ಕರ್ನಾಟಕ

karnataka

ETV Bharat / city

ಲೌಡ್ ಸ್ಪೀಕರ್ ಬಳಕೆ: ಸರ್ಕಾರದ ವಿಸ್ತೃತ ಮಾರ್ಗಸೂಚಿಯಲ್ಲಿ ಏನಿದೆ? - ಧ್ವನಿ ವರ್ಧಕ ಬಳಕೆ ಬಗ್ಗೆ ಕರ್ನಾಟಕ ಸರ್ಕಾರ ಮಾಗ್ಸೂಚಿಎ

ಆಜಾನ್ ವರ್ಸಸ್ ಹನುಮಾನ್ ಚಾಲೀಸ ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಧ್ವನಿವರ್ಧಕ ಬಳಕೆ ಸಂಬಂಧ ಸರ್ಕಾರ ಮಾನದಂಡಗಳನ್ನು ನಿಗಡಿಪಡಿಸಿ ಆದೇಶ ಹೊರಡಿಸಿದೆ.

Azaan vs Hanuman Chalisa row
Azaan vs Hanuman Chalisa row

By

Published : May 10, 2022, 7:38 PM IST

Updated : May 10, 2022, 10:48 PM IST

ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಹಿನ್ನೆಲೆ ರಾಜ್ಯ ಸರ್ಕಾರ ಧ್ವನಿ ವರ್ಧಕಗಳ ಬಳಕೆ ಸಂಬಂಧ ಮಾನದಂಡಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಈ ಸಂಬಂಧ ವಿಶೇಷ ಸುತ್ತೋಲೆ ಹೊರಡಿಸಿದ್ದಾರೆ.

ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಗೃಹ ಇಲಾಖೆ ಡಿಜಿ ಮತ್ತು ಐಜಿಪಿ ಅವರೊಂದಿಗೆ ನಡೆದ ಸಭೆಯಲ್ಲಿ ಸಿಎಂ ಬೊಮ್ಮಾಯಿ ತಕ್ಷಣ ಆದೇಶ ಹೊರಡಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆ ರಾಜ್ಯ ಸರ್ಕಾರ ಧ್ವನಿ ವರ್ಧಕಗಳ ಬಳಕೆ ಸಂಬಂಧ ಮಾನದಂಡಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿಯಂತ್ರಣ) ನಿಯಮ ಹಾಗೂ ರಾಜ್ಯ ಸರ್ಕಾರದ ಹಿಂದಿನ ಆದೇಶ, ಸುಪ್ರೀಂಕೋರ್ಟ್ ಆದೇಶಗಳಲ್ಲಿ ಅಂಶಗಳನ್ನು ಅಳವಡಿಸಿಕೊಂಡು ಆದೇಶ ಪ್ರಕಟಿಸಿದೆ.

ಸರ್ಕಾರಿ ಆದೇಶ ಪ್ರತಿ

ಆದೇಶದಲ್ಲಿ 'ಹಗಲಿನ ಸಮಯ' ಎಂದರೆ ಬೆಳಗ್ಗೆ 6 ರಿಂದ 10 ರವರೆಗೆ ಮತ್ತು 'ರಾತ್ರಿಯ ಸಮಯ' ಎಂದರೆ ರಾತ್ರಿ 10ರಿಂದ ಬೆಳಗಿನ ಜಾವ 6 ರವರೆಗೆ ಎಷ್ಟು ಡೆಸಿಬಲ್ ಧ್ವನಿವರ್ಧಕದ ಶಬ್ದ ಪ್ರಮಾಣ ಇರಬೇಕು ಎಂಬುದನ್ನು ನಿಗದಿಪಡಿಸಿ ಆದೇಶದಲ್ಲಿ ತಿಳಿಸಲಾಗಿದೆ.

ಮುಖ್ಯಮಂತ್ರಿಗಳು ಸಭೆಯಲ್ಲಿ ನಿಯಮಗಳು ಮತ್ತು ಕರ್ನಾಟಕ ಸರ್ಕಾರದ ಆದೇಶವನ್ನು ಇನ್ಮುಂದೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದರು. ಧ್ವನಿವರ್ಧಕಗಳು ಅಥವಾ ಸಾರ್ವಜನಿಕ ಸ್ಥಳದಲ್ಲಿ ವ್ಯವಸ್ಥೆಯನ್ನು ಬಳಸುವ ಎಲ್ಲಾ ಬಳಕೆದಾರರು 15 ದಿನಗಳೊಳಗೆ ಗೊತ್ತುಪಡಿಸಿದ ಪ್ರಾಧಿಕಾರದಿಂದ ಲಿಖಿತ ಅನುಮತಿಯನ್ನು ಪಡೆಯಬೇಕು. ಪಡೆಯದವರು ಸ್ವಯಂಪ್ರೇರಣೆಯಿಂದ ತೆಗೆದುಹಾಕಬೇಕು. ಲೌಡ್ ಸ್ಪೀಕರ್/ಸಾರ್ವಜನಿಕ ಸ್ಥಳದಲ್ಲಿ ದ್ವನಿವರ್ಧಕ ಅಳವಡಿಕೆ ವ್ಯವಸ್ಥೆಗಾಗಿ ಅರ್ಜಿಯನ್ನು ಪಡೆಯಲು ವಿವಿಧ ಹಂತಗಳಲ್ಲಿ ಸಮಿತಿಯನ್ನು ರಚಿಸಬೇಕು. ಈ ಕೆಳಗಿನ ಸಮಿತಿಗಳು ನೀಡಬೇಕಾದ ಅನುಮತಿಗಳನ್ನು ನಿರ್ಧರಿಸುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

(ಇದನ್ನೂ ಓದಿ:ಧ್ವನಿವರ್ಧಕ ಅಳವಡಿಕೆಗೆ ಅನುಮತಿ ಕಡ್ಡಾಯ: ಸರ್ಕಾರದ ಆದೇಶ ಸ್ವಾಗತಿಸಿದ ಮುತಾಲಿಕ್)

ವಿಸ್ತೃತ ಮಾರ್ಗಸೂಚಿ:ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವ ಸಂಬಂಧ ಅರಣ್ಯ ಹಾಗೂ ಪರಿಸರ ಇಲಾಖೆ ಮಾರ್ಗಸೂಚಿಯನ್ನು ಹೊರಡಿಸಿದೆ. ಶಬ್ದ ಮಾಲಿನ್ಯದ ನಿಯಂತ್ರಣ ಕಾಯ್ದೆಯನ್ವಯ ವಿವಿಧ ವಲಯಗಳಲ್ಲಿ ಅನುಸರಿಸಬೇಕಾದ ಶಬ್ದದ ಪ್ರಮಾಣವನ್ನು ಉಲ್ಲೇಖಿಸಲಾಗಿದೆ. ಅದರಂತೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ (ಬೆಳಗಿನ ಸಮಯ), ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ (ರಾತ್ರಿ ಸಮಯ) ನಿಗದಿತ ಡೆಸಿಬಲ್​​ನಲ್ಲಿ ಲೌಡ್ ಸ್ಪೀಕರ್ ಬಳಸಲು ಸೂಚಿಸಲಾಗಿದೆ.
ಕೈಗಾರಿಕಾ ವಲಯ:
ಬೆಳಗಿನ ಸಮಯ - 75 ಡೆಸಿಬಲ್
ರಾತ್ರಿ ಸಮಯ - 70 ಡೆಸಿಬಲ್
ವಾಣಿಜ್ಯ ವಲಯ:
ಬೆಳಗಿನ ಸಮಯ - 65 ಡೆಸಿಬಲ್
ರಾತ್ರಿ ಸಮಯ - 55 ಡೆಸಿಬಲ್
ವಸತಿ ಪ್ರದೇಶ:

ಬೆಳಗಿನ ಸಮಯ - 55 ಡೆಸಿಬಲ್
ರಾತ್ರಿ ಸಮಯ - 45 ಡೆಸಿಬಲ್
ನಿಶ್ಯಬ್ದ ವಲಯ:
ಬೆಳಗಿನ ಸಮಯ - 50 ಡೆಸಿಬಲ್
ರಾತ್ರಿ ಸಮಯ - 40 ಡೆಸಿಬಲ್
ಡಿಜಿಪಿ, ಪೊಲೀಸ್ ಆಯುಕ್ತರು, ಡಿವೈಎಸ್​ಪಿ ದರ್ಜೆಗಿಂತ ಮೇಲ್ಪಟ್ಟ ಗೃಹ ಇಲಾಖೆಯ ಅಧಿಕಾರಿಗಳು ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ಲಿಖಿತ ಅನುಮತಿ ಪಡೆಯದೇ ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಸುವಂತಿಲ್ಲ. ರಾತ್ರಿ ಸಮಯದಲ್ಲಿ ಲೌಡ್ ಸ್ಪೀಕರ್ ಬಳಸುವಂತಿಲ್ಲ. ಒಳಾಗಂಣದಲ್ಲಿ ಮಾತ್ರ ಬಳಸಬಹುದಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾತ್ರಿ ಸಮಯದಲ್ಲಿ ಯಾರೂ ಡ್ರಮ್, ಟಾಂಟಾಂ, ಊದುವುದನ್ನು ಮಾಡುವಂತಿಲ್ಲ. ವಸತಿ ಪ್ರದೇಶಗಳಲ್ಲಿ ರಾತ್ರಿ ಸಮಯ ವಾಹನಗಳು ಹಾರ್ನ್ ಹಾಕುವಹಾಗಿಲ್ಲ.

15 ದಿನದೊಳಗೆ ಎಲ್ಲಾ ಲೌಡ್ ಸ್ಪೀಕರ್​ಗಳನ್ನು ಬಳಸುವವರು ಲಿಖಿತ ಅನುಮತಿ ಪಡೆಯಬೇಕು. 15 ದಿನದೊಳಗೆ ಅನುಮತಿ ಪಡೆಯದೇ ಇದ್ದರೆ, ಸ್ವಯಂ ಪ್ರೇರಿತವಾಗಿ ಲೌಡ್ ಸ್ಪೀಕರ್​ಗಳನ್ನು ತೆರವು ಮಾಡಬೇಕು.‌ ಇಲ್ಲವಾದಲ್ಲಿ 15 ದಿನಗಳ ಬಳಿಕ ಅಧಿಕಾರಿಗಳು ಲೌಡ್ ಸ್ಪೀಕರ್ ತೆರವು ಮಾಡಲಿದ್ದಾರೆ.

ಸರ್ಕಾರಿ ಆದೇಶ ಪ್ರತಿ
Last Updated : May 10, 2022, 10:48 PM IST

ABOUT THE AUTHOR

...view details