈಲದರದ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದ್ದು, ರಾಜ್ಯದಲ್ಲೂ ತೈಲ ಬೆಲೆ ಮೇಲಿನ ಸುಂಕ ಕಡಿತಗೊಳಿಸಿ ಬಸವಳಿದಿರುವ ಜನರಿಗೆ ನೆರವಾಗಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಜನಾಕ್ರೋಶಕ್ಕೆ ಕೊನೆಗೂ ಮಣಿದಿರುವ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದೆ. ಹೀಗಾಗಿ, ತೈಲ ಬೆಲೆಗಳು ದೇಶಾದ್ಯಂತ ಕಡಿಮೆಯಾಗುತ್ತಿವೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ. ಸುಂಕ ಕಡಿತಕ್ಕೆ ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

ನೆರೆಯ ಕೇರಳದಲ್ಲಿ ಈಗಾಗಲೇ ಸುಂಕ ಕಡಿತ ಮಾಡಲಾಗಿದೆ. ಆದರೆ, ರಾಜ್ಯ ಬಿಜೆಪಿ ಸರ್ಕಾರ ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಎನ್ನುವ ವ್ಯಾಪಾರಿ ಬುದ್ಧಿಯ ಜಾಣ ನಡೆ ಅನುಸರಿಸುತ್ತಿದೆ. ತೆರಿಗೆ ಕಡಿತದ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಅವರು ಹೇಳಿರುವುದು ಒಪ್ಪುವ ಮಾತಲ್ಲ ಎಂದಿದ್ದಾರೆ.

ಅಧಿಕಾರದಲ್ಲಿ ಇರುವವರಿಗೆ ಅತಿ ಜಾಣತನ ಒಳ್ಳೆಯದಲ್ಲ. ಕೋವಿಡ್, ಸತತ ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನರ ತಾಳ್ಮೆ ಪರೀಕ್ಷೆ ಮಾಡುವುದು ಒಳ್ಳೆಯದಲ್ಲ ಎಂದು ತಿಳಿಸಿದ್ದಾರೆ.

ಓದಿ:ರಾಜ್ಯ ಸರ್ಕಾರವೂ ಪೆಟ್ರೋಲ್-ಡೀಸೆಲ್ ಮೇಲಿನ ಸುಂಕ ಕಡಿತ ಮಾಡಲಿ : ಬಿಎಸ್‌ಬಿಗೆ ಬಿಎಸ್​ವೈ ಸಲಹೆ

For All Latest Updates

ABOUT THE AUTHOR

...view details