ಕರ್ನಾಟಕ

karnataka

ETV Bharat / city

ಆನಂದ್ ಸಿಂಗ್‌ಗೆ ಬಿಎಸ್​​ವೈ ಬುದ್ಧಿವಾದ : CM ಭೇಟಿಗೆ ಸೂಚನೆ - ಸಿಎಂ ಭೇಟಿಗೆ ಸೂಚನೆ

ಇಂದು ಸಂಜೆ ಆನಂದ್ ಸಿಂಗ್ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡುತ್ತಾರೆ. ಸಿಎಂ ಭೇಟಿ ಬಳಿಕ ಆನಂದ್ ಸಿಂಗ್ ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದರು. ನಾನು ಅತೃಪ್ತ ಶಾಸಕ ಅಲ್ಲ. ನಾನು ಸಚಿವ ಸ್ಥಾನ ಕೇಳಿದ್ದು ನಿಜ. ಆದರೆ, ನನಗೆ ಸಚಿವ ಸ್ಥಾನ ಸಿಗಲಿಲ್ಲ. ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ ಇಲ್ಲ ಎಂದು ರಾಜೂಗೌಡ ಸ್ಪಷ್ಟಪಡಿಸಿದರು..

Former CM BS Yediyurappa Advice Anand singh
ಯಡಿಯೂರಪ್ಪ ಜೊತೆ ಆನಂದ್​ ಸಿಂಗ್​, ರಾಜೂಗೌಡ

By

Published : Aug 11, 2021, 7:17 PM IST

Updated : Aug 11, 2021, 8:12 PM IST

ಬೆಂಗಳೂರು :ಸಚಿವ ಆನಂದ್ ಸಿಂಗ್ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬುದ್ಧಿ ಮಾತುಗಳನ್ನು ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ಸೂಚನೆ ನೀಡಿದ್ದಾರೆ ಎಂದು ಶಾಸಕ ರಾಜೂಗೌಡ ತಿಳಿಸಿದ್ದಾರೆ.

ಯಡಿಯೂರಪ್ಪ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್ ಸಿಂಗ್ ಅವರನ್ನು ಕರೆದುಕೊಂಡು ಬರಲು ತಿಳಿಸಿದ್ದರು. ನಾನು ಅವರನ್ನು ಕರೆ ತಂದಿದ್ದೇನೆ. ತಮ್ಮ ನೋವನ್ನು ಯಡಿಯೂರಪ್ಪ ಮುಂದೆ ಹೇಳಿದ್ದಾರೆ. ತಮ್ಮ ಅಹವಾಲು ಹೇಳಿಕೊಂಡಿದ್ದಾರೆ.

ತಮ್ಮ ನಿರ್ಧಾರವನ್ನೂ ಯಡಿಯೂರಪ್ಪ ಮುಂದೆ ತಿಳಿಸಿದ್ದಾರೆ. ಅದಕ್ಕೆ ಯಡಿಯೂರಪ್ಪ ಅವರು ಸಮಯಾವಕಾಶ ಕೊಡಿ, ಬಗೆಹರಿಸೋಣ ಎಂದಿದ್ದು, ಆನಂದ್ ಸಿಂಗ್‌ಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎಂದರು.

ಇಂದು ಸಂಜೆ ಆನಂದ್ ಸಿಂಗ್ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡುತ್ತಾರೆ. ಸಿಎಂ ಭೇಟಿ ಬಳಿಕ ಆನಂದ್ ಸಿಂಗ್ ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದರು. ನಾನು ಅತೃಪ್ತ ಶಾಸಕ ಅಲ್ಲ. ನಾನು ಸಚಿವ ಸ್ಥಾನ ಕೇಳಿದ್ದು ನಿಜ. ಆದರೆ, ನನಗೆ ಸಚಿವ ಸ್ಥಾನ ಸಿಗಲಿಲ್ಲ. ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ ಇಲ್ಲ ಎಂದು ರಾಜೂಗೌಡ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಸಿಎಂ ಬಳಿ ನನಗಾದ ಅನ್ಯಾಯ ತೋಡಿಕೊಂಡಿದ್ದು, ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ: ಆರ್ ಶಂಕರ್​​

Last Updated : Aug 11, 2021, 8:12 PM IST

ABOUT THE AUTHOR

...view details