ಬೆಂಗಳೂರು : ಐಟಿ (ಆದಾಯ ತೆರಿಗೆ) ಅಧಿಕಾರಿಗಳ ಸೋಗಿನಲ್ಲಿ ಆದಾಯ ತೆರಿಗೆ ಪಾವತಿಸಿಲ್ಲ ಎನ್ನುವ ನೆಪವೊಡ್ಡಿ ಮನೆಯೊಂದರ ಮೇಲೆ ದಾಳಿ ಮಾಡಿರುವ ಘಟನೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.
ಪ್ರಕರಣದ ಸಂಬಂಧ ಪೊಲೀಸರು ಐದು ಜನ ಆರೋಪಿಗಳನ್ನು ಬಂಧಿಸಿ ಹಣ, ಕಾರು, ಗನ್ ವಶಕ್ಕೆ ಪಡೆದಿದ್ದಾರೆ. ಎಂ. ಮಂಜುನಾಥ್, ಮಹಮ್ಮದ್ ಶೋಯಬ್, ಟಿ.ಸಿ ಪ್ರಶಾಂತ್ ಕುಮಾರ್, ವೈ.ಸಿ ದುರ್ಗೇಶ್, ಕೆ.ಕುಮಾರ್ ಬಂಧಿತರು.
ಆದಾಯ ತೆರಿಗೆ ಪಾವತಿಸದ ಹಿನ್ನೆಲೆ ದಾಳಿ ನಡೆಸಲಾಗುತ್ತಿದೆ ಎಂದು ಹೇಳಿಕೊಂಡು ಸಂಜಯನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಮನೆ ಮಾಲೀಕ ಆದಾಯ ತೆರಿಗೆ ಪಾವತಿಸಿಲ್ಲ ಎಂಬ ಮಾಹಿತಿ ಖದೀಮರಿಗೆ ಮೊದಲೇ ದೊರೆತಿತ್ತು.
ಮನೆಯಲ್ಲಿದ್ದವರನ್ನು ಹೆದರಿಸಿ ಮನೆಯಲ್ಲಿದ್ದ 3.5 ಲಕ್ಷ ರೂಪಾಯಿ ನಗದು ಮತ್ತು ಏರ್ ಗನ್ ಅನ್ನು ಆರೋಪಿಗಳು ವಶಕ್ಕೆ ಪಡೆದು ಪರಾರಿಯಾಗಿದ್ದರು ಎಂದು ಡಿಸಿಪಿ ವಿನಾಯಕ್ ಪಾಟೀಲ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.