ಕರ್ನಾಟಕ

karnataka

ETV Bharat / city

ಎಸ್ಸಿ-ಎಸ್ಟಿ ಮೀಸಲಾತಿ ಕುರಿತು ಪರಾಮರ್ಶೆಗೆ ಸಚಿವ ಸಂಪುಟ ಉಪ ಸಮಿತಿ ರಚನೆ: ಶ್ರೀರಾಮುಲು ಅಧ್ಯಕ್ಷ - Cabinet sub-committee to go into SC/ST quota hike formed

ಎಸ್ಸಿ-ಎಸ್ಟಿಗೆ ನೀಡಿರುವ ಮೀಸಲಾತಿ ಕುರಿತು ಪರಾಮರ್ಶಿಸಲು ರಚಿಸಿರುವ ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷರಾಗಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಆಯ್ಕೆಯಾಗಿದ್ದಾರೆ.

Social Welfare Minister B. Sriramulu
ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು

By

Published : Nov 26, 2020, 5:11 PM IST

ಬೆಂಗಳೂರು:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ನೀಡಿರುವ ಮೀಸಲಾತಿ ಕುರಿತು ಪರಾಮರ್ಶಿಸಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ.

ಇದನ್ನೂ ಓದಿ...ಬಂಧಿಸಲು ಹೋದ ಪೊಲೀಸರ ಮೇಲೆಯೇ ಆರೋಪಿಗಳ ಸಹಚರರಿಂದ ಹಲ್ಲೆ! ವಿಡಿಯೋ

ನವೆಂಬರ್ 18ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಣಯದಂತೆ ಸಮಿತಿ ರಚಿಸಲಾಗಿದ್ದು, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅದಕ್ಕೆ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ನೇಮಕ

ಸದಸ್ಯರಾಗಿ ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಹಾಗೂ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಆಯ್ಕೆಯಾಗಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ, ಸಚಿವ ಸಂಪುಟ ಉಪ ಸಮಿತಿಗೆ ಅಗತ್ಯ ನೆರವನ್ನು ನೀಡಲಿದೆ. ಸಂಪುಟ ಉಪ ಸಮಿತಿ ವರದಿ ಸಿದ್ಧಪಡಿಸಿ ನೀಡುವ ಜವಾಬ್ದಾರಿ ಹೊತ್ತಿದೆ.

ABOUT THE AUTHOR

...view details