ಕರ್ನಾಟಕ

karnataka

ETV Bharat / city

ಲಾಲ್​​​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ: ವಾಹನ ಸವಾರರಿಗೆ ಕೆಲ ಸೂಚನೆ - ವಾಹನ ಮಾರ್ಗ ಬದಲಾವಣೆ

ಲಾಲ್​​​ಬಾಗ್​ನ ಗಾಜಿನ ಮನೆಯಲ್ಲಿ ‌ಪ್ರತಿ ವರ್ಷದಂತೆ ಈ ವರ್ಷವೂ ಸಹ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, ವಾಹನ ಸವಾರರಿಗೆ ಕೆಲ ಸೂಚನೆಗಳನ್ನು ಪೊಲೀಸ್ ಇಲಾಖೆ ತಿಳಿಸಿದೆ.

ಲಾಲ್​​​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ

By

Published : Aug 9, 2019, 6:06 PM IST

ಬೆಂಗಳೂರು: ಸ್ವಾತಂತ್ರ್ಯ ದಿನದ ಅಂಗವಾಗಿ ನಗರದ ಲಾಲ್​​​ಬಾಗ್​ನ ಗಾಜಿನ ಮನೆಯಲ್ಲಿ ‌ಪ್ರತಿ ವರ್ಷದಂತೆ ಈ ವರ್ಷವೂ ಸಹ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.

ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಗಣ್ಯರು, ಸಾರ್ವಜನಿಕರು, ದೇಶ - ವಿದೇಶಿ ಪ್ರೇಕ್ಷಕರು ಹಾಗೂ ಶಾಲಾ ಮಕ್ಕಳು‌ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ‌ ಕಾರಣ ಲಾಲ್​​ಬಾಗ್​ನ ಸುತ್ತಮುತ್ತ ಸುಗಮ ವಾಹನ ಸಂಚಾರ ದೃಷ್ಟಿಯಿಂದ ವಾಹನ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ವಾಹನ ಸಂಚಾರ ಮಾರ್ಗ ಬದಲಾವಣೆ ಹೀಗಿದೆ‌:

ಭಾರತ್ ಜಂಕ್ಷನ್ ಹಾಗೂ ಪೂರ್ಣಿಮಾ ಜಂಕ್ಷನ್ ಕಡೆಯಿಂದ ಬಂದು ಊರ್ವಶಿ ಜಂಕ್ಷನ್ ಮುಖಾಂತರ ಡಾ. ಮರಿಗೌಡ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನ ಊರ್ವಶಿ ಜಂಕ್ಷನ್ ಮುಖಾಂತರ ಸಿದ್ದಯ್ಯ ರಸ್ತೆ - ಕೆ.ಹೆಚ್ ಜಂಕ್ಷನ್- ವಿಲ್ಸನ್ ಗಾರ್ಡನ್ ಮುಖ್ಯ ರಸ್ತೆಯ 12ನೇ ಕ್ರಾಸ್ ಮುಖಾಂತರ ವಾಹನ ಸವಾರರು ಸಂಚಾರ ಮಾಡಬಹುದಾಗಿದೆ

ವಾಹನನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳ:

ದ್ವಿಚಕ್ರ ವಾಹನಗಳನ್ನ ಆಲ್ ಅಮೀನ್ ಕಾಲೇಜ್ ಆವರಣ, ಶಾಂತಿನಗರ ಬಿಎಂಟಿಸಿ ಡಿಪೋ ಆವರಣದ 5 ಮಹಡಿಗಳಲ್ಲಿ 500 ಕಾರು ಮತ್ತು 2000 ದ್ವಿಚಕ್ರ ವಾಹನಗಳ ನಿಲುಗಡೆಗೆ ಹಾಗೂ ಜೆ.ಸಿ ರಸ್ತೆಯಲ್ಲಿ ಬಿ‌ಬಿಎಂಪಿ ವಾಹನಗಳ ನಿಲುಗಡೆ ಸ್ಥಳ ಕಲ್ಪಿಸಲಾಗಿದೆ.

ಎಲ್ಲೆಲ್ಲಿ ವಾಹನ ನಿಲುಗಡೆ ನಿಷೇಧ:

ಮರಿಗೌಡ ರಸ್ತೆ, ಲಾಲ್​ಬಾಗ್ ಮುಖ್ಯದ್ವಾರದಿಂದ ನಿಮಾನ್ಸ್ ವರೆಗಿನ ರಸ್ತೆಯ ಎರಡು ಬದಿ, ಕೆ.ಹೆಚ್ ರಸ್ತೆ, ಕೆ.ಹೆಚ್ ವೃತ್ತದಿಂದ ಶಾಂತಿನಗರ ಜಂಕ್ಷನ್ ರಸ್ತೆಯ ಎರಡೂ ಬದಿ, ಲಾಲ್​ಬಾಗ್ ರಸ್ತೆಯ ಸುಬ್ಬಯ್ಯ ವೃತ್ತದಿಂದ ಲಾಲ್​​ಬಾಗ್​​ ಮುಖ್ಯ ದ್ವಾರದ ವರೆಗೆ, ಸಿದ್ದಯ್ಯ ರಸ್ತೆ, ಊರ್ವಶಿ ಜಂಕ್ಷನ್​ನಿಂದ ವಿಲ್ಸನ್ ಗಾರ್ಡನ್​ನ 12ನೇ ಕ್ರಾಸ್, ಟಿ ಮರಿಯಪ್ಪ ರಸ್ತೆ, ಅಶೋಕ ಪಿಲ್ಲರ್​​ನಿಂದ ಸಿದ್ದಾಪುರ ಜಂಕ್ಷನ್ ವರೆಗೆ ವಾಹನ ನಿಲುಗಡೆಗೆ ನಿಷೇಧ ಮಾಡಲಾಗಿದೆ.

ABOUT THE AUTHOR

...view details