ಕರ್ನಾಟಕ

karnataka

ETV Bharat / city

ಬೆಂಗಳೂರಿನಲ್ಲಿ ಒಂದೇ ದಿನ ಕೊರೊನಾಗೆ ಐವರು ಬಲಿ! - corona Infected Five people dead

ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆಯೊಂದಿಗೆ ಸೋಂಕಿಗೆ ಬಲಿಯಾದವರ ಸಂಖ್ಯೆಯು ಏರಿಕೆ ಆಗ್ತಿದೆ. ಒಟ್ಟಾರೆ ಬೆಂಗಳೂರು ಒಂದರಲ್ಲೇ 32 ಮಂದಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 84ಕ್ಕೆ ಏರಿಕೆ ಆಗಿದೆ.

today corona Infected Five people dead Bangalore
ಬೆಂಗಳೂರಿನಲ್ಲಿ ಒಂದೇ ದಿನ ಕೊರೊನಾಗೆ ಐವರು ಬಲಿ

By

Published : Jun 13, 2020, 8:39 PM IST

ಬೆಂಗಳೂರು:‌ರಾಜ್ಯರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರು ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಒಂದೇ ದಿನ ಕೊರೊನಾಗೆ ಐವರು ಬಲಿ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಕೊರೊನಾಗೆ ಬಲಿಯಾಗಿದ್ದಾರೆ. ಸೆಂಟ್ ಮಾರ್ಥಾಸ್ ಆಸ್ಪತ್ರೆಯಿಂದ ರವಾನೆ‌ ಆಗಿದ್ದ 61 ವರ್ಷದ ಪುರುಷ ಹಾಗೂ 57 ವರ್ಷದ ಪುರುಷ ಕೊರೊನಾದಿಂದ ಮೃತಪಟ್ಟಿದ್ದು, ಇವರನ್ನ ರಾಜೀವ್ ಗಾಂಧಿ ಆಸ್ಪತ್ರೆಯಿಂದ ಶಿಫ್ಟ್ ಮಾಡಲಾಗಿತ್ತು. 58 ವರ್ಷದ ವ್ಯಕ್ತಿಯನ್ನು ಜೂನ್ 5ರಂದು ಖಾಸಗಿ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ರವಾನಿಸಲಾಗಿತ್ತು. ಕಿಮ್ಸ್​​ನಿಂದ ಜೂನ್ 12ರಂದು ರವಾಸಲಾಗಿದ್ದ 58 ವರ್ಷದ ಮಹಿಳೆ ಕೂಡಾ ಕೊರೊನಾಗೆ ಬಲಿಯಾಗಿದ್ದಾರೆ.

50 ವರ್ಷದ ಮತ್ತೊಬ್ಬ ವ್ಯಕ್ತಿಯೂ ಕೊರೊನಾಗೆ ಬಲಿಯಾಗಿದ್ದು, ಜೂನ್ 12ರಂದು ಆಸ್ಪತ್ರೆಗೆ ದಾಖಲಾಗಿದ್ದರು. ‌ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆಯೊಂದಿಗೆ ಸೋಂಕಿಗೆ ಬಲಿಯಾದವರ ಸಂಖ್ಯೆಯೂ ಏರಿಕೆ ಆಗ್ತಿದೆ. ಬೆಂಗಳೂರು ಒಂದರಲ್ಲೇ 32 ಮಂದಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 84ಕ್ಕೆ ಏರಿಕೆ ಆಗಿದೆ.


ABOUT THE AUTHOR

...view details