ಕರ್ನಾಟಕ

karnataka

ETV Bharat / city

ಹಿಂದಿನ ಮೈತ್ರಿ ನಾಯಕರು ಆಡಳಿತ ಮಾಡಿಲ್ಲ, ಟೆಲಿಫೋನ್​​​ ಟ್ಯಾಪ್​​​ ಮಾಡಿದ್ದಾರೆ: ಈಶ್ವರಪ್ಪ - Former alliance leaders

ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ನೋಡಿದರೆ ಮೈತ್ರಿ ಸರ್ಕಾರದ ನಾಯಕರು ಆಡಳಿತ ಮಾಡಿಲ್ಲ. ಟೆಲಿಫೋನ್ ಎಕ್ಸ್​​​ಚೇಂಜ್ ಕೆಲಸ ಮಾಡಿದ್ದಾರೆ ಎಂದು‌ ಮಾಜಿ ದೋಸ್ತಿಗಳಿಗೆ ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದ್ದಾರೆ.

ಕೆ.ಎಸ್ ಈಶ್ವರಪ್ಪ

By

Published : Sep 27, 2019, 3:07 AM IST

ಬೆಂಗಳೂರು: ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ನೋಡಿದರೆ ಮೈತ್ರಿ ಸರ್ಕಾರದ ನಾಯಕರು ಆಡಳಿತ ಮಾಡಿಲ್ಲ. ಟೆಲಿಫೋನ್ ಎಕ್ಸ್​ಚೇಂಜ್ ಕೆಲಸ ಮಾಡಿದ್ದಾರೆ ಎಂದು‌ ಮಾಜಿ ದೋಸ್ತಿಗಳಿಗೆ ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದ್ದಾರೆ.

ಕೆ.ಎಸ್ ಈಶ್ವರಪ್ಪ ಟ್ವೀಟ್

ಹಿಂದಿನ 'ಮಿಶ್ರ' ಸರ್ಕಾರದ 14 ತಿಂಗಳ ಆಡಳಿತದಲ್ಲಿ ಜನರ ಸಮಸ್ಯೆ ಆಲಿಸುವುದನ್ನು ಬಿಟ್ಟು ವಿವಿಧ ಗಣ್ಯರ ಟೆಲಿಫೋನ್ ಟ್ಯಾಪ್ ಮಾಡಿರುವುದನ್ನು ನೋಡಿದರೆ ಇವರು ಟೆಲಿಫೋನ್ ಎಕ್ಸ್​​ಚೇಂಜ್ ಕೆಲಸ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದು ಸಚಿವ ಈಶ್ವರಪ್ಪ ಟ್ವೀಟ್ ಮೂಲಕ ಕಾಂಗ್ರೆಸ್-ಜೆಡಿಎಸ್ ನಾಯಕರ ಕಾಲೆಳೆದಿದ್ದಾರೆ.

ABOUT THE AUTHOR

...view details