ಕರ್ನಾಟಕ

karnataka

ETV Bharat / city

ವಿಲ್ಸನ್​ ಗಾರ್ಡನ್​​​ ಪೊಲೀಸ್​ ಠಾಣೆಯ ಐವರು ಸಿಬ್ಬಂದಿಗೆ ಕೊರೊನಾ! - ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ

ವಿಲ್ಸನ್​ ಗಾರ್ಡನ್​​ ಸಂಚಾರಿ ಪೊಲೀಸ್​​​ ಠಾಣೆಯ ಐವರು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಈವರೆಗೂ 97 ಸೋಂಕಿತ ಪೊಲೀಸರ ಪೈಕಿ 35 ಮಂದಿ ಗುಣಮುಖರಾಗಿದ್ದು, ಮೂವರು ಮೃತಪಟ್ಟಿದ್ದಾರೆ.

Five Police constable have corona
ಕೊರೊನಾ ವೈರಸ್​​

By

Published : Jun 24, 2020, 7:37 PM IST

ಬೆಂಗಳೂರು: ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯ ಐವರು ಸಿಬ್ಬಂದಿಗೆ ಇಂದು ಕೊರೊನಾ ವಕ್ಕರಿಸಿದೆ.

ಕೊರೊನಾ‌ ‌ನಿಯಂತ್ರಿತ‌ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಸಂಚಾರಿ ಪೊಲೀಸರ ಪೈಕಿ ಎಎಸ್ಐ, ಇಬ್ಬರು ಹೆಡ್ ಕಾನ್ಸ್​ಟೇಬಲ್​​, ಇಬ್ಬರು ಕಾನ್ಸ್​​ಟೇಬಲ್​​ಗೆ‌ ಸೋಂಕು ದೃಢವಾಗಿದೆ.

ಠಾಣೆಯನ್ನು ಸ್ಯಾನಿಟೈಸ್ ಮಾಡಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ನಗರ ಪೊಲೀಸ್ ಇಲಾಖೆಯಲ್ಲಿ‌ ಈವರೆಗೂ 97 ಪೊಲೀಸರಿಗೆ ಸೋಂಕು ತಗುಲಿದ್ದು, ಮೂವರು ಸಾವನ್ನಪ್ಪಿದ್ದಾರೆ. 35ಕ್ಕೂ ಹೆಚ್ಚು ಪೊಲೀಸರು ಗುಣಮುಖರಾಗಿದ್ದಾರೆ.

‌ನಗರದಲ್ಲಿನ 115 ಪೊಲೀಸ್ ಠಾಣೆಗಳ ಪೈಕಿ 15 ಠಾಣೆಗಳನ್ನು ಸಂಪೂರ್ಣ ಸೀಲ್​ ​ಡೌನ್ ಮಾಡಲಾಗಿದೆ. ಸಿಟಿ ಮಾರ್ಕೆಟ್, ಕಲಾಸಿಪಾಳ್ಯ, ವಿವಿ ಪುರಂ ಪೊಲೀಸ್ ಠಾಣೆಗಳು ಕೊರೊನಾ ಹಾಟ್​​ಸ್ಪಾಟ್​​​ಗಳಾಗಿವೆ.

ABOUT THE AUTHOR

...view details