ಬೆಂಗಳೂರು: ಬಜೆಟ್ ಸಿದ್ಧತೆಯಲ್ಲಿ ತೊಡಗಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎಫ್‍ಕೆಸಿಸಿಐ ಜೊತೆ ಮುಖಂಡರ ಸಭೆ ನಡೆಸಿದ್ದರು. ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಪೆರಿಕಲ್ ಎಂ. ಸುಂದರ್, ಉಪಾಧ್ಯಕ್ಷ ಐ.ಎಸ್. ಪ್ರಸಾದ್, ಗೋಪಾಲ್ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
ಸಿಎಂಗೆ ಆರ್ಥಿಕ ಕ್ಷೇತ್ರದ ಬಜೆಟ್ ಶಿಫಾರಸು ಸಲ್ಲಿಸಿದ ಎಫ್‍ಕೆಸಿಸಿಐ - FKCCI submitted the financial sector budget recommendation to the CM
ಸುಲಭತೆ, ಮೂಲಭೂತ ಸೌಲಭ್ಯ ಅಭಿವೃದ್ಧಿ, ತೆರಿಗೆ ಕಾರ್ಯನೀತಿ, ಸಂಶೋಧನೆ ಮತ್ತು ಅಭಿವೃದ್ಧಿ, ಪ್ರವಾಸೋದ್ಯಮ, ವಿದ್ಯುಚ್ಛಕ್ತಿ, ಕರ ಸಮಾಧಾನ ಯೋಜನೆಯನ್ನು ಪುನಃ ಜಾರಿಗೊಳಿಸಬೇಕು, ಕೆಐಎಡಿಬಿ ವಿಷಯಗಳು, ಭೂಸುಧಾರಣೆ, ಕೌಶಲ್ಯ ಅಭಿವೃದ್ಧಿ ಸೇರಿದಂತೆ 26ಕ್ಕೂ ಹೆಚ್ಚು ವಿಚಾರಗಳ ಶಿಫಾರಸ್ಸನ್ನು ಎಫ್‍ಕೆಸಿಸಿಐ ಸಿಎಂ ಯಡಿಯೂಪ್ಪ ಅವರಿಗೆ ಸಲ್ಲಿಸಿದೆ.
ಬಿ. ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಹಾಗೂ ಕೈಗಾರಿಕಾ ಬೆಳವಣಿಗೆಯನ್ನು ಕೈಗೊಳ್ಳುತ್ತಿದೆ. ಈಗ ಇರುವ ವ್ಯಾಪಾರ ಮಾಡುವುದರಲ್ಲಿ ಸುಗಮತೆ ಹಾಗೂ ಹೊಸ ಕೈಗಾರಿಕಾ ನೀತಿ 2020-25ನ್ನು ಪ್ರಾರಂಭಿಸಿರುವುದು ರಾಜ್ಯ ಸರ್ಕಾರದಿಂದ ಪ್ರಾರಂಭಿಸಲಾದ ದಿಟ್ಟ ಹೆಜ್ಜೆಯಾಗಿದೆ.
ಈ ನಿಟ್ಟಿನಲ್ಲಿ ವಾಣಿಜ್ಯ ಕ್ಷೇತ್ರಕ್ಕೆ ಅಗತ್ಯವಿರುವ ಬೇಡಿಕೆಗಳ ಪಟ್ಟಿ ಸಲ್ಲಿಸಲಾಯಿತು.ಎಂಎಸ್ಎಂಇಗಳು ವ್ಯಾಪಾರ ಹಾಗೂ ಸೇವಾ ವಲಯಗಳಿಗೆ ಸಂಬಂಧಿಸಿದಂತೆ ಕಾನೂನುಗಳು ಹಾಗೂ ಕಾರ್ಯ ವಿಧಾನಗಳ ಸರಳೀಕರಣಕ್ಕೆ ಸಂಬಂಧಿಸಿದ ನಿಯಮಗಳು ಹಾಗೂ ನಿಯಂತ್ರಣದ ಬಗೆಗಿನ ಹಲವು ಕ್ಷೇತ್ರಗಳಲ್ಲಿ ಎಫ್‍ಕೆಸಿಸಿಐ ಶಿಫಾರಸ್ಸು ಮಾಡಿತು. ವ್ಯಾಪಾರ ಹಾಗೂ ಕೈಗಾರಿಕೆಯ ನಮ್ಮ ಸದಸ್ಯರಿಂದ, ಸಂಘಗಳಿಂದ ಹಾಗೂ ಜಿಲ್ಲಾ ವಾಣಿಜ್ಯ ಚೇಂಬರ್ಗಳಿಂದ ಸ್ವೀಕರಿಸಲಾದ ಹಲವಾರು ನಿವೇದನೆಗಳ ಆಧಾರದಲ್ಲಿ ಕರ್ನಾಟಕ ರಾಜ್ಯ ಬಜೆಟ್ 2021-2022 ಕ್ಕೆ ಶಿಫಾರಸ್ಸುಗಳನ್ನು ಸಲ್ಲಿಕೆ ಮಾಡಿದೆ.