ಕರ್ನಾಟಕ

karnataka

ETV Bharat / city

ವರಮಹಾಲಕ್ಷ್ಮಿ ಹಬ್ಬ: ಗಗನಕ್ಕೇರಿದ ಹೂವಿನ ಬೆಲೆ - ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ

ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವುಗಳ ದರ ಹೆಚ್ಚಾಗಿದೆ. ಇದಕ್ಕೆ ಕಾರಣ ಒಂದು ಮಳೆ ಕೊರತೆಯಾದರೆ, ಇನ್ನೊಂದು ರಾಜ್ಯದಲ್ಲಿ ಸೃಷ್ಟಿಯಾದ ಪ್ರವಾಹ ಪರಿಸ್ಥಿತಿಯಾಗಿದೆ.

ವರಮಹಾಲಕ್ಷ್ಮೀ ಹಬ್ಬಕ್ಕೆ ದುಬಾರಿ‌ ಆದ ಹೂವಿನ ದರ

By

Published : Aug 7, 2019, 10:39 PM IST

ಬೆಂಗಳೂರು: ನಗರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಕಳೆಕಟ್ಟಿದೆ. ಒಂದು ಕಡೆ ಹಬ್ಬಕ್ಕೆ ತಯಾರಿ ಜೋರಾಗಿದ್ದರೆ ಮತ್ತೊಂದು ಕಡೆ ಹಬ್ಬದ ಆಕರ್ಷಣೆಯಾದ ಹೂವುಗಳ ದರ ಮಾತ್ರ ಗಗನಕ್ಕೇರಿದೆ..

ವರಮಹಾಲಕ್ಷ್ಮಿ ಹಬ್ಬಕ್ಕೆ ಹೀಗೆ ದಿಢೀರ್ ಹೂವಿನ ದರ ಏರಿಕೆಗೆ ಕಾರಣ ಒಂದು ಮಳೆ ಕೊರತೆಯಾದರೆ, ಇನ್ನೊಂದು ರಾಜ್ಯದಲ್ಲಿ ಸೃಷ್ಟಿಯಾದ ಪ್ರವಾಹ ಪರಿಸ್ಥಿತಿ. ಮೊದಲು ಮಳೆ ಕೊರತೆ ಕಾರಣ ಮಾರುಕಟ್ಟೆಗೆ ಹೂವು ಬಂದಿದ್ದು ಕಡಿಮೆ‌, ಹೀಗಾಗಿ ಹೂವಿನ ದರ ದುಪ್ಪಟ್ಟಾಗಿತ್ತು. ಇದೀಗ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಯಿಂದ ಹೂವಿನ ರಫ್ತಿಗೆ ತೊಂದರೆಯಾಗುತ್ತಿದೆ ಹಾಗೂ ಬೆಳೆದ ಹೂವು ಮಳೆಗೆ ಹಾಳಾಗುತ್ತಿರೋದ್ರಿಂದ ಮಾರುಕಟ್ಟೆ ಬರುತ್ತಿರುವ ಹೂವಿನ ಬೆಲೆ ದುಪ್ಪಟ್ಟಾಗ್ತಿದೆ.

ವರಮಹಾಲಕ್ಷ್ಮೀ ಹಬ್ಬಕ್ಕೆ ದುಬಾರಿ‌ ಆದ ಹೂವಿನ ದರ

ಹೂವುಗಳ ದರ (ಕೆಜಿ) ಹೀಗಿದೆ:

  • ಮಲ್ಲಿಗೆ ಮೊಗ್ಗು: 700-800 ರೂ.
  • ಕನಕಾಂಬರ: 1400 ರೂ.
  • ಸೇವಂತಿ: 500-600 ರೂ.
  • ಸುಗಂಧ ರಾಜ: 150 ರೂ.
  • ಗುಲಾಬಿ: 250 ರೂ.

ಹಬ್ಬದ ಹಿಂದಿನ‌ ದಿನ ಹೂವುಗಳ ರೇಟು ಇನ್ನಷ್ಟು ದುಬಾರಿಯಾಗಲಿದೆ ಎಂಬುದು ಹೂವಿನ ಮಾರಾಟಗಾರರ ಮಾತು.

ABOUT THE AUTHOR

...view details