ಕರ್ನಾಟಕ

karnataka

ETV Bharat / city

ಒಮಿಕ್ರಾನ್​ ಹರಡಲು ಕಾರಣವಾಯ್ತಾ ದೆಹಲಿ ಮ್ಯಾರೇಜ್​​ ಪಾರ್ಟಿ... ಐವರ ಟ್ರಾವೆಲ್​ ಹಿಸ್ಟರಿ ಹೀಗಿದೆ ನೋಡಿ! - ಕರ್ನಾಟಕದಲ್ಲಿ ಐದು ಒಮಿಕ್ರಾನ್ ಕೇಸ್​

ಕರ್ನಾಟಕದಲ್ಲಿ ಮತ್ತೆ ಐದು ಹೊಸ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ಇದರಲ್ಲಿ ಇಬ್ಬರಿಗೆ ದೆಹಲಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರಿಂದ ಸೋಂಕು ಕಾಣಿಸಿಕೊಂಡಿದೆ.

Five new Omicron case in Karnatka
Five new Omicron case in Karnatka

By

Published : Dec 17, 2021, 12:43 AM IST

ಬೆಂಗಳೂರು:ರಾಜ್ಯದಲ್ಲಿ ಇಲ್ಲಿಯವರೆಗೆ ಕೋವಿಡ್​-19ನ ಹೊಸ ರೂಪಾಂತರಿ ಒಮಿಕ್ರಾನ್‌ನ ಒಟ್ಟು ಎಂಟು ಪ್ರಕರಣಗಳು ವರದಿಯಾಗಿವೆ. ಎಂಟು ಪ್ರಕರಣಗಳ ಪೈಕಿ ನಾಲ್ಕು ಅಪಾಯದಲ್ಲಿರುವ (ಹೈರಿಸ್ಕ್) ದೇಶಗಳಿಂದ ಬಂದಿದ್ದರೆ ಇನ್ನುಳಿದ ಮೂವರು ದೆಹಲಿಯಿಂದ ಪ್ರಯಾಣ ಮಾಡಿರುವ ಟ್ರಾವೆಲ್​ ಹಿಸ್ಟರಿ ಹೊಂದಿದ್ದಾರೆ. ಉಳಿದ ಒಬ್ಬ ಅಂತಾರಾಷ್ಟ್ರೀಯ ಪ್ರಯಾಣಿಕ ದಕ್ಷಿಣ ಆಫ್ರಿಕಾದಿಂದ ಮರಳಿದ್ದಾನೆ. ಈ ಒಂದು ಪ್ರಕರಣವನ್ನು ಹೊರತುಪಡಿಸಿ, ಉಳಿದ ಎಲ್ಲ ಸೋಂಕಿತರನ್ನ ಕ್ವಾರೈಂಟನ್ ಮಾಡಲಾಗಿದೆ.

ಓಮಿಕ್ರಾನ್ ಪೀಡಿತರ ಪ್ರಸ್ತುತ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಯಾರಲ್ಲೂ ಗಂಭೀರ ಲಕ್ಷಣಗಳನ್ನು ಕಂಡು ಬಂದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಹೈರಿಸ್ಕ್ ದೇಶಗಳಿಂದ ಬರುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯ ತಪಾಸಣೆ, ಕ್ವಾರಂಟೈನ್ ಮತ್ತು ಪುನರಾವರ್ತಿತ RT-PCR ಪರೀಕ್ಷೆಯಂತಹ ಇತರ ಅಗತ್ಯ ಕ್ರಮಗಳನ್ನು ಅನುಸರಿಸಲು ಬದ್ಧವಾಗಿದೆ.

ಹೀಗಾಗಿ, ಸಾರ್ವಜನಿಕರು ಅನಾವಶ್ಯಕ ವದಂತಿಗಳಿಗೆ ಅಥವಾ ಊಹಾಪೋಹಗಳಿಗೆ ಕಿವಿಗೊಡಬಾರದೆಂದು ಪ್ರಕಟಣೆ ಹೊರಡಿಸಿದೆ.‌

ಕೇಸ್ ಹಿಸ್ಟರಿ ಹೀಗಿದೆ

ಪ್ರಕರಣ 4:19 ವರ್ಷ ವಯಸ್ಸಿನ ಯುವತಿ ಯುಕೆಯಿಂದ ಡಿಸೆಂಬರ್ 13ರಂದು ನೆಗಟಿವ್ ರಿಪೋರ್ಟ್ ನೊಂದಿಗೆ ಹಿಂದಿರುಗಿದ್ದರು. ಆದರೆ, ಬೆಂಗಳೂರಿನ ಏರ್​ಪೋರ್ಟ್​ನಲ್ಲಿ ಪರೀಕ್ಷಿಸಿದಾಗ ಪಾಸಿಟಿವ್ ದೃಢಪಟ್ಟಿದೆ. ಕೂಡಲೇ ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.‌ ಬಳಿಕ ಆಕೆಯ ಮನವಿ ಮೇರೆಗೆ ಖಾಸಗಿ ಆಸ್ಪತ್ರೆಗೆ ಡಿಸೆಂಬರ್ 14 ರಂದು ಸ್ಥಳಾಂತರ ಮಾಡಲಾಗಿದೆ. ರೋಗದ ಲಕ್ಷಣಗಳು ಗಂಭೀರವಾಗಿ ಇರದೇ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಇನ್ನು ಈಕೆಗೆ ಯಾವುದೇ ಸಂಪರ್ಕಿತ ಹಿಸ್ಟರಿ ಇಲ್ಲ.

ಇದನ್ನೂ ಓದಿರಿ:Omicron: ಕರ್ನಾಟಕದಲ್ಲಿ ಮತ್ತೆ 5 ಒಮಿಕ್ರಾನ್ ಪತ್ತೆ, ಬೆಳಗಾವಿಯಲ್ಲೂ ಕಂಡುಬಂತು ಹೊಸ ರೂಪಾಂತರಿ!

ಪ್ರಕರಣ 5: 52 ವರ್ಷ ವಯಸ್ಸಿನ ವ್ಯಕ್ತಿ ನೈಜಿರೀಯಾದಿಂದ ಡಿಸೆಂಬರ್ 13ರಂದು ನೆಗಟಿವ್ ರಿಪೋರ್ಟ್​ನೊಂದಿಗೆ ಹಿಂದಿರುಗಿದ್ದರು. ಆದರೆ, ಬೆಂಗಳೂರಿನ ಏರ್​ಪೋರ್ಟ್​ನಲ್ಲಿ ಪರೀಕ್ಷಿಸಿದಾಗ ಪಾಸಿಟಿವ್ ದೃಢಪಟ್ಟಿದೆ. ಆತ ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣ ಮಾಡಬೇಕಿದ್ದ ಕಾರಣ ಅಲ್ಲೇ ಪ್ರತ್ಯೇಕಿಸಲಾಗಿದೆ. ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರನ್ನ ಕ್ವಾರೈಂಟೈನ್ ಮಾಡಲಾಗಿದ್ದು, ಆರ್​ಟಿಪಿಆರ್​ ಟೆಸ್ಟ್ ಮಾಡಲಾಗಿದೆ.

ಪ್ರಕರಣ 6: 70 ವರ್ಷ ವಯಸ್ಸಿನ ವೃದ್ಧೆ ದೆಹಲಿಗೆ ಪ್ರಯಾಣ ಮಾಡಿದ ಹಿಸ್ಟರಿ ಹೊಂದಿದ್ದು, ಬೆಂಗಳೂರಿನ ಮಹದೇವಪುರದ ಖಾಸಗಿ ಲ್ಯಾಬ್​ನಲ್ಲಿ ಡಿಸೆಂಬರ್ 5 ರಂದು ಟೆಸ್ಟ್ ಮಾಡಿಸಿದರು‌ ಈ ವೇಳೆ ಪಾಸಿಟಿವ್ ಬಂದಿದೆ. ಎರಡು ಡೋಸ್ ವ್ಯಾಕ್ಸಿನೇಷನ್‌ ಕೂಡ ಆಗಿದೆ‌. ಡಿಸೆಂಬರ್ 3 ರಂದು ದೆಹಲಿಯಲ್ಲಿ ಮದುವೆ ಸಮಾರಂಭಕ್ಕಾಗಿ ಹೋಗಿದ್ದರು. ಒಮಿಕ್ರಾನ್ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಇವರಿಗೆ ಇದೀಗ ಸೋಂಕು ತಗುಲಿದೆ. ಸದ್ಯ ರೋಗ ಲಕ್ಷಣ ಹೊಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂವರಲ್ಲಿ ಇಬ್ಬರಿಗೆ ಪಾಸಿಟಿವ್ ಆಗಿದ್ದು, ದ್ವಿತೀಯ ಸಂಪರ್ಕಿತರ ವರದಿ ನೆಗಟಿವ್ ಬಂದಿದೆ.

ಪ್ರಕರಣ 7: 36 ವರ್ಷ ವಯಸ್ಸಿನ ವ್ಯಕ್ತಿ ದೆಹಲಿಗೆ ಪ್ರಯಾಣ ಮಾಡಿದ ಹಿಸ್ಟರಿ ಹೊಂದಿದ್ದು, ಬೆಂಗಳೂರಿನ ಮಹದೇವಪುರದ ಖಾಸಗಿ ಲ್ಯಾಬ್​ನಲ್ಲಿ ಡಿಸೆಂಬರ್ 5 ರಂದು ಟೆಸ್ಟ್ ಮಾಡಿಸಿದರು‌ ಈ ವೇಳೆ ಪಾಸಿಟಿವ್ ಬಂದಿದೆ. ಎರಡು ಡೋಸ್ ವ್ಯಾಕ್ಸಿನೇಷನ್‌ ಕೂಡ ಆಗಿದೆ‌. ಡಿಸೆಂಬರ್ 3 ರಂದು ದೆಹಲಿಯಲ್ಲಿ ಮದುವೆ ಸಮಾರಂಭಕ್ಕಾಗಿ ಹೋಗಿದ್ದರು. ಒಮಿಕ್ರಾನ್ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಇವರಿಗೆ ಇದೀಗ ಸೋಂಕು ತಗುಲಿದೆ. ಸದ್ಯ ಎಸಿಸ್ಟಂಮ್ಯಾಟಿಕ್ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈತ ವೃದ್ದೆಯ ಕುಟುಂಬದವರೇ ಆಗಿದ್ದಾರೆ.

ಪ್ರಕರಣ 8: 33ವರ್ಷ ವಯಸ್ಸಿನ ವ್ಯಕ್ತಿ ದಕ್ಷಿಣ ಆಫ್ರಿಕಾದಿಂದ ದೆಹಲಿಗೆ ನಂತರ ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಮಾಡಿದ ಹಿಸ್ಟರಿ ಹೊಂದಿದ್ದಾನೆ. ದೆಹಲಿ ಏರ್​ಪೋರ್ಟ್​ನಲ್ಲಿ ನೆಗಟಿವ್ ರಿಪೋರ್ಟ್ ವರದಿಯಾಗಿದ್ದು, ಐಸೋಲೇಟ್ ಆಗಿದ್ದರು. ಆದರೆ, ಡಿಸೆಂಬರ್ 10 ರಂದು ರೋಗದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಪರೀಕ್ಷೆಗೊಳಪಟ್ಟಾಗ ಸೋಂಕು ದೃಢಪಟ್ಟಿದೆ. ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ 4 ಜನರು ಹಾಗೂ 25 ದ್ವಿತೀಯ ಸಂಪರ್ಕಿತರ ವರದಿ ನೆಗಟಿವ್ ಬಂದಿದೆ.

ABOUT THE AUTHOR

...view details